ಪದ್ಮನಾಭಸ್ವಾಮಿ ದೇವಳದಲ್ಲಿ ಚೂಡಿದಾರಕ್ಕೆ ಹೈಕೋರ್ಟ್ ನಕಾರ
ತಿರುವನಂತಪುರ,ಡಿ.8: ಮಹಿಳೆಯರು ಚೂಡಿದಾರ್ ಧರಿಸಿ ತಿರುವನಂತಪುರದ ಶ್ರೀಪದ್ಮನಾಭಸ್ವಾಮಿ ದೇವಸ್ಥಾನವನ್ನು ಪ್ರವೇಶಿಸಲು ಅವಕಾಶವಿಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ಇಂದು ತೀರ್ಪು ನೀಡಿದೆ. ದೇವಸ್ಥಾನದಲ್ಲಿಯ ವಿಧಿವಿಧಾನಗಳಿಗೆ ಸಂಬಂಧಿಸಿದಂತೆ ಮುಖ್ಯ ಅರ್ಚಕರ ನಿರ್ಧಾರ ಅಂತಿಮವಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.
ನ.29ರಂದು ಹಿರಿಯ ಅಧಿಕಾರಿ ಕೆ.ಎನ್.ಸತೀಶ ಅವರು ಸಂಪ್ರದಾಯವನ್ನು ಮುರಿದು ಮಹಿಳೆಯರು ಚೂಡಿದಾರ್ ಧರಿಸಿ ದೇವಸ್ಥಾನವನ್ನು ಪ್ರವೇಶಿಸಲು ಅವಕಾಶ ಕಲ್ಪಿಸಿದ್ದರು. ಹಾಗೆ ಮಾಡುವಾಗ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಹರಿಪಾಲ್ ಅವರ ಅಭಿಪ್ರಾಯವನ್ನೂ ಕಡೆಗಣಿಸಿದ್ದರು. ಸತೀಶರ ನಿರ್ಧಾರವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಎರಡು ಅರ್ಜಿಗಳು ದಾಖಲಾಗಿದ್ದವು.
ಅಧಿಕಾರಿ ಕೇವಲ ದೇವಸ್ಥಾನದ ಸಿಬ್ಬಂದಿಯಾಗಿರುವು ದರಿಂದ ಸಂಪ್ರದಾಯಗಳಲ್ಲಿ ಬದಲಾವಣೆಗಳನ್ನು ಮಾಡುವ ಹಕ್ಕು ಅವರಿಗಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.
Next Story





