ಮುಖ್ಯ ನ್ಯಾಯಾಧೀಶರಿಗೆ ನಿಗದಿತ ಸೇವಾವಧಿ: ಸಮಿತಿ ಶಿಫಾರಸು
ಹೊಸದಿಲ್ಲಿ, ಡಿ.8: ಸುಪ್ರೀಂಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಹೆಚ್ಚಿಸಬೇಕು ಮತ್ತು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರಿಗೆ ನಿಗದಿತ ಸೇವಾವಧಿ ಇರಬೇಕು ಎಂದು ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ. ಹೈಕೋರ್ಟ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ವಿಷಯದಲ್ಲಿ ಸಮಯ ಮಿತಿ ನಿಗದಿಗೊಳಿಸದಿರುವ ಬಗ್ಗೆ ಕೇಂದ್ರ ಸರಕಾರ ಮತ್ತು ನ್ಯಾಯಾಂಗವನ್ನು ಸಮಿತಿ ಟೀಕಿಸಿದೆ. ವೈಯಕ್ತಿಕ ಮತ್ತು ಕಾನೂನು ಕುರಿತಾದ ಸಂಸದೀಯ ಸ್ಥಾಯೀ ಸಮಿತಿಯ ವರದಿಯನ್ನು ಇಂದು ಮಂಡಿಸಲಾಯಿತು. ನ್ಯಾಯಾಧೀಶರ ನೇಮಕ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಿರಬೇಕು. ಯಾವ ನೆಲೆಯಲ್ಲಿ ನೇಮಕಕ್ಕೆ ಪರಿಗಣಿಸಲಾಗಿಲ್ಲ ಎಂಬುದನ್ನು ಸುಪ್ರೀಂಕೋರ್ಟ್ ಸಮಿತಿಯು ಅಭ್ಯರ್ಥಿಗೆ ತಿಳಿಸಬೇಕು. ಸುಪ್ರೀಂಕೋರ್ಟ್ ಸಮಿತಿ ನೇಮಕಾತಿ ವಿಷಯದಲ್ಲಿ ಮಾಡಿರುವ ಶಿಫಾರಸನ್ನು ಸೂಕ್ತ ಕಾರಣ ನೀಡದೆ ಸರಕಾರ ನಿರಾಕರಿಸಬಾರದು ಎಂದು ತಿಳಿಸಿದೆ.
Next Story





