ಪನ್ನೀರ್‌ಸೆಲ್ವಂ-ಶಶಿಕಲಾ ಮಾತುಕತೆ
ಚೆನ್ನೈ, ಡಿ.8: ತಮಿಳುನಾಡಿನ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಇಂದು ಪೂರ್ವಾಧಿಕಾರಿಣಿ ಜೆ. ಜಯಲಲಿತಾರ ನಂಬಿಗಸ್ಥೆ ಶಶಿಕಲಾ ನಟರಾಜನ್‌ರೊಂದಿಗೆ ಪೊಯೆಸ್ ಗಾರ್ಡನ್‌ನ ಜಯಾ ನಿವಾಸದಲ್ಲಿ ಸುಮಾರು 2 ತಾಸುಗಳ ಕಾಲ ಮಾತುಕತೆ ನಡೆಸಿದ್ದಾರೆ. ಡಿ.5ರಂದು ಜಯಲಲಿತಾ ನಿಧನರಾಗಿರುವ ಹಿನ್ನೆಲೆಯಲ್ಲಿ ನಡೆದ ಈ ಸಭೆಯಲ್ಲಿ ಯಾವ ವಿಚಾರ ಚರ್ಚಿಸಲಾಯಿತೆಂದು ತಿಳಿದುಬಂದಿಲ್ಲ.
ಜಯಾ ಕಾಲವಾದ ಬಳಿಕ ಒ. ಪನ್ನೀರ್ ಸೆಲ್ವಂ ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡಿದ್ದಾರಾದರೂ ಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಯಾರಾಗಲಿದ್ದಾರೆಂಬುದು ಇದುವರೆಗೆ ಸ್ಪಷ್ಟವಾಗಿಲ್ಲ.
Next Story





