ಶಿರಾಡಿ: ಟೆಂಪೊ ಟ್ರಾವೆಲರ್-ಟೆಂಪೊ ಢಿಕ್ಕಿ

ಕಡಬ, ಡಿ.9: ಟೆಂಪೊ ಟ್ರಾವೆಲರ್ ರೊಂದು ಎದುರಿನಿಂದ ಬರುತ್ತಿದ್ದ ಟೆಂಪೊವೊಂದಕ್ಕೆ ಢಿಕ್ಕಿಯಾದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಮೈಸೂರು ಮೂಲದ ಕುಟುಂಬ ಸದಸ್ಯರು ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಟೆಂಪೂ ಟ್ರಾವೆಲರ್ ಟೆಂಪೊವೊಂದಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಹಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು ಸಕಲೇಶಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story





