ಬೊಳ್ಳೂರು ಹಳೆಯಂಗಡಿಯಲ್ಲಿ ಹುಖೂಖೂಲ್ ಇಬಾದ್ ಸ್ನೇಹ ಸಮ್ಮಿಲನ

ಮಂಗಳೂರು, ಡಿ.6: ಸುರತ್ಕಲ್ ಹಾಗೂ ಉಡುಪಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ ಮೆಂಟ್ ಕಮಿಟಿಯ ಜಂಟಿ ಆಶ್ರಯದಲ್ಲಿ ಹುಖೂಕುಲ್ ಇಬಾದ್ ಅಭಿಯಾನದ ಅಂಗವಾಗಿ ಸ್ನೇಹ ಸಮ್ಮಿಲನವು ಡಿಸೆಂಬರ್ 6 ಮಂಗಳವಾರದಂದು ಪೂರ್ವಾಹ್ನ 9.30 ಗಂಟೆಗೆ ಬೊಳ್ಳೂರು ಹಳೆಯಂಗಡಿಯ ದಾರುಲ್ ಉಲೂಂ ಮದ್ರಸದಲ್ಲಿ ನಡೆಯಿತು. ಚೊಕ್ಕಬೆಟ್ಟು ಮಸೀದಿ ಖತೀಬ್ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುರತ್ಕಲ್ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿ ಅಧ್ಯಕ್ಷತೆ ವಹಿಸಿದ್ದರು.
ಹುಖೂಖುಲ್ ಇಬಾದ್-ಮನುಕುಲದ ಸೇವೆ ಎಂಬ ವಿಷಯದಲ್ಲಿ ಸಮಸ್ತ ಮುಶಾವರ ಕರ್ನಾಟಕ ಸದಸ್ಯ ಅಲ್ಹಾಜ್ ಇಬ್ರಾಹಿಂ ಬಾಖವಿ ಕೆ.ಸಿ ರೋಡ್ ಮತ್ತು ಟ್ಯಾಲೆಂಟ್ ಸಲಹೆಗಾರ ಹಾಜಿ ರಫೀಕ್ ಮಾಸ್ಟರ್ ತರಗತಿ ನಡೆಸಿದರು. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಉಮರ್ ದಾರಿಮಿ ಪಟ್ಟೋರಿ, ದ.ಕ ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಐ.ಮೊಯ್ದಿನಬ್ಬ ಹಾಜಿ, ಸುರತ್ಕಲ್ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ಲ ದಾರಿಮಿ, ಉಡುಪಿ ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ನ ಅಧ್ಯಕ್ಷ ಎಂ.ಪಿ ಮೊದಿನಬ್ಬ, ಶಾಫಿ ಜುಮಾ ಮಸೀದಿ ಮುಲ್ಕಿ ಖತೀಬ್ ಇಬ್ರಾಹಿಂ ದಾರಿಮಿ, ಬೊಳ್ಳೂರು ಮಸೀದಿಯ ಅಧ್ಯಕ್ಷ ಎ.ಕೆ ಜಿ ಅಬ್ದುಲ್ ಖಾದರ್, ಮುಫತ್ತಿಶ್ ಖಾಸಿಂ ಮುಸ್ಲಿಯಾರ್, ದ.ಕ ಜಿಲ್ಲಾ ಎಸ್ಕೆಎಸ್ಸೆಸೆಫ್ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಬದ್ರುದ್ದೀನ್ ದಾರಿಮಿ ಕಾರ್ನಾಡ್, ಹಸನ್ ಬಾವಾ ಹಾಜಿ ಕೊಳ್ನಾಡ್, ಅಹ್ಮದ್ ಬಾವಾ ಹಾಜಿ ಇಡ್ಯಾ, ಬಿ.ಎಮ್.ಲಿಯಾಖತ್ ಮುಲ್ಕಿ, ಎಮ್.ಕೆ.ಅಮಾನುಲ್ಲಾ ಮುಲ್ಕಿ, ಮೊಯ್ದಿನ್ ಚೊಕ್ಕಬೆಟ್ಟು, ಅ ಮೊನಾಕ ಕೊಳ್ನಾಡು, ಶರೀಫ್ ಬಾಖವಿ, ಮೊಹಮ್ಮದ್ ಹುಸೈನ್, ಅಬೂಬಕ್ಕರ್ ಬೊಳ್ಳೂರು, ಶರೀಫ್ ಫೈಝಿ ಅಂಗರಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸುರತ್ಕಲ್ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ ಮೆಂಟ್ ವತಿಯಿಂದ ಸಮಾಜ ಸೇವಕ ಟ್ಯಾಲೆಂಟ್ ಸಲಹೆಗಾರ ರಫೀಕ್ ಮಾಸ್ಟರ್ ಅವರನ್ನು ಸನ್ಮಾನಿಸಲಾಯಿತು. ಬೊಳ್ಳೂರು ಜುಮಾ ಮಸೀದಿ ಖತೀಬ್ ಅಝರ್ ಫೈಝಿ ದುಅ ನೆರವೇರಿಸಿದರು. ಟ್ಯಾಲೆಂಟ್ ಸಲಹೆಗಾರ ಡಿ.ಅಬ್ದುಲ್ ಹಮೀದ್ ಕಣ್ಣೂರು ಪ್ರಸ್ತಾವನೆಗೈದರು. ಸುರತ್ಕಲ್ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಪ್ರ ಕಾರ್ಯದರ್ಶಿ ಹನೀಫ್ ದಾರಿಮಿ ಇಡ್ಯಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಘಟಕ ಟ್ಯಾಲೆಂಟ್ ನ ಅಸ್ಪರ್ ಹುಸೈನ್ ಧನ್ಯವಾದಗೈದರು. ಸದರಿ ಕಾರ್ಯಕ್ರಮದಲ್ಲಿ ಸುರತ್ಕಲ್ ಮತ್ತು ಉಡುಪಿ ರೇಂಜ್ ಗೊಳಪಟ್ಟ ಎಲ್ಲಾ ಮಸೀದಿಗಳ ಖತೀಬರು, ಮದ್ರಸ ಅದ್ಯಾಪಕರು ಮತ್ತು ಮದ್ರಸ ಮ್ಯಾನೇಜ್ಮೆಂಟ್ ಸಮಿತಿಯವರು ಭಾಗವಹಿಸಿದ್ದರು.







