ಸೌದಿ-ಬಹರೈನ್ ನಡುವೆ ಇನ್ನೊಂದು ಸೇತುವೆ ನಿರ್ಮಾಣ

ರಿಯಾದ್,ಡಿ.9: ಉಭಯ ರಾಷ್ಟ್ರಗಳ ನಡುವೆ ಕಿಂಗ್ ಫಹ್ದ್ ಸೇತುವೆಗೆ ಸಮಾನಾಂತರವಾಗಿ ಹೊಸ ಸೇತುವೆಯೊಂದರ ನಿರ್ಮಾಣ ಪ್ರಸ್ತಾವನೆಯನ್ನು ಪರಿಶೀಲಿಸಲು ಸೌದಿ ಅರೇಬಿಯಾ ಮತ್ತು ಬಹರೈನ್ ಒಪ್ಪಿಕೊಂಡಿವೆ.
ನೂತನ ಸೇತುವೆಯನ್ನು ಕಿಂಗ್ ಹಮದ್ ಸೇತುವೆಯೆಂದು ಹೆಸರಿಸಲಾಗುವುದು ಎಂದು ಗುರುವಾರ ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಸೇತುವೆ ನಿರ್ಮಾಣ ಯೋಜನೆಗೆ ಖಾಸಗಿ ಕ್ಷೇತ್ರವು ಹಣವನ್ನೊದಗಿಸಲಿದೆ ಎಂದೂ ಅದು ಹೇಳಿದೆ.
ಪ್ರಸಕ್ತ ಕಿಂಗ್ ಫಹ್ದ್ ಸೇತುವೆ ಸೌದಿ ಅರೇಬಿಯಾ ಮತ್ತು ಬಹರೈನ್ ಅನ್ನು ಸಂಪರ್ಕಿಸುವ ಏಕಮಾತ್ರ ಕೊಂಡಿಯಾಗಿದೆ. ಅದು 1986ರಲ್ಲಿ ನಿರ್ಮಾಣಗೊಂಡಿತ್ತು.

Next Story





