ವಿಕಲಚೇತನರಿಗೆ ಕಡ್ಡಾಯ ಶಿಕ್ಷಣ, ಬದುಕುವ ವ್ಯವಸ್ಥೆಯನ್ನು ಕಲ್ಪಿಸಬೇಕು: ಡಾ.ಕುರಿಯನ್
.jpg)
ಮೂಡುಬಿದಿರೆ, ಡಿ.9: ವಿಕಲಚೇತನರ ಬಗ್ಗೆ ಅನುಕಂಪ ಬೇಡ. ಸಮಾಜದಲ್ಲಿ ಎಲ್ಲರಂತೆ ಸಕ್ರಿಯರಾಗಬೇಕಾದರೆ ಅವರಿಗೆ ಅವಕಾಶ ಮತ್ತು ಪ್ರೋತ್ಸಾಹಗಳು ಅಗತ್ಯವಾಗಿಬೇಕು. ಸರಕಾರ ಅವರಿಗೆ ರೂ.500 ಮಾಸಾಶನ ಕೊಟ್ಟ ಮಾತ್ರಕ್ಕೆ ಸರಕಾರದ ಜವಾಬ್ದಾರಿ, ಸಮಾಜದ ಹೊಣೆಗಾರಿಕೆ ಮುಗಿಯುವುದಿಲ್ಲ ಬದಲಾಗಿ ಕಡ್ಡಾಯ ಶಿಕ್ಷಣ, ಉತ್ತಮ ರೀತಿಯಲ್ಲಿ ಬದುಕುವ ವ್ಯವಸ್ಥೆ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಆಳ್ವಾಸ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ಹೇಳಿದರು.
ಮೂಡುಬಿದಿರೆ ಅವರು ಆದರ್ಶ ಮತ್ತು ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮ ಇದರ ಆಶ್ರಯದಲ್ಲಿ ಗುರುವಾರ ಸಮಾಜ ಮಂದಿರದಲ್ಲಿ ನಡೆದ ಅಂತರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಅಂಗವಾಗಿ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಹಾಗೂ ಪೋಷಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಒಟ್ಟು ಜನಸಂಖ್ಯೆ0ುಲ್ಲಿ ಶೇಕಡಾ 2.1 ಜನರು ವಿಶೇಷ ಸಾಮರ್ಥ್ಯವುಳ್ಳವರಾಗಿದ್ದಾರೆ. ಇವರ ಬಗ್ಗೆ ದೇಶದಲ್ಲಿ ಸರಿಯಾದ ನೀತಿ, ನಿಯಮಾವಳಿಗಳಿಲ್ಲ. ವಿಕಲಚೇತನರನ್ನು ದೇಶ, ಮನೆ ಮತ್ತು ಊರಿನಲ್ಲಿ ನೋಡುವ ಧೋರಣೆಗಳು ಬದಲಾಗುವ ಮೂಲಕ ಮಕ್ಕಳಲ್ಲಿ ಆತ್ಮಾಭಿಮಾನ ಮೂಡಲಿ ಎಂದು ಹೇಳಿದರು. ಅಬ್ಬಾಸ್ ಸಾ ಮಿಲ್‌ನ ಮಾಲಕ ಮಹಮ್ಮದ್ ಆಲಿ ಅಬ್ಬಾಸ್ ಮುಖ್ಯ ಅತಿಥಿಯಾಗಿ ಮಾತನಾಡಿ ವಿಶೇಷ ಸಾಮರ್ಥ್ಯವುಳ್ಳ ಜನರು ಜಗತ್ತಿನ ಶ್ರೇಷ್ಠ ಸಂಪತ್ತು. ಜಗತ್ತಿನಲ್ಲಿ ನಡೆದ ಅನೇಕ ಸಂಶೋಧನೆ, ಸಾಧನೆಗಳಲ್ಲಿ ಇಂತಹ ವಿಶೇಷ ಸಾಮರ್ಥ್ಯವುಳ್ಳವರ ಹೆಸರನ್ನು ಕೇಳಿದ್ದೇವೆ. ರವೀಂದ್ರ ಜೈನ್‌ಗೆ ಕಣ್ಣು ಕಾಣದಿದ್ದರೂ ಆತ ಶ್ರೇಷ್ಠ ಸಂಗೀತ ನಿರ್ದೇಶಕನಾದ, ಸುಧಾಚಂದ್ರನ್ ಎರಡೂ ಕಾಲುಗಳನ್ನು ಕಳಕೊಂಡರು ಉತ್ತಮ ನೃತ್ಯಗಾರ್ತಿಯಾಗಿ ಹೆಸರು ಪಡೆದಿದ್ದಾರೆ ಎಂದರು.
ವಿಶೇಷ ಗೌರವ : ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿರುವ ವೇಣೂರು ಮೂಡುಕೋಡಿಯ ಬಾಲಕ ಗಣೇಶ್ ಪ್ರಸಾದ್ ಶೆಟ್ಟಿ0ುನ್ನು ಗೌರವಿಸಲಾಯಿತು. ವಿಕಲಚೇತನರ ಜಿಲ್ಲಾ ಕಲ್ಯಾಣಾಧಿಕಾರಿ ಶೋಭಾ.ಪಿ ಅಧ್ಯಕ್ಷತೆ ವಹಿಸಿದರು. ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆಯುಷ್ ಆರೋಗ್ಯಾಧಿಕಾರಿ ಶಹನಾಝ್ ಹಮೀದ್, ಉದ್ಯಮಿ ಹಸ್ದುಲ್ಲಾ ಇಸ್ಮಾಯಿಲ್, ಆಳ್ವಾಸ್ ಸಮಾಜಕಾರ್ಯ ಕಾಲೇಜಿನ ಉಪನ್ಯಾಸಕಿ ಶೆರ್ಲಿ .ಟಿ ಬಾಬು, ವಾಟ್ಸನ್ ಅರುಲ್ ಸಿಂಗ್, ಆಳ್ವಾಸ್ ಫಿಸಿಯೋಥೆರಫಿ ವಿಭಾಗದ ಡಾ.ಸೆಲಿನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಲತಾ ಸ್ವಾಗತಿಸಿದರು. ಆದರ್ಶ ಸಂಸ್ಥೆಯ ನಿರ್ದೇಶಕ ಜೇಕಬ್ ವರ್ಗೀಸ್ ಪ್ರಾಸ್ತಾವಿಕ ಮಾತನಾಡಿದರು. ಜಯಶ್ರೀ ವರದಿ ವಾಚಿಸಿದರು. ಲೋನಾ ಡಿಸೋಜಾ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ವಿಶೇಷ ಮಕ್ಕಳು ಮತ್ತು ಪೋಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಇದಕ್ಕೂ ಮೊದಲು ಬೆಳಗ್ಗೆ ಮೂಡುಬಿದಿರೆ ಲೇಬರ್ ಶಾಲಾ ಬಳಿಯಿಂದ ಸಮಾಜ ಮಂದಿರದವರೆಗೆ ವಿಕಲಚೇತನರು, ವಿಶೇಷ ಮಕ್ಕಳ ಪೋಷಕರು ಹಾಗೂ ಹಿತೈಷಿಗಳಿಂದ ಮೆರವಣಿಗೆ ನಡೆಯಿತು.







