Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಎಂಆರ್‌ಐ ಯಂತ್ರವನ್ನು 100 ಪಟ್ಟು...

ಎಂಆರ್‌ಐ ಯಂತ್ರವನ್ನು 100 ಪಟ್ಟು ಅಗ್ಗವಾಗಿಸುವ ನೂತನ ಸಂಶೋಧನೆ

ವಾರ್ತಾಭಾರತಿವಾರ್ತಾಭಾರತಿ9 Dec 2016 2:55 PM IST
share
ಎಂಆರ್‌ಐ ಯಂತ್ರವನ್ನು 100 ಪಟ್ಟು ಅಗ್ಗವಾಗಿಸುವ ನೂತನ ಸಂಶೋಧನೆ

ಮುಂಬೈ,ಡಿ.9: ಇಲ್ಲಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ರಿಸರ್ಚ್ (ಟಿಐಎಫ್‌ಆರ್)ನ ವಿಜ್ಞಾನಿಗಳ ನೂತನ ಸಂಶೋಧನೆಯು ಎಂಆರ್‌ಐ ಸ್ಕ್ಯಾನಿಂಗ್ ಯಂತ್ರಗಳನ್ನು 100 ಪಟ್ಟು ಅಗ್ಗವಾಗಿಸಲಿದೆ. ಇದರೊಂದಿಗೆ ಭವಿಷ್ಯದಲ್ಲಿ ರೋಗಿಗಳಿಗೆ ಎಂಆರ್‌ಐ ಸ್ಕ್ಯಾನಿಂಗ್ ವೆಚ್ಚವು ಕಡಿಮೆಯಾಗುವ ನಿರೀಕ್ಷೆಯಿದೆ.

ಬಿಸ್ಮತ್ ಲೋಹವು ಯಾವುದೇ ಪ್ರತಿರೋಧವಿಲ್ಲದೆ ವಿದ್ಯುತ್‌ನ್ನು ಪ್ರವಹಿಸುವ ಸಾಮರ್ಥ್ಯ ಹೊಂದಿರುವುದನ್ನು ವಿಜ್ಞಾನಿಗಳ ತಂಡವು ಕಂಡು ಹಿಡಿದಿದೆ. ತನ್ಮೂಲಕ ಬಿಸ್ಮತ್ ‘ಸೂಪರ್ ಕಂಡಕ್ಟರ್ ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ನೂತನ ಸಂಶೋಧನೆಯು ಲೋಹಗಳು ಹೇಗೆ ‘ಸೂಪರ್ ಕಂಡಕ್ಟರ್ ’ಆಗುತ್ತವೆ ಎನ್ನುವುದನ್ನು ವಿವರಿಸಿರುವ ನಾಲ್ಕು ದಶಕಗಳ ನೊಬೆಲ್ ಪ್ರಶಸ್ತಿ ಪುರಸ್ಕೃತ ಥಿಯರಿಯನ್ನು ಬದಲಿಸಲಿದೆ.

ಬಿಸ್ಮತ್ ಅತ್ಯಂತ ವೇಗದ ವಿದ್ಯುತ್ ವಾಹಕ ಎನ್ನುವುದನ್ನು ನಾವು ಕಂಡು ಹಿಡಿದಿದ್ದು, ಇದನ್ನು ವಿವರಿಸಲು ನಮಗೆ ನೂತನ ಥಿಯರಿ ಮತ್ತು ನೂತನ ವ್ಯವಸ್ಥೆಯ ಅಗತ್ಯವಿದೆ. ಅದು ಸಾಧ್ಯವಾದ ಬಳಿಕ ಸೂಪರ್ ಕಂಡಕ್ಟರ್‌ಗಳ ಹೊಸ ವರ್ಗವನ್ನು ನಾವು ಹೊಂದಬಹುದಾಗಿದೆ ಎಂದು ಟಿಐಎಫ್‌ಆರ್‌ನ ಪ್ರೊ.ಎಸ್.ರಾಮಕೃಷ್ಣನ್ ಹೇಳಿದರು.

ಸೂಪರ್ ಕಂಡಕ್ಟರ್ ಶೋಧಕ್ಕಾಗಿ ಹಲವಾರು ಜಾಗತಿಕ ಪ್ರಯತ್ನಗಳು ವಿಫಲಗೊಂಡಿರುವ ಹಿನ್ನೆಲೆಯಲ್ಲಿ ತನ್ನ ಸಂಶೋಧನೆಯು ಮೂಲಭೂತ ವೈಜ್ಞಾನಿಕ ಸಾಧನೆಯಾಗಿದೆ ಎಂದು ವಿಜ್ಞಾನಿಗಳ ತಂಡವು ಬಣ್ಣಿಸಿದೆ. ಬಿಸ್ಮತ್ ವಿದ್ಯುಚ್ಛಕ್ತಿಗೆ ಎಲ್ಲ ಪ್ರತಿರೋಧವನ್ನು ಕಳೆದೊಕೊಳ್ಳುವಂತಾಗಲು ವಿಜ್ಞಾನಿಗಳು ಅದನ್ನು ಅತ್ಯಂತ ಶೀತ ತಾಪಮಾನದಲ್ಲಿರಿಸುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ.

ಪ್ರಸಕ್ತ ಎಂಆರ್‌ಐ ಯಂತ್ರಗಳಲ್ಲಿ ನಿಯೊಬಿಂ-ಟಿಟಾನಿಯಂ ಮಿಶ್ರಲೋಹದಿಂದ ನಿರ್ಮಿಸಲಾದ ಸೂಪರ್ ಕಂಡಕ್ಟರ್‌ಗಳನ್ನು ಬಳಸಲಾಗುತ್ತಿದೆ. ಉತ್ತಮ ಎಂಆರ್‌ಐ ಯಂತ್ರಕ್ಕೆ 10 ಕೋ.ರೂ.ಗಳನ್ನು ತೆರಬೇಕಾಗುತ್ತದೆ.

ತಮ್ಮ ಸಂಶೋಧನೆಯನ್ನು ಎಂಆರ್‌ಐ ಯಂತ್ರದಲ್ಲಿ ಅಳವಡಿಸಲು ದೀರ್ಘ ಸಮಯ ಅಗತ್ಯವಾಗಬಹುದು,ಆದರೆ ಅದು ಯಂತ್ರವನ್ನು ಏನಿಲ್ಲವೆಂದರೂ 100 ಪಟ್ಟು ಅಗ್ಗವಾಗಿಸುತ್ತದೆ ಎಂಬ ಭರವಸೆಯನ್ನು ತಂಡವು ನೀಡಿದೆ.

  ಸದ್ಯಕ್ಕೆ ಬಿಸ್ಮತ್‌ನ ಸೂಪರ್ ಕಂಡಕ್ಟರ್ ಗುಣವನ್ನು ವಿವರಿಸಲು ಯಾವುದೇ ಥಿಯರಿಗಳಿಲ್ಲ. ಇತರ ಲೋಹಗಳಿಗೆ ಹೋಲಿಸಿದರೆ ಇದು ವಿಭಿನ್ನ ಬಗೆಯ ಸೂಪರ್ ಕಂಡಕ್ಟಿವಿಟಿಯಾಗಿದೆ. ಥಿಯರಿಸ್ಟ್‌ಗಳು ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಮತ್ತು ಹೊಸ ಥಿಯರಿಗಳು ಹೊರಹೊಮ್ಮಬಹುದು. ಈಗ ಸುಪರ್ ಕಂಡಕ್ಟಿಂಗ್ ಆಯಸ್ಕಾಂತದಿಂದಾಗಿ ಮಾತ್ರ ಎಂಆರ್‌ಐ ಸ್ಕಾನಿಂಗ್ ಸಾಧ್ಯವಾಗುತ್ತಿದೆ. ಹೀಗಾಗಿ ನೂತನ ಸಂಶೋಧನೆಯು ಕೆಲವು ವರ್ಷಗಳಲ್ಲಿ ಅನ್ವಯಗೊಳ್ಳಲಿದೆ ಎಂದು ಟಿಐಎಫ್‌ಆರ್‌ನ ಸಹಾಯಕ ಪ್ರೊಫೆಸರ್ ಡಾ.ಆರ್ಮುಗಂ ತಮಿಳವೇಲ್ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X