ಅರಬಿ ಭಾಷೆ ದಿನಾಚರಣೆ ಪ್ರಯುಕ್ತ ಪ್ರೌಢ ಹಾಗೂ ಕಾಲೇಜು ಮಟ್ಟದ ಪ್ರಬಂಧ ಸ್ಪರ್ಧೆ
ಮಂಗಳೂರು, ಡಿ.9: ಅಂತಾರಾಷ್ಟ್ರೀಯ ಅರಬಿ ಭಾಷೆ ದಿನಾಚರಣೆ ಪ್ರಯುಕ್ತ ತಲಾಪಡಿ ಅರಬಿಕ್ ಕಾಲೇಜು (ಸ್ಕೂಲ್ ಅಫ್ ಕುರ್ ಆನಿಕ್ ಸ್ಟಡೀಸ್ ) ಇದರ ವತಿಯಿಂದ "ಕರ್ನಾಟಕದಲ್ಲಿ ಅರಬಿ ಭಾಷೆ ಅಭಿವೃದ್ದಿ" ಎಂಬ ವಿಷಯದಲ್ಲಿ ಪ್ರೌಢ ಹಾಗೂ ಕಾಲೇಜು ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.
ಪ್ರಬಂಧವೂ 3-10 ಪುಟಗಳಿಗಂತ ಮೀರದೆ A4 ಕಾಗದಲ್ಲಿ ಕೈಬರಹದ ಮೂಲಕ ಹಾಗೂ ಕನ್ನಡ, ಅರಬಿ ಮತ್ತು ಇಂಗ್ಲಿಷ್ ಈ ಮೂರು ಭಾಷೆಗಳಲ್ಲಿ ಯಾವುದಾದರೂ ಒಂದು ಭಾಷೆಯಲ್ಲಿ ಬರೆಯಬಹುದು. ಪ್ರಬಂಧವು ಡಿಸೆಂಬರ್18ರೊಳಗಾಗಿ sqsarabiccollege2001@gmail.com ವಿಳಾಸಕ್ಕೆ ಕಳುಹಿಸಬೇಕು.
ಅಂಚೆಯ ಮೂಲಕ ಕಳುಹಿಸುವವರು ಅರಬಿಕ್ ಕಾಲೇಜು, (ಸ್ಕೂಲ್ ಅಫ್ ಕುರಾನಿಕ್ ಸ್ಟಡೀಸ್ ) ಕೆ.ಸಿ ನಗರ್, ತಲಪಾಡಿ ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.
ಪ್ರಬಂಧ ವಿಜೇತರಿಗೆ ಪ್ರಥಮ,ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
Next Story





