ಯುಎಇ ಎಕ್ಸ್‌ಚೇಂಜ್‌ನಿಂದ ಮೂರುಲಕ್ಷ ರೂ. ದೋಚಿದ ವಿದೇಶಿಯರು

ಇರಿಂಙಲಕ್ಕುಡ, ಡಿ. 9: ಡಾಲರ್ ಬದಲಾಯಿಸಲು ವಿದೇಶ ವಿನಿಮಯ ಕೇಂದ್ರಕ್ಕೆ ಬಂದ ವಿದೇಶಿಯರು ಮೂರುಲಕ್ಷ ರೂಪಾಯಿ ದೋಚಿದ ಘಟನೆ ಇರಂಞಲಕ್ಕುಡ ಯುಎಇ ಎಕ್ಸ್‌ಚೇಂಜ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ವಿದೇಶಿಯರು ಎಕ್ಷ್‌ಚೇಂಜ್ ಸಂಸ್ಥೆಯ ನೌಕರರನ್ನು ವಂಚಿಸಿದ ಘಟನೆ ಬುಧವಾರ ಸಂಜೆ ನಡೆದಿತ್ತು. ಈ ಸಂಸ್ಥೆ ಚಂದಕುನ್ನು ಎಂಬಲ್ಲಿದೆ.
ನೂರು ಡಾಲರ್‌ನ್ನುಬದಲಾಯಿಸ ಕೊಡಬೇಕೆಂದು ಇಬ್ಬರು ಎಕ್ಸ್‌ಚೇಂಜ್‌ಗೆ ಬಂದಿದ್ದರು. ಆದರೆ ಇವರ ಕೈಯಲ್ಲಿ ಗುರುತು ಚೀಟಿ ಇರಲಿಲ್ಲ. ಇದರ ಬಗ್ಗೆ ನೌಕರರು ಮಾತಾಡುತ್ತಿದ್ದ ವೇಳೆ ಹಣ ಅಪಹರಿಸಿದ್ದಾರೆ ಎನ್ನಲಾಗಿದೆ.
ವಿದೇಶಿಯರು ಹೊರಟು ಹೋದ ಬಳಿಕ ಹಣದಲ್ಲಿ ಕಡಿಮೆ ಅಗಿರುವುದು ನೌಕರರಿಗೆ ಗೊತ್ತಾಗಿತ್ತು. ಕೂಡಲೇ ಅವರು ಹೊರಗೆ ಬಂದು ನೋಡಿದಾಗ ವಿದೇಶಿಯರಿಬ್ಬರೂ ನಾಪತ್ತೆಯಾಗಿದ್ದರು. ದೂರು ನೀಡಲಾಗಿದ್ದು ಪೊಲೀಸರು ಸ್ಥಳಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
Next Story





