ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಶಶಾಂತ್

ಮಂಗಳೂರು, ಡಿ. 9: ತಲೆ ಮತ್ತು ಕತ್ತಿನ ಮಧ್ಯೆ ಇರುವ ಸ್ಪೈನಲ್ ಕೋಟ್‌ಗೆ ಆಘಾತವಾಗಿ ಉಳ್ಳಾಲದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಾಂತ್ ಸುಧಾಕರ್ ಎಂಬವರು ಚಿಕಿತ್ಸೆಯ ವೆಚ್ಚ ಭರಿಸಲಾಗದೆ, ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ, ಕಾರವಾರದ ಹರಿದೇವ್ ನಗರ ನಿವಾಸಿಯಾಗಿರುವ ಶಶಾಂಕ್ ಮೂರುವರೆ ವರ್ಷಗಳ ಹಿಂದೆ ಕೆರೆಯೊಂದರಲ್ಲಿ ಸ್ನಾನಕ್ಕೆ ತೆರಳಿದ್ದು, ಕೆರೆಯಲ್ಲಿ ನೀರಿದೆ ಎಂದು ಭಾವಿಸಿ ನೇರವಾಗಿ ಹಾರಿದ್ದರು. ಆದರೆ ಆ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆ ಇದ್ದುದರಿಂದ ಇವರ ತಲೆಗೆ ತೀವ್ರ ತರದ ಗಾಯವಾಗಿತ್ತು.
ಇಂದಿನ ವರೆಗೆ ವಿವಿಧ ಕಡೆಗಳಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ಚಿಕಿತ್ಸೆ ನೀಡಲಾಗಿದ್ದರೂ, ನಿರೀಕ್ಷಿತ ಫಲ ಕಂಡಿಲ್ಲ. ಇದೀಗ ಉಳ್ಳಾಲದ ಸರೋಜ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವ ಶಶಾಂಕ್‌ಗೆ ಹಲವು ಸಮಯಗಳ ವರೆಗೆ ದಿನಂಪ್ರತಿ ಫಿಸಿಯೋಥೆರಪಿ ನಡೆಸಬೇಕೆಂದು ವೈದ್ಯರು ಸೂಚಿಸಿದ್ದಾರೆ. ಈ ಚಿಕಿತ್ಸೆಗೆ ದಿನವೊಂದಕ್ಕೆ 1,500 ರೂ. ತಗಲುತ್ತಿದೆ.
ಶಶಾಂಕ್ ತಂದೆ ಸುಧಾಕರ್ ಮತರಾಗಿ 16 ವರ್ಷಗಳು ಕಳೆದಿವೆ. ತಾಯಿ ಶೈಲಾ ಭಟ್ ಆಸ್ಪತ್ರೆಯಲ್ಲಿರುವ ಮಗನ ಆರೈಕೆ ನಡೆಸುತ್ತಿದ್ದು, ಓರ್ವ ಅಣ್ಣ ಕೂಲಿ ಕೆಲಸಕ್ಕೆ ಹೋಗಿ ಈ ಕುಟುಂಬಕ್ಕೆ ಆಸರೆಯಾಗಿದ್ದಾರೆ.
ಆದರೆ ಈ ಕೂಲಿ ಕೆಲಸದಿಂದ ಸಿಗುತ್ತಿರುವ ಹಣವು ಕುಟುಂಬದ ನಿರ್ವಹಣೆಗೆ ಸಾಲುತ್ತಿಲ್ಲ. ಬಡ ಕುಟುಂಬದ ಶಶಾಂಕ್ ಚೇತರಿ ಕಾಣಬೇಕಾದರೆ ದಾನಿಗಳ ನೆರವು ಅತ್ಯಗತ್ಯವಾಗಿದೆ.
ಆದ್ದರಿಂದ ದಾನಿಗಳು ತಮ್ಮ ನೆರವನ್ನು ಈ ಕೆಳಗಿನ ಬ್ಯಾಂಕ್ ಅಕೌಂಟ್‌ಗೆ ಕಳುಹಿಸಬಹುದು ಎಂದು ಶಶಾಂತ್‌ನ ಸಹೋದರ ಸೂರಜ್ ಬಂಟ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 8904715955ಯನ್ನು ಸಂಪರ್ಕಿಸಬಹುದು.
ಬ್ಯಾಂಕ್ ಖಾತೆ ವಿವರ
ಸೂರಜ್ ಎಸ್.ಬಂಟ್
ಐಡಿಬಿಐ ಬ್ಯಾಂಕ್, ಕಾರ್‌ವಾರ್ ಬ್ರಾಂಚ್
ಅಕೌಂಟ್ ನಂಬ್ರ 1618104000024930
ಐಎಫ್‌ಎಸ್‌ಸಿ ಕೋಡ್: ಐಬಿಕೆಎಲ್0001618.







