ರಾಷ್ಟ್ರಗೀತೆ: ಆದೇಶ ಸಡಿಲಿಸಲು ಸುಪ್ರೀಂ ನಿರಾಕರಣೆ, ಅಂಗವಿಕಲರಿಗೆ ಎದ್ದು ನಿಲ್ಲುವುದರಿಂದ ವಿನಾಯಿತಿ

ಹೊಸದಿಲ್ಲಿ,ಡಿ.9: ಚಲನಚಿತ್ರಗಳ ಪ್ರದರ್ಶನಕ್ಕೆ ಮೊದಲು ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿರುವ ತನ್ನ ಆದೇಶವನ್ನು ಸಡಿಲಿಸಲು ಅಥವಾ ಯಾವುದೇ ಮಧ್ಯಂತರ ಪರಿಹಾರವನ್ನೊದಗಿಸಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ. ಆದರೆ ರಾಷ್ಟ್ರಗೀತೆಯನ್ನು ನುಡಿಸುತ್ತಿರುವಾಗ ಅಂಗವಿಕಲ ವ್ಯಕ್ತಿಗಳು ಎದ್ದು ನಿಲ್ಲಬೇಕಾಗಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಅಂಗವಿಕಲರು ಯಾವುದಾದರೂ ಆಂಗಿಕ ಹಾವಭಾವದ ಮೂಲಕ ರಾಷ್ಟ್ರಗೀತೆಗೆ ಗೌರವ ಸಲ್ಲಿಸಬಹುದಾಗಿದೆ ಎಂದೂ ಅದು ಹೇಳಿದೆ. ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿರುವುದರಿಂದ ಸುಮಾರು 1,500 ವಿದೇಶಿ ಅತಿಥಿಗಳಿಗೆ ಅನಾನುಕೂಲವಾಗಿಲಿದೆ. ಹೀಗಾಗಿ ಆದೇಶ ಪಾಲನೆಯಿಂದ ವಿನಾಯಿತಿ ನೀಡುವಂತೆ ಕೋರಿ ಕೇರಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವವೊಂದರ ಸಂಘಟಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ರಾಷ್ಟ್ರಗೀತೆಯನ್ನು ನುಡಿಸುತ್ತಿರುವಾಗ ವಿದೇಶಿ ಅತಿಥಿಗಳೂ ಎದ್ದು ನಿಲ್ಲಬೇಕು ಎಂದು ನ್ಯಾಯಾಲಯವು ಹೇಳಿತು.
Next Story





