ಆ್ಯಕ್ಸಿಸ್ ಬ್ಯಾಂಕ್ ಶಾಖೆಗೆ ಐಟಿ ದಾಳಿ 44 ನಕಲಿ ಖಾತೆಗಳಲ್ಲಿ 100 ಕೋ.ರೂ.ಪತ್ತೆ

ಹೊಸದಿಲ್ಲಿ,ಡಿ.9: ಇಲ್ಲಿಯ ಚಾಂದನಿ ಚೌಕ್‌ನ ಆ್ಯಕ್ಸಿಸ್ ಬ್ಯಾಂಕ್ ಶಾಖೆಯ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು 44 ನಕಲಿ ಖಾತೆಗಳನ್ನು ಪತ್ತೆ ಹಚ್ಚಿದ್ದಾರೆ. ನ.8 ರಂದು 500 ಮತ್ತು 1,000ರೂ ನೋಟುಗಳು ರದ್ದುಗೊಂಡ ಬಳಿಕ ಈ ಖಾತೆಗಳಲ್ಲಿ ಒಟ್ಟು ಸುಮಾರು 100 ಕೋ.ರೂ.ಗಳ ಹಳೆಯ ನೋಟುಗಳು ಜಮೆಯಾಗಿವೆ. ಈ ಅವಧಿಯಲ್ಲಿ ಈ ಶಾಖೆಯಲ್ಲಿ ಒಟ್ಟು 450 ಕೋ.ರೂ.ಜಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗ ಪತ್ತೆಯಾಗಿರುವ 44 ನಕಲಿ ಖಾತೆಗಳನ್ನು ನಕಲಿ ದಾಖಲೆಗಳ ಮೂಲಕ ಸೃಷ್ಟಿಸಲಾಗಿದ್ದು, ಚಿನ್ನ ಖರೀದಿಗಾಗಿ ಹಣವನ್ನು ಬಳಸಿರಬಹುದಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ನೋಟು ರದ್ದತಿ ಕ್ರಮ ಜಾರಿಗೊಂಡ ನಂತರ ಇದು ದಾಳಿಗೆ ಗುರಿಯಾದ ದಿಲ್ಲಿಯಲ್ಲಿನ ಎರಡನೇ ಆ್ಯಕ್ಸಿಸ್ ಬ್ಯಾಂಕ್ ಶಾಖೆಯಾಗಿದೆ.
ಕಳೆದ ತಿಂಗಳು ಇಬ್ಬರು ವ್ಯಕ್ತಿಗಳು ಕಾಶ್ಮೀರಿ ಗೇಟ್ ಶಾಖೆಯಿಂದ ಹೊರಬರುತ್ತಿ ರುವಾಗಲೇ ಅವರನ್ನು ಬಂಧಿಸಿದ್ದ ದಿಲ್ಲಿ ಪೊಲೀಸರು ಅವರಿಂದ 3.5 ಕೋ.ರೂ.ಗಳ ಹೊಸನೋಟುಗಳನ್ನು ವಶಪಡಿಸಿಕೊಂಡಿದ್ದರು.
Next Story





