ಉ.ಕೊರಿಯಕ್ಕೆ ಪರಮಾಣು ಅಸ್ತ್ರಗಳನ್ನು ಗುರಿಯಿರಿಸುವ ಸಾಮರ್ಥ್ಯವಿಲ್ಲ : ಅಮೆರಿಕ

ವಾಶಿಂಗ್ಟನ್, ಡಿ. 9: ಪರಮಾಣು ಸಿಡಿತಲೆಯೊಂದನ್ನು ಕ್ಷಿಪಣಿಗೆ ಜೋಡಿಸಿ ಉಡಾಯಿಸುವ ಸಾಮರ್ಥ್ಯವನ್ನು ಉತ್ತರ ಕೊರಿಯ ಅಭಿವೃದ್ಧಿಪಡಿಸಿದೆ, ಆದರೆ, ಶಸ್ತ್ರವನ್ನು ಆಕಾಶದಿಂದ ವಾಪಸ್ ತರಿಸುವ ಅಥವಾ ಗುರಿಯೊಂದರತ್ತ ಕಳುಹಿಸುವ ನೈಪುಣ್ಯವನ್ನು ಅದು ಗಳಿಸಿಲ್ಲ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.
ಜನವರಿಯಲ್ಲಿ ತನ್ನ ನಾಲ್ಕನೆ ಪರಮಾಣು ಪರೀಕ್ಷೆ ನಡೆಸಿದ ಪ್ಯಾಂಗ್‌ಯಾಂಗ್ ಬಳಿಕ ಸರಣಿ ಕ್ಷಿಪಣಿ ಹಾರಾಟಗಳನ್ನು ನಡೆಸಿದೆ.
Next Story





