ಸಹಕಾರಿ ಸಂಘಗಳ ಮನವಿ ಪರಿಗಣಿಸಲು ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ
ನೋಟು ರದ್ದತಿಯಿಂದ ಸಹಕಾರಿ ಸಂಘಗಳ ಚಟುವಟಿಕೆ ಸ್ಥಗಿತ

ಉಡುಪಿ, ಡಿ.9: ಕೇಂದ್ರ ಸರಕಾರ ನ.8ರಂದು ನೋಟು ಅಮಾನ್ಯೀಕರಣ ಘೋಷಿಸಿದ ಹಿನ್ನೆಲೆಯಲ್ಲಿ, ರಾಜ್ಯದ ಸಹಕಾರ ಸಂಘಗಳು ಜಿಲ್ಲಾ ಸಹಕಾರ ಯೂನಿಯನ್ ಮುಖಾಂತರ ರಿಸರ್ವ್ ಬ್ಯಾಂಕಿಗೆ ಮಾಡಿರುವ ಮನವಿಯನ್ನು ವಿತ್ತ ಸಚಿವಾಲಯ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಪರಿಗಣಿಸಬೇಕು ಮತ್ತು ಈ ಸಂಬಂಧ ಸಕ್ರಿಯ ಹಾಗೂ ಜವಾಬ್ದಾರಿಯುತ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ರಾಜ್ಯ ಉಚ್ಛ ನ್ಯಾಯಾಲಯ, ಕೇಂದ್ರ ಸರಕಾರ ಹಾಗೂ ರಿವರ್ಸ್ ಬ್ಯಾಂಕಿಗೆ ನಿರ್ದೇಶಿಸಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರ ನೋಟಿನ ಅಮಾನ್ಯೀಕಣಗೊಳಿಸಿದ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರದ ಮೂಲ ಗಜೆಟ್ ಅಧಿಸೂಚನೆಯಲ್ಲಿ ಇಲ್ಲದಿದ್ದರೂ, ಸಹಕಾರ ಸಂಘಗಳಿಗೂ ಅವುಗಳ ಬ್ಯಾಂಕು ಖಾತೆಗಳಿಂದ ಹಣ ಹಿಂಪಡೆಯಲು ಮಿತಿ ಹೇರಿದ ಪರಿಣಾಮ ಸಂಘಗಳ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ 80ಕ್ಕೂ ಅಧಿಕ ಸಹಕಾರ ಸಂಘಗಳು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ನಿನ ನೇತೃತ್ವದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸರಣಿ ರಿಟ್‌ಅರ್ಜಿಗಳನ್ನು ದಾಖಲಿಸಿದ್ದವು.
ಈ ಎಲ್ಲಾ ರಿಟ್ ಅರ್ಜಿಗಳನ್ನು ಡಿ.6ರಂದು ವಿಲೆಮಾಡಿ ತೀರ್ಪು ಪ್ರಕಟಿಸಿದ ನ್ಯಾಯಾಲಯ, ಕೇಂದ್ರದ ವಿತ್ತ ನೀತಿಯಲ್ಲಿ ತಾನು ಮಧ್ಯ ಪ್ರವೇಶಿಸಿ ನಗದು ಮಿತಿ ಹೇರಿಕೆ ಸಂಬಂಧದ ಅಧಿಸೂಚನೆ/ ಸುತ್ತೋಲೆಗಳನ್ನು ರದ್ದುಗೊಳಿಸ ಬೇಕೆಂಬ ವಾದಿ ಸಂಘಗಳ ಕೋರಿಕೆಯನ್ನು ಪರಿಗಣಿಸಲು ಬರುವುದಿಲ್ಲ. ಆದರೆ, ಸಹಕಾರಿ ಸಂಘಗಳು ಮಾಡಿರುವ ಮನವಿಯನ್ನು ಪರಿಶೀಲಿಸುವ ಕೇಂದ್ರ ಸರಕಾರಕ್ಕೆ ಸೂಚನೆಗಳನ್ನು ನೀಡಿದೆ ಎಂದವರು ಅಭಿಪ್ರಾಯಪಟ್ಟರು.
ಇದರಿಂದ ವಾದಿ ಸಹಕಾರ ಸಂಘಗಳಿಗೆ ದಾವೆಯಲ್ಲಿ ಆಂಶಿಕ ಜಯ ದೊರಕಿದೆ. ಇದು ಜಿಲ್ಲೆಯ ಸಹಕಾರ ಸಂಘಗಳ ಸಂಘಟಿತ ಹೋರಾಟಕ್ಕೆ ದೊರಕಿದ ಜಯವಾಗಿದೆ ಎಂದು ಕಿಶನ್ ಹೆಗ್ಡೆ ನುಡಿದರು. ರಿಟ್ ಅರ್ಜಿಗಳು ನ್ಯಾಯಮೂರ್ತಿ ಅಶೋಕ್. ಬಿ. ಹಿಂಚಗೇರಿ ಅವರ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ಜಿಲ್ಲೆಯ ವಾದಿ ಸಂಘಗಳ ಪರವಾಗಿ ಹಿರಿಯ ನ್ಯಾಯವಾದಿ ಹಾಗೂ ಕರ್ನಾಟಕದ ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್ ಹಾಗೂ ನ್ಯಾಯವಾದಿ ಮಹೇಶ್ ಉಪ್ಪಿನ್ ಅವರು ವಾದ ಮಂಡಿಸಿದ್ದರು ಎಂದವರು ತಿಳಿಸಿದ್ದಾರೆ.
ರಿಟ್ ಅರ್ಜಿಗಳು ನ್ಯಾಯಮೂರ್ತಿ ಅಶೋಕ್. ಬಿ. ಹಿಂಚಗೇರಿ ಅವರ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ಜಿಲ್ಲೆಯ ವಾದಿ ಸಂಘಗಳ ಪರವಾಗಿ ಹಿರಿಯ ನ್ಯಾಯವಾದಿ ಹಾಗೂ ಕರ್ನಾಟಕದ ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್ ಹಾಗೂ ನ್ಯಾಯವಾದಿ ಮಹೇಶ್ ಉಪ್ಪಿನ್ ಅವರು ವಾದ ಮಂಡಿಸಿದ್ದರು ಎಂದವರು ತಿಳಿಸಿದ್ದಾರೆ.
ನೋಟು ರದ್ದತಿ ಹಾಗೂ ನಗದು ಮಿತಿ ಹೇರಿಕೆ ಸಂಬಂಧ ಈಗಾಗಲೇ ಮಹಾರಾಷ್ಟ್ರ, ಕೇರಳ ಹಾಗೂ ದಿಲ್ಲಿಯಲ್ಲೂ ದಾಖಲಾದ ರಿಟ್ ಅರ್ಜಿಗಳು ಹೈಕೋರ್ಟಿನಲ್ಲಿ ವಜಾಗೊಂಡಿವೆ. ಇದೇ ವಿಚಾರದಲ್ಲಿ, ಕೇರಳ ರಾಜ್ಯದ 7 ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ದಾಖಲಿಸಿದ ದಾವೆಯು ಸುಪ್ರೀಂ ಕೋರ್ಟಿನಲ್ಲಿ ತೀರ್ಮಾನಕ್ಕೆ ಬಾಕಿ ಇದ್ದು, ಈ ವಾರಾಂತ್ಯದಲ್ಲಿ ತೀರ್ಪು ಬರುವ ನಿರೀಕ್ಷೆ ಇದೆ.
ಈ ಹಿನ್ನೆಲೆಯಲ್ಲಿ, ನಗದು ಮಿತಿ ಹೇರಿಕೆ ಸಂಬಂಧ ಕರ್ನಾಟಕ ಉಚ್ಛ ನ್ಯಾಯಾಲಯವು ನೀಡಿರುವ ಪರಿಹಾರದ ಅದೇಶದ ಮುಂದಿನ ಕ್ರಮದ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ, ಎಲ್ಲಾ ಸಹಕಾರ ಸಂಘಗಳ ಅಭಿಪ್ರಾಯವನ್ನು ಪಡೆದುಕೊಂಡು ಯೂನಿಯನ್ ವತಿಯಿಂದ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದೂ ಕೊಳ್ಕೆಬೈಲ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ನಗದು ಮಿತಿ ಹೇರಿಕೆ ಸಂಬಂಧ ಕರ್ನಾಟಕ ಉಚ್ಛ ನ್ಯಾಯಾಲಯವು ನೀಡಿರುವ ಪರಿಹಾರದ ಅದೇಶದ ಮುಂದಿನ ಕ್ರಮದ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ, ಎಲ್ಲಾ ಸಹಕಾರ ಸಂಘಗಳ ಅಭಿಪ್ರಾಯವನ್ನು ಪಡೆದುಕೊಂಡು ಯೂನಿಯನ್ ವತಿಯಿಂದ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದೂ ಕೊಳ್ಕೆಬೈಲ್ ತಿಳಿಸಿದ್ದಾರೆ.







