ಅಕ್ರಮ ಕಳ್ಳಭಟ್ಟಿ: ಮಾಲು ಸಹಿತ ಆರೋಪಿ ಬಂಧನ
ಸಾಗರ, ಡಿ.9: ತಾಲೂಕಿನ ಹಿರೇನೆಲ್ಲೂರು ಗ್ರಾಮದ ಕನ್ನಪ್ಪಎಂಬವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 30 ಲೀ. ಬೆಲ್ಲದ ಕೊಳೆ ಹಾಗೂ 5 ಲೀ. ಕಳ್ಳಭಟ್ಟಿಯನ್ನು ಶುಕ್ರವಾರ ಅಬಕಾರಿ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಬಕಾರಿ ಇಲಾಖೆ ಅಧಿಕಾರಿಗಳು ಕನ್ನಪ್ಪನನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಅಬಕಾರಿ ಉಪ ಆಯುಕ್ತೆ ರೂಪಾ ಅವರ ಮಾರ್ಗದರ್ಶನದಲ್ಲಿ ನಡೆದ ದಾಳಿಯ ನೇತೃತ್ವವನ್ನು ಅಬಕಾರಿ ನಿರೀಕ್ಷಕ ಎನ್.ಸತೀಶ್ ವಹಿಸಿದ್ದರು. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಮುದಾಸಿರ್, ಗುರುಮೂರ್ತಿ, ರಾಜಪ್ಪ, ಶಿವಾಜಿ, ಗಣಪತಿ, ರವಿ ಹಾಗೂ ಚಾಲಕ ರಾಜುಗೌಡ ಪಾಲ್ಗೊಂಡಿದ್ದರು.
Next Story





