ಮಂಗಳೂರು : ಅಖಿಲ ಭಾರತ ಗೃಹರಕ್ಷಕರ ದಿನಾಚರಣೆ

ಮಂಗಳೂರು, ಡಿ.9: ದೇಶದ ಪ್ರಗತಿಗೆ ಕಾನೂನು ಸುವ್ಯವಸ್ಥೆ ಮತ್ತು ಶಿಸ್ತಿನಿಂದ ಕೂಡಿದ ಸಮಾಜ ಮಹತ್ತರವಾಗುತ್ತದೆ ಎಂದು ಶಾಸಕ ಜೆ.ಆರ್.ಲೋಬೊ ಅಭಿಪ್ರಾಪಟ್ಟರು.
ನಗರದ ಪೊಲೀಸ್ ಸಭಾಭವನದಲ್ಲಿ ಶುಕ್ರವಾರ ನಡೆದ ಅಖಿಲ ಭಾರತ ಗೃಹ ರಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈಯಕ್ತಿಕ ಅಭಿಪ್ರಾಯ ಏನೇ ಇದ್ದರೂ ಇತರರ ಬದುಕಿನ ಹಕ್ಕುಗಳನ್ನು ಮೊಟಕುಗೊಳಿಸಬಾರದು. ಗೃಹರಕ್ಷಕರು, ಶಿಸ್ತಿನ ಸಿಪಾಯಿಗಳು. ಶಿಸ್ತು ಇಲ್ಲದೆ ಯಾವುದೇ ಸಶಸ್ತ್ರಪಡೆ ಯಶಸ್ವಿಗೊಳ್ಳುವುದಿಲ್ಲ. ಅವರಲ್ಲಿರುವ ಲವಲವಿಕೆ, ಗಾಂಭಿರ್ಯ ಜನಸಾಮಾನ್ಯರಲ್ಲಿ ಗೌರವ ಭಾವನೆ ಮೂಡಿಸುತ್ತದೆ. ಮಾಜದ ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕರ ಸೇವೆ ಶ್ಲಾಘನೀಯ ಎಂದು ಲೋಬೋ ಹೇಳಿದರು.
ಗೃಹರಕ್ಷಕ ದಳದ ಮುಖ್ಯಸ್ಥ ಡಾ.ಮುರಳಿ ಮೋಹನ್ ಚೂಂತಾರ್ ಅಧ್ಯಕ್ಷತೆ ವಹಿಸಿದ್ದರು. ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ. ಸುಧೀರ್‌ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಲ್ಕಿ ಘಟಕಾಧಿಕಾರಿ ಮನ್ಸೂರ್ ಅಹ್ಮದ್, ಮುಖ್ಯಮಂತ್ರಿಯ ಬೆಳ್ಳಿ ಪದಕ ವಿಜೇತರಾದ ಭೋಜ, ಹೂವಪ್ಪ, ಪ್ರಭಾ ರೈ, ರೇವತಿ ದಿನೇಶ್ ಹಾಗೂ ಗೃಹರಕ್ಷಕ ಜಯಗಣೇಶ್‌ರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಡೆಪ್ಯುಟಿ ಕಮಾಂಡೆಂಟ್ ರಮೇಶ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.





