ಪ್ರಗತಿ ನಗರ ನೂತನ ಕಾಂಕ್ರಿಟ್ ರಸ್ತೆಗೆ ಗುದ್ದಲಿ ಪೂಜೆ

ಸುರತ್ಕಲ್, ಡಿ.9: ಇಲ್ಲಿನ ಪ್ರಗತಿ ನಗರದಲ್ಲಿ 10 ಲಕ್ಷ ರೂ. ವೆಚ್ಚದ ಸುಮಾರು 209 ಮೀಟರ್ ಉದ್ದದ ನೂತನ ಕಾಂಕ್ರಿಟ್ ರಸ್ತೆಗೆ ಶಾಸಕ ಅಭಯಚಂದ್ರ ಜೈನ್ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಮಧ್ಯ ಪ್ರಗತಿ ನಗರದ ಜನತೆಯ ಹಲವು ದಿನಗಳ ಕನಸಾದ ರಸ್ತೆ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಕೆಟ್ಟುಹೋದ ಡಾಂಬರು ರಸ್ತೆಗೆ ಬದಲಾಗಿ ಉನ್ನತ ಮಟ್ಟದ ಕಾಂಕ್ರಿಟ್ ರಸ್ತೆಯನ್ನು ಈ ಬಾಗದಲ್ಲಿ ನರ್ಮಾನ ಮಾಡಲಾಗುವುದು. ಶೀಘ್ರ ಕಾಮಗಾರಿ ಮುಗಿಸುವಂತೆ ಸಂಬಂದ ಪಟ್ಟವರಿಗೆ ಸೂಚಿಸಲಾಗಿದೆ. ಅದರಂತೆ ಶೀಘ್ರ ಕಾಮಗಾರಿ ನಡೆದು ಗ್ರಾಮಸ್ಥರ ಅನುಕೂಲಕ್ಕೆ ಲಭ್ಯವಾಗಲಿದೆ ಎಂದರು.
ಈ ವೇಳೆ ಇಂಜಿನಿಯರ್, ಗುತ್ತಿಗೆದಾರರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು
Next Story





