ರೊಜಾರಿಯೊದಲ್ಲಿ ವೃತ್ತಿಮಾರ್ಗದರ್ಶನ ಶಿಬಿರ

ಮಂಗಳೂರು, ಡಿ.9: ನಗರದ ರೊಜಾರಿಯೊ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಹೆತ್ತವರಿಗೆ ರೊಜಾರಿಯೊ ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ಪ್ರೊ. ರೊನಾಲ್ಡ್ ಪಿಂಟೊ ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಎಲೊಶೀಯಸ್ ಡಿಸೋಜ ಸ್ವಾಗತಿಸಿದರು.
ವೇದಿಕೆಯಲ್ಲಿ ಹಿರಿಯ ಶಿಕ್ಷಕಿ ಮೆಟಿಲ್ಡಾ ಡಿಸೋಜ ಉಪಸ್ಥಿತರಿದ್ದರು.
ಶಿಕ್ಷಕ ರೋಶನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿ ರಕ್ಷಿತ್ ಡಿ. ಬೊಳಾರ್ ವಂದಿಸಿದನು.
Next Story





