ಪುತ್ತೂರು : ರತ ಸೇವಾದಳದ ತಾಲೂಕು ಮಟ್ಟದ ಮಕ್ಕಳ ಮೇಳ

ಪುತ್ತೂರು, ಡಿ.9 : ಮಕ್ಕಳಿಗೆ ಎಳವೆಯಲ್ಲಿಯೇ ದೇಶಪ್ರೇಮ ಮೂಡಿಸಲು ಭಾರತ ಸೇವಾದಳ ಪೂರಕ ವಾತಾವರಣ ಕಲ್ಪಿಸುತ್ತಿದ್ದು, ಸೇವಾದಳದ ಕಾರ್ಯಕ್ರಮಗಳಿಗೆ ಅನುದಾನ ಒದಗಿಸುವ ಕುರಿತು ಜಿಲ್ಲಾ ಜಿ.ಪಂ. ಸಭೆಯಲ್ಲಿ ಪ್ರಯತ್ನ ನಡೆಸುವುದಾಗಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಭರವಸೆ ನೀಡಿದರು.
ಅವರು ದ.ಕ ಜಿ.ಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಕಾರಿಯವರಕಛೇರಿ, ಭಾರತ ಸೇವಾದಳ ಪುತ್ತೂರು ತಾಲೂಕು ಸಮಿತಿ ಹಾಗೂ ಹಿ.ಪ್ರಾ ಶಾಲೆ ಪೆರ್ಲಂಪಾಡಿ,ಕಾವು ಕ್ಲಸ್ಟರ್ ಇದರ ಸಹಯೋಗದೊಂದಿಗೆ ಸೇವೆಗಾಗಿ ಬಾಳು ಎಂಬ ಧ್ಯೇಯ ಹೊತ್ತ ಭಾರತ ಸೇವಾದಳದ ಆಶ್ರಯದಲ್ಲಿ ಗುರುವಾರ ಪೆರ್ಲಂಪಾಡಿ ಸ ಹಿ ಪ್ರಾ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಮಕ್ಕಳ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ಸೇವಾದಳ ದ.ಕ.ಜಿಲ್ಲಾ ಸಮಿತಿ ಸದಸ್ಯ ಬಶೀರ್ ಬೈಕಂಪಾಡಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ , ವಿದ್ಯಾರ್ಥಿಗಳಲ್ಲಿ ಶಿಸ್ತು ,ದೇಶಾಭಿಮಾನ, ಸೌಹಾರ್ದತೆಯನ್ನು ಬೆಳೆಸುವ ವಿದ್ಯೆಯನ್ನು ಭಾರತ ಸೇವಾದಳದ ಮೂಲಕ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ. ದೇಶದ ಏಕತೆಗೆ ಸೇವಾದಳ ಪೂರಕ ವಾತಾವರಣ ಕಲ್ಪಿಸುತ್ತದೆ.ಪ್ರತಿ ತಾಲೂಕು ,ಜಿಲ್ಲೆಯಲ್ಲಿ ಪ್ರತಿವರ್ಷ ಭಾರತ ಸೇವಾದಳದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಆದರೆ ಸರಕಾರದಿಂದ ಯಾವುದೇ ಅನುದಾನ,ಸಹಕಾರ ದೊರಕಿಲ್ಲ. ಸೇವಾದಳದ ವಿದ್ಯಾರ್ಥಿಗಳಿಗೆ ಸಮವಸ್ತ್ರ ,ಶಿಕ್ಷಕರಿಗೆ ಗೌರವಧನ ನೀಡುವ ಕೆಲಸ ಸರಕಾರದಿಂದ ನಡೆಯಬೇಕು. ಈ ಕುರಿತು ಈಗಾಗಲೇ ಶಿಕ್ಷಣ ಸಚಿವ ತನ್ವೀರ್ ಸೇಠ್ ಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯ ಆಲಾನ್ಸೋ ಫ್ರಾಂಕೊ ಮಾತನಾಡಿ, ಸತ್ಯ,ನ್ಯಾಯ ,ಧರ್ಮದ ಹಾದಿಯಲ್ಲಿ ಮುನ್ನಡೆಯಲು ಭಾರತ ಸೇವಾದಳದ ಮಾರ್ಗದರ್ಶನ ನೀಡುತ್ತದೆ. ಎಳವೆಯಲ್ಲೇ ಸದ್ವಿಚಾರ ಮೈಗೂಡಿಸಿಕೊಳ್ಳಲು ಪ್ರೇರಣೆಯಾಗಿದೆ ಎಂದರು.
ಪುತ್ತೂರು ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್ ಪುರ ಮೆರವಣಿಗೆಗೆ ಚಾಲನೆ ನೀಡಿದರು.
ಕೊಳ್ತಿಗೆ ಗ್ರಾ.ಪಂ. ಸದಸ್ಯ ಶಿವರಾಮ ಭಟ್ ಬೀರ್ಣಕಜೆ, ಷಣ್ಮುಖದೇವ ಫ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ಆರ್ ಲಕ್ಷ್ಮಣ ಗೌಡ ಕುಂಟಿಕಾನ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ನಿವೃತ್ತ ಮುಖ್ಯಗುರು ಸುಧಾಕರ ರೈ ಕೆ ,ಭಾರತ ಸೇವಾದಳದ ಜಿಲ್ಲಾ ಸಂಘಟಕ ಮಂಜೇ ಗೌಡ ,ಕಾವು ಸಿಆರ್‌ಪಿ ಸುನಿಲ್ ಕುಮಾರ್ , ಪೆರ್ಲಂಪಾಡಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಎಂ , ಕೊಳ್ತಿಗೆ ಗ್ರಾ.ಪಂ.ಸದಸ್ಯ ಷಣ್ಮುಖಲಿಂಗಂ, ಭಾರತ ಸೇವಾದಳದ ತಾಲೂಕು ಕಾರ್ಯದರ್ಶಿ ಪುಷ್ಪಾವತಿ ಪಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು .
ತಾಲೂಕಿನ 80 ಶಾಲೆಗಳಿಂದ ಸುಮಾರು 1500 ವಿದ್ಯಾರ್ಥಿಗಳು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಸಲಕರಣೆ ವ್ಯಾಯಾಮ, ಲೇಝಿಮ್, ಡಂಬೆಲ್ಸ್ ಮೊದಲಾದ ಕಾರ್ಯಕ್ರಮಗಳು ನಡೆಯಿತು.
ಸೇವಾ ದಳದ ಪುರ ಮೆರವಣಿಗೆಯು ಶಾಲೆಯಿಂದ ಹೊರಟು ಪೆರ್ಲಂಪಾಡಿ ಮುಖ್ಯ ರಸ್ತೆಯ ಮೂಲಕ ಸಾಗಿ ಶಾಲೆಯಲ್ಲಿ ಸಮಾಪನಗೊಂಡಿತು.
ಸ್ವಾಗತ ಸಮಿತಿ ಸಂಚಾಲಕ ಪ್ರಮೋದ್ ಕೆ.ಎಸ್ ಅತಿಥಿಗಳನ್ನು ಗೌರವಿಸಿದರು.
ಶಾಲಾ ಮುಖ್ಯಗುರು ಲಕ್ಷ್ಮಣನಾಯ್ಕಾ ಕೆ. ಸ್ವಾಗತಿಸಿದರು.
ಭಾರತ ಸೇವಾದಳದ ಸಮನ್ವಯಾಧಿಕಾರಿ ಸುಂದರ ಗೌಡ ಎನ್ ಪ್ರಸ್ತಾವನೆಗೈದರು.
ಮಕ್ಕಳ ಮೇಳದ ಸಮಿತಿ ಅಧ್ಯಕ್ಷ ವಿಷ್ಣು ಭಟ್ ಎಕ್ಕಡ್ಕ ವಂದಿಸಿದರು.
ನವೀನ್ ರೈ ,ಜ್ಯೋತಿ ಡಿ ಮತ್ತು ಸೀತಾರಾಮ ಕಾರ್ಯಕ್ರಮ ನಿರೂಪಿಸಿದರು.







