ನಾಲ್ಕನೆ ಟೆಸ್ಟ್: ಇಂಗ್ಲೆಂಡ್‌ಗೆ ಭಾರತ ತಿರುಗೇಟು

ಮುಂಬೈ, ಡಿ.9: ಇಲ್ಲಿ ನಡೆಯುತ್ತಿರುವ ನಾಲ್ಕನೆ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 400 ರನ್‌ಗಳಿಗೆ ಆಲೌಟಾಗಿದೆ. ಭಾರತ ಮೊದಲ ಇನಿಂಗ್ಸ್ ಆರಂಭಿಸಿ ಇಂಗ್ಲೆಂಡ್‌ಗೆ ತಿರುಗೇಟು ನೀಡಿದೆ.
ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್‌ನ ಎರಡನೆ ದಿನದಾಟದಂತ್ಯಕ್ಕೆ ಭಾರತ ಮೊದಲ ಇನಿಂಗ್ಸ್‌ನಲ್ಲಿ 52 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 146 ರನ್ ಗಳಿಸಿದೆ.
70 ರನ್ ಗಳಿಸಿರುವ ಮುರಳಿ ವಿಜಯ್ ಮತ್ತು 47 ರನ್ ಗಳಿಸಿರುವ ಚೇತೇಶ್ವರ ಪೂಜಾರ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.
ಆರಂಭಿಕ ದಾಂಡಿಗ ಕೆಎಲ್ ರಾಹುಲ್ 24 ರನ್ ಗಳಿಸಿ ಔಟಾಗಿದ್ದಾರೆ. ಭಾರತ ಇನ್ನು ಇಂಗ್ಲೆಂಡ್‌ನ ಸ್ಕೋರ್ ಸರಿಗಟ್ಟಲು 254 ರನ್ ಗಳಿಸಬೇಕಿದೆ.
ಇನಿಂಗ್ಸ್ ಆರಂಭಿಸಿದ ಮುರಳಿ ವಿಜಯ್ ಮತ್ತು ಲೋಕೇಶ್ ರಾಹುಲ್ 14 ಓವರ್‌ಗಳಲ್ಲಿ 39 ರನ್ ಸೇರಿಸುವಷ್ಟರಲ್ಲಿ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು. ವೇಗದ ದಾಳಿಯನ್ನು ರಾಹುಲ್ ಮತ್ತು ವಿಜಯ್ ಎಚ್ಚರಿಕೆಯಿಂದ ಎದುರಿಸಿದರು. ಇದರಿಂದಾಗಿ ಮೊದಲ ಏಳು ಓವರ್‌ಗಳಲ್ಲಿ ತಂಡದ ಖಾತೆಗೆ ಕೇವಲ ಏಳು ರನ್ ಸೇರ್ಪಡೆಗೊಂಡಿತು.
ಕಳೆದ ಪಂದ್ಯದಲ್ಲಿ ಗಾಯಾಳುವಾಗಿ ತಂಡದಿಂದ ಹೊರಗುಳಿದಿದ್ದ ರಾಹುಲ್ ತಂಡಕ್ಕೆ ವಾಪಸಾಗಿ 41 ಎಸೆತಗಳಲ್ಲಿ 4 ಬೌಂಡರಿಗಳ ಸಹಾಯದಿಂದ 24 ರನ್ ಗಳಿಸಿ ಮೊಯಿನ್ ಅಲಿ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ರಾಹುಲ್ ನಿರ್ಗಮನದ ಬಳಿಕ ಮುರಳಿ ವಿಜಯ್‌ಗೆ ಉತ್ತಮ ಫಾರ್ಮ್‌ನಲ್ಲಿರುವ ನಂ.3 ಆಟಗಾರ ಪೂಜಾರ ಜೊತೆಯಾದರು. ಇವರು ಮುರಿಯದ ಜೊತೆಯಾಟದಲ್ಲಿ 107 ರನ್‌ಗಳನ್ನು ಸೇರಿಸಿದರು. ಇದರೊಂದಿಗೆ ಪೂಜಾರ ಮತ್ತು ಮುರಳಿ ವಿಜಯ್ ಏಳನೆ ಬಾರಿ ಶತಕದ ಜೊತೆಯಾಟ ನೀಡಿದ್ದಾರೆ. ಈ ಸರಣಿಯಲ್ಲಿ ಎರಡನೆ ಬಾರಿ ಶತಕದ ಜೊತೆಯಾಟ ನೀಡಿದ್ದರು. ಮೊದಲ ಟೆಸ್ಟ್‌ನಲ್ಲಿ ದ್ವಿಶತಕದ (211) ಜೊತೆಯಾಟ ನೀಡಿದ್ದರು.
ರಾಹುಲ್ ನಿರ್ಗಮನದ ಬಳಿಕ ಹೆಚ್ಚು ಆಕ್ರಮಣಕಾರಿ ಆಟ ಪ್ರದರ್ಶಿಸಿದರು.ರಶೀದ್ ಅವರ 17ನೆ ಓವರ್‌ನಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು.
ಮುರಳಿ ವಿಜಯ್ 45 ರನ್ ಗಳಿಸಿದ್ದಾಗ ಔಟಾಗುವ ಅವಕಾಶದಿಂದ ಪಾರಾಗಿದ್ದರು.ಬಳಿಕ ಅವರು ಅರ್ಧಶತಕ ಗಳಿಸಿದರು.46ನೆ ಟೆಸ್ಟ್ ಆಡುತ್ತಿರುವ ಮುರಳಿ ವಿಜಯ್ 126 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಾಯದಿಂದ 15ನೆ ಅರ್ಧ ಶತಕ ಪೂರ್ಣಗೊಳಿಸಿದರು. ಮುರಳಿ ವಿಜಯ್‌ಗೆ ಸಮರ್ಥ ಸಾಥ್ ನೀಡಿದ ಪೂಜಾರ ಅರ್ಧಶತಕ ದಾಖಲಿಸುವತ್ತ ಹೆಜ್ಜೆ ಇರಿಸಿದ್ದಾರೆ.ಈಗಾಗಲೇ ಈ ಸರಣಿಯಲ್ಲಿ ಅವರು 2 ಶತಕ ಮತ್ತು 1 ಅರ್ಧಶತಕ ದಾಖಲಿಸಿದ್ದಾರೆ. 102 ಎಸೆತಗಳನ್ನು ಎದುರಿಸಿರುವ ಪೂಜಾರ ಔಟಾಗದೆ 47 ರನ್ ಗಳಿಸಿ ಬ್ಯಾಟಿಂಗ್‌ನ್ನು ಮೂರನೆ ದಿನಕ್ಕೆ ಕಾದಿರಿಸಿದ್ದಾರೆ.
ಮುರಳಿ ವಿಜಯ್ 169 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 70 ರನ್ ಗಳಿಸಿ ಶತಕದ ಕನಸು ಕಾಣುತ್ತಿದ್ದಾರೆ.
ಇದಕ್ಕೂ ಮೊದಲು ಇಂಗ್ಲೆಂಡ್ ತಂಡ 130.1 ಓವರ್‌ಗಳಲ್ಲಿ 400 ರನ್‌ಗಳಿಗೆ ಆಲೌಟಾಗಿದೆ. ಭಾರತದ ಆರ್ ಅಶ್ವಿನ್ 112ಕ್ಕೆ 6 ಮತ್ತು ರವೀಂದ್ರ ಜಡೇಜ 109ಕ್ಕೆ 4 ವಿಕೆಟ್ ಪಡೆದರು.
ಗುರುವಾರ ದಿನದಾಟದಂತ್ಯಕ್ಕೆ 94 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 288 ರನ್ ಮಾಡಿದ್ದ ಇಂಗ್ಲೆಂಡ್ ಈ ಮೊತ್ತಕ್ಕೆ 112 ರನ್ ಸೇರಿಸಿತು. ಬೆನ್ ಸ್ಟೋಕ್ಸ್ 31 ರನ್, ಜೋಶ್ ಬಟ್ಲರ್ 76 ರನ್, ವೋಕ್ಸ್ 11ರನ್, ಆದಿಲ್ ರಶೀದ್ 4ರನ್, ಜಾಕ್ ಬಾಲ್ 31ರನ್ ಗಳಿಸಿ ಔಟಾದರು.
ಭಾರತದ ಸ್ಪಿನ್ನರ್‌ಗಳಾದ ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರು ಇಂಗ್ಲೆಂಡ್‌ನ ಮೊದಲ ಇನಿಂಗ್ಸ್‌ನಲ್ಲಿ 400 ರನ್‌ಗಳಿಗೆ ಆಲೌಟ್ ಮಾಡಿದರು. ಅಶ್ವಿನ್ 23ನೆ ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದರು. ಇದರೊಂದಿಗೆ ಕಪಿಲ್ ದೇವ್ ದಾಖಲೆಯನ್ನು ಸರಿಗಟ್ಟಿದರು. ಅಶ್ವಿನ್‌ಗೆ ಮೊದಲ ಓವರ್‌ನಲ್ಲಿ ಸ್ಟೋಕ್ಸ್ ಅವರ ವಿಕೆಟ್ ಪಡೆಯುವ ಅವಕಾಶದಿಂದ ವಂಚಿತಗೊಂಡರು. ಆದರೆ ಅವರಿಗೆ ಹೆಚ್ಚು ಹೊತ್ತು ನಿಲ್ಲಲು ಅವಕಾಶ ನೀಡಲಿಲ್ಲ. ಸ್ಟೋಕ್ಸ್ ನಿನ್ನೆಯ ಮೊತ್ತಕ್ಕೆ 6 ರನ್ ಸೇರಿಸಿ ಅಶ್ವಿನ್ ಎಸೆತದಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಇವರ ಜೊತೆಯಾಟದಲ್ಲಿ ತಂಡದ ಖಾತೆಗೆ 48 ರನ್ ಸೇರ್ಪಡೆಗೊಂಡಿತ್ತು.ಬಟ್ಲರ್ ಅವರನ್ನು 130.1ನೆ ಓವರ್‌ನಲ್ಲಿ ರವೀಂದ್ರ ಜಡೇಜ ಪೆವಿಲಿಯನ್‌ಗೆ ಅಟ್ಟುವುದರೊಂದಿಗೆ ಇಂಗ್ಲೆಂಡ್ ಆಲೌಟಾಯಿತು. ಬಟ್ಲರ್ 76 ರನ್(137ಎ, 6ಬೌ, 1ಸಿ) ಗಳಿಸಿದರು.
......
ಸ್ಕೋರ್ ಪಟ್ಟಿ
ಇಂಗ್ಲೆಂಡ್ ಮೊದಲ ಇನಿಂಗ್ಸ್ 130.1 ಓವರ್‌ಗಳಲ್ಲಿ ಆಲೌಟ್ 400
ಅಲಿಸ್ಟರ್ ಕುಕ್ ಸ್ಟಂ.ಪಟೇಲ್ ಬಿ ಜಡೇಜ46
ಜೆನ್ನಿಂಗ್ಸ್ ಸಿ ಪೂಜಾರ ಬಿ ಅಶ್ವಿನ್112
ಜೋ ರೂಟ್ ಸಿ ಕೊಹ್ಲಿ ಬಿ ಅಶ್ವಿನ್21
ಎಂ.ಎಂ. ಅಲಿ ಸಿ ನಾಯರ್ ಬಿ ಅಶ್ವಿನ್50
ಬೈರ್‌ಸ್ಟೋವ್ ಸಿ ಉಮೇಶ್ ಯಾದವ್ ಬಿ ಅಶ್ವಿನ್14
ಬೆನ್ ಸ್ಟೋಕ್ಸ್ ಸಿ ಕೊಹ್ಲಿ ಬಿ ಅಶ್ವಿನ್31
ಬಟ್ಲರ್ ಬಿ ಜಡೇಜ76
ವೋಕ್ಸ್ ಸಿ ಪಟೇಲ್ ಬಿ ಜಡೇಜ11
ರಶೀದ್ ಬಿ ಜಡೇಜ04
ಜಾಕ್ ಬಾಲ್‌ಸಿ ಪಟೇಲ್ ಬಿ ಅಶ್ವಿನ್ 31
ಆ್ಯಂಡರ್ಸನ್ ಔಟಾಗದೆ00
ಇತರೆ04
ವಿಕೆಟ್ ಪತನ: 1-99, 2-136, 3-230, 4-230, 5-249,6-297, 7-320, 8-334,9-388, 10-400
ಬೌಲಿಂಗ್ ವಿವರ
ಬಿ.ಕುಮಾರ್13.0-0-049-0
ಉಮೇಶ್ ಯಾದವ್11.0-2-038-0
ಆರ್.ಅಶ್ವಿನ್44.0-4-112-6
ಜಯಂತ್ ಯಾದವ್25.0-3-089-0
ರವೀಂದ್ರ ಜಡೇಜ37.1-5-109-4
ಭಾರತ ಮೊದಲ ಇನಿಂಗ್ಸ್ 52 ಓವರ್‌ಗಳಲ್ಲಿ 146/1
ಕೆ.ಎಲ್.ರಾಹುಲ್ ಬಿ ಅಲಿ24
ಮುರಳಿ ವಿಜಯ್ ಔಟಾಗದೆ70
ಚೇತೇಶ್ವರ ಪೂಜಾರ ಔಟಾಗದೆ47
ಇತರೆ05
ವಿಕೆಟ್ ಪತನ: 1-39
ಬೌಲಿಂಗ್ ವಿವರ
ಆ್ಯಂಡರ್ಸನ್08-4-22-0
ವೋಕ್ಸ್05-2-15-0
ಎಂಎಂ ಅಲಿ15-2-44-1
ರಶೀದ್13-1-49-0
ಜಾಕ್ ಬಾಲ್04-2-04-0
ಸ್ಟೋಕ್ಸ್04-2-04-0
ರೂಟ್03-1-03-0
,,,,,,
ಅಂಕಿ-ಅಂಶ
*23: ಆರ್.ಅಶ್ವಿನ್ ತನ್ನ 43ನೆ ಟೆಸ್ಟ್‌ನಲ್ಲಿ 23ನೆ ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದರು. ಕಪಿಲ್ ಸಾಧನೆಯನ್ನು ಸರಿಗಟ್ಟಿದರು. ಅನಿಲ್ ಕುಂಬ್ಳೆ(35) ಮತ್ತು ಹರ್ಭಜನ್ ಸಿಂಗ್(25) ಬಳಿಕ ಈ ಸಾಧನೆ ಮಾಡಿದ ಬೌಲರ್ ಎನಿಸಿಕೊಂಡರು.
*18: ಅಶ್ವಿನ್ ಭಾರತದಲ್ಲಿ ಆಡಿದ 26 ಟೆಸ್ಟ್‌ಗಳಲ್ಲಿ 18 ಬಾರಿ ಐದು ವಿಕೆಟ್‌ಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ.
*56.16: ಭಾರತದ ವಿರುದ್ಧ ಜೋಶ್ ಬಟ್ಲರ್ ಅವರ ಬ್ಯಾಟಿಂಗ್ ಸರಾಸರಿ 56.16
2013: ಭಾರತದ ಸ್ಪಿನ್ನರ್‌ಗಳು 2013ರಲ್ಲಿ ಆಸ್ಟ್ರೇಲಿಯ ವಿರುದ್ಧ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಎಲ್ಲ ವಿಕೆಟ್‌ಗಳನ್ನು ತಮ್ಮಿಳಗೆ ಹಂಚಿಕೊಂಡಿದ್ದರು.
.







