ಡಿ.15: ಮರಿಯಗಿರಿ ದೇವಮಾತಾ ಚರ್ಚ್ ಕಟ್ಟಡ ಉದ್ಘಾಟನೆ
ಮಂಗಳೂರು, ಡಿ.9: ಶಕ್ತಿನಗರದ ಮರಿಯಗಿರಿಯಲ್ಲಿರುವ ದೇವ ಮಾತಾ ಕ್ರೈಸ್ತ ದೇವಾಲಯಕ್ಕೆ ನೂತನ ಕಟ್ಟಡವನ್ನು ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಯು ಡಿ.15ರಂದು ನೆರವೇರಲಿದೆ. ಮಂಗಳೂರು ಬಿಷಪ್ ಅ.ವಂ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ನೂತನ ಚರ್ಚ್ ಕಟ್ಟಡದ ಆಶೀರ್ವಚನ ಮತ್ತು ಉದ್ಘಾಟನೆಯ ಬಳಿಕ ದಿವ್ಯ ಬಲಿಪೂಜೆ ಹಾಗೂ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಪತ್ರಿಕಾ ಗೋಷ್ಠಿಯಲ್ಲಿ ಚರ್ಚ್‌ನ ಧರ್ಮಗುರು ರೆ. ಪಾ. ವಾಲ್ಟರ್ ಡಿಸೋಜ, ಉಪಾಧ್ಯಕ್ಷ ಡೆನ್ನಿಸ್ ಮಚಾದೊ, ಕಾರ್ಯದರ್ಶಿ ಆಶಾ ಮೊಂತೆರೋ, ವಾರ್ಡ್‌ನ ಮುಖ್ಯಸ್ಥ ತೋಮಸ್ ಡಿಸೋಜಾ ಹಾಗೂ ಫೋರ್ ವಿಂಡ್ಸ್ ಮಾಸ್ ಕಮ್ಯೂನಿಕೇಶನ್ಸ್ ನಿರ್ದೇಶಕ ಇ. ಫೆೆರ್ನಾಂಡಿಸ್ ಉಪಸ್ಥಿತರಿದ್ದರು.
Next Story





