ಎಟಿಎಂ ಕ್ಯೂಗೆ ನುಗ್ಗಿದ ಕಾರು; 12 ಮಂದಿಗೆ ಗಾಯ
ಸೋಲಾಪುರ, ಡಿ.9: ಕುಡುಕ ಚಾಲಕನೊಬ್ಬ ನಡೆಸುತ್ತಿದ್ದ ನೆನ್ನಲಾದ ಕಾರೊಂದು ಸೋಲಾಪುರ ಜಿಲ್ಲೆಯ ಎಟಿಎಂ ಒಂದರ ಬಳಿ ನಿಂತಿದ್ದ ಸರತಿಯ ಸಾಲಿನ ಮೇಲೆ ಹರಿದು 12 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆಯೆನ್ನಲಾಗಿದೆ.
ಸೋಲಾಪುರ-ಬಿಜಾಪುರ ರಸ್ತೆಯಲ್ಲಿ ಪೂರ್ವಾಹ್ನ 11ರ ವೇಳೆ ಈ ಘಟನೆ ನಡೆದಿದೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಬಿಜಾಪುರ ರಸ್ತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ಸೋಲಾಪುರ ಎಸ್ಪಿ, ರವೀಂದ್ರ ಸೇನ್ಗಾಂವ್ಕರ್ ತಿಳಿಸಿದ್ದಾರೆ.
ಕುಡಿತದ ಅಮಲಿನಲ್ಲಿದ್ದನೆನ್ನಲಾದ ಚಾಲಕನನ್ನು ಜನರು ಥಳಿಸಿ, ಪೊಲೀಸರಿಗೊಪ್ಪಿಸಿದ್ದರು.
Next Story





