ಡಿ.13: ವೆಯ್ಟಲಿಫ್ಟಿಂಗ್, ಬಾಡಿ ಬಿಲ್ಡಿಂಗ್ ಸ್ಪರ್ಧೆ
ಮಂಗಳೂರು, ಡಿ.9: ದ.ಕ. ಜಿಲ್ಲಾ ವೆಯ್ಟ ಲಿಫ್ಟಿಂಗ್ ಮತ್ತು ಜಿಲ್ಲಾ ಬಾಡಿ ಬಿಲ್ಡಿಂಗ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ವೆಯ್ಟಾಲಿಫ್ಟಿಂಗ್ ಮತ್ತು ಬಾಡಿ ಬಿಲ್ಡಿಂಗ್ ಸ್ಪರ್ಧೆ ‘ಮೀ. ದ.ಕ. ಕ್ಲಾಸಿಕ್ 2016’ ಡಿ.13ರಂದು ನಗರದ ಡಾನ್‌ಬಾಸ್ಕೊ ಸಭಾಂಗಣದಲ್ಲಿ ನಡೆಯಲಿದೆ ಎಂದು ರಾಜ್ಯ ಕಾರ್ಯಾಧ್ಯಕ್ಷ ಜಾನ್ ರೆಬೆಲ್ಲೊ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೆಯ್ಟಲಿಫ್ಟಿಂಗ್‌ನಲ್ಲಿ ಪುರುಷರಿಗೆ 8, ಮಹಿಳೆಯರಿಗೆ 7 ವಿಭಾಗದ ದೇಹತೂಕ ಸ್ಪರ್ಧೆಗಳು ನಡೆಯಲಿದೆ. 150ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸುವರು. ವಿಜೇತರಿಗೆ ಕ್ರಮವಾಗಿ 5 ಸಾವಿರ ರೂ., 3 ಸಾವಿರ ರೂ., 2 ಸಾವಿರ ರೂ. ನಗದು ಮತ್ತು ಪಾರಿತೋಷಕ ನೀಡಲಾಗುವುದು. ಮೂಡುಬಿದಿರೆಯ ಆಳ್ವಾಸ್, ಧವಳಾ ಕಾಲೇಜು, ಎಸ್‌ಡಿಎಂ, ಪುತ್ತೂರು ವಿವೇಕಾನಂದ, ಸೈಂಟ್ ಫಿಲೋಮಿನಾ ಮತ್ತಿತರ ಕಾಲೇಜುಗಳ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದರು. ಬೆಳಗ್ಗೆ 10ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸುವರು. ರಾತ್ರಿ 8 ಗಂಟೆಗೆ ನಡೆಯುವ ಸಮಾರೋಪದಲ್ಲಿ ಉದ್ಯಮಿ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದ.ಕ.ವೆಯ್ಟಿ ಲಿಫ್ಟಿಂಗ್ ಅಸೋಸಿಯೇಶನ್‌ನ ಕಾರ್ಯದರ್ಶಿ ಕಮಲಾಕ್ಷ ಅಮೀನ್, ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ದಿಲೀಪ್ ಕುಮಾರ್, ಪ್ರಮುಖರಾದ ಫ್ರಾನ್ಸಿಸ್ ಡಿಸೋಜ, ಸುಂದರರಾಜ್ ಉಪಸ್ಥಿತರಿದ್ದರು.





