ಬ್ಯಾಂಕ್ ಸರತಿಯಲ್ಲಿ ಮತ್ತೊಂದು ಸಾವು
ಮುಝಫ್ಫರ್‌ನಗರ, ಡಿ.9: ಶಾಮ್ಲಿ ಜಿಲ್ಲೆಯ ಬ್ಯಾಂಕೊಂದರ ಮುಂದೆ ಹಣ ಪಡೆಯಲು ಸರತಿಯ ಸಾಲಿನಲ್ಲಿ ನಿಂತಿದ್ದ 50ರ ಹರೆಯದ ವ್ಯಕ್ತಿಯೊಬ್ಬ ಕುಸಿದು ಬಿದ್ದು ಮೃತಪಟ್ಟರೆಂದು ಪೊಲೀಸರಿಂದು ತಿಳಿಸಿದ್ದಾರೆ.
ಇಮ್ರಾನ್ ಅಹ್ಮದ್ ಎಂಬ ಈ ಕ್ಷಯರೋಗಿ ಹಣ ಪಡೆಯಲೆಂದು ನಿನ್ನೆ ಬ್ಯಾಂಕ್‌ಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆಯೆಂದು ಅವರು ಹೇಳಿದ್ದಾರೆ.
ಆತ ಸರತಿಯ ಸಾಲಿನಲ್ಲಿ ಕುಸಿದು ಬಿದ್ದು, ಸ್ಥಳದಲ್ಲೇ ಅಸುನೀಗಿದರೆಂದು ಪೊಲೀಸರು ತಿಳಿಸಿದ್ದಾರೆ.
ಇಮ್ರಾನ್ ಹತ್ತಿರದ ಸರಕಾರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದನೆಂದು ಆತನ ಪತ್ನಿ ರಬಿಯಾ ಬೇಗಂ ಎಂಬಾಕೆ ಮಾಹಿತಿ ನೀಡಿದ್ದಾಳೆ.
Next Story





