ನಾಳೆ ‘ಸಿಟಿಜನ್ ಅವಾರ್ಡ್’ ಪ್ರಶಸ್ತಿ ಪ್ರದಾನ
ಮಂಗಳೂರು, ಡಿ.9: ‘ಲೇಟೆಸ್ಟ್ ನ್ಯೂಸ್ ಪ್ರೊಡಕ್ಷನ್’ ಸಂಸ್ಥೆಯ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಸಿಟಿಝನ್ ಅವಾರ್ಡ್’ ಪ್ರಶಸ್ತಿ ಪ್ರದಾನ ಸಮಾರಂಭ ಡಿ.11ರಂದು ಸಂಜೆ 5 ಗಂಟೆಗೆ ನಗರದ ಸೈಂಟ್ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಜರಗಲಿದೆ ಎಂದು ಉಪಸಂಪಾದಕಿ ಭಾಗೀರಥಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪರಿಸರ ಮತ್ತು ಗಿಡಮೂಲಿಕಾ ತಜ್ಞ ಶ್ರೀಕಾಂತ್ ರಾವ್, ಸಮಾಜ ಸೇವಕ ಡೇವಿಡ್ ಡಿಸೋಜ, ಮುಹಮ್ಮದ್ ಶರೀಫ್, ಕಲಾವಿದ ಜೀವನ್, ಬಾಲಪ್ರತಿಭೆಗಳಾದ ದಿಯಾ ರಾಣಿ, ತುಳಸಿ ಹೆಗ್ಡೆ ಮತ್ತು ಹರೀಶ್ ಭಟ್‌ರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಲಿದ್ದು, ಮೇಯರ್ ಹರಿನಾಥ್ ಕಾರ್ಯಕ್ರಮ ಉದ್ಘಾಟಿಸುವರು. ಆಹಾರ ಸಚಿವ ಯು.ಟಿ.ಖಾದರ್, ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶ ಮಲ್ಲಣ್ಣ ಗೌಡ ಪಾಟೀಲ್, ಬಾಲ ಪ್ರತಿಭೆಗಳಾದ ಅದ್ವಿಕಾ ಶೆಟ್ಟಿ ಮತ್ತು ಪೂರ್ವಿ ಭಟ್ ಮುಖ್ಯ ಅತಿಥಿಗಳಾಗಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಪಾದಕ ಮೋಹನ್ ಬೋಳಂಗಡಿ, ಸುದ್ದಿ ಸಂಪಾದಕ ನಿಖಿಲ್ ಕೋಲ್ಪೆ, ಛಾಯಾಗ್ರಾಹಕ ಸುಬ್ರಹ್ಮಣ್ಯ ಆಚಾರ್ಯ, ಉಪ ಸಂಪಾದಕಿ ಪದ್ಮಶ್ರೀ ಜೈನ್ ಉಪಸ್ಥಿತರಿದ್ದರು.







