ಮಾನಭಂಗಕ್ಕೆ ಯತ್ನ: ದೂರು
ಬಂಟ್ವಾಳ, ಡಿ.9: ತಾಲೂಕಿನ ಸಜಿಪನಡು ಗ್ರಾಮದಲ್ಲಿ ಪಾನಮತ್ತ ಹಾಗೂ ಗಾಂಜಾ ವ್ಯಸನಿಯೋರ್ವ ಮಧ್ಯವಯಸ್ಕ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣ ನಡೆದಿದೆ.
ಬುಧವಾರ ಮಧ್ಯರಾತ್ರಿ ಸ್ಥಳೀಯ ನಿವಾಸಿ ಸಿದ್ದೀಕ್(30) ತನ್ನದೇ ಊರಿನ 52ವರ್ಷದ ಒಂಟಿಯಾಗಿ ವಾಸಿಸುವ ಮಹಿಳೆಯೋರ್ವರ ಮನೆಗೆ ಆಗಮಿಸಿ ಬಾಗಿಲು ಬಡಿದಿದ್ದಾನೆಂದು ತಿಳಿದು ಬಂದಿದೆ. ಶಬ್ದ ಕೇಳಿ ಮಹಿಳೆ ಬಾಗಿಲು ತೆರೆದಾಗ, ಆರೋಪಿ ಬಲಾತ್ಕಾರವಾಗಿ ಮನೆಯೊಳಗೆ ನುಗ್ಗಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಮಹಿಳೆ ಬೊಬ್ಬೆ ಹಾಕಿದಾಗ ಆರೋಪಿ ಓಡಿದ್ದಾನೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಹಿಳೆ ನೀಡಿದ ದೂರಿನನ್ವಯ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story