ಡಿ.11-11ರಂದು ಪಕ್ಕಲಡ್ಕದಲ್ಲಿ ಮೀಲಾದ್ ಕಾರ್ಯಕ್ರಮ
ಪಕ್ಕಲಡ್ಕ, ಡಿ.10: ಇಲ್ಲಿನ ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಮದ್ರಸದ ಆಶ್ರಯದಲ್ಲಿ ಮೀಲಾದ್ ಕಾರ್ಯಕ್ರಮವು ಡಿ.11 ಮತ್ತು 12ರಂದು ಮಸೀದಿ ವಠಾರದಲ್ಲಿ ನಡೆಯಲಿದೆ. ಡಿ.11ರಂದು ಮಗ್ರಿಬ್ ಬಳಿಕ ಬುರ್ದಾ ಮಜ್ಲಿಸ್ ಮತ್ತು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ನಡೆಯಲಿದೆ. ಜಮಾಅತ್ ಅಧ್ಯಕ್ಷ ಹಾಜಿ ಅಬೂಬಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸದರ್ ಮುಅಲ್ಲಿಂ ರಫೀಕ್ ಮುಸ್ಲಿಯಾರ್ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ.
ಡಿ.12ರಂದು ಬೆಳಗ್ಗೆ ಮೀಲಾದ್ ರ್ಯಾಲಿ ನಡೆಯಲಿದೆ. ಪೂರ್ವಾಹ್ನ 11 ಗಂಟೆಗೆ ಖತೀಬ್ ಉಸ್ತಾದ್ ನೇತೃತ್ವದಲ್ಲಿ ವೌಲಿದ್ ಪಾರಾಯಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ನಝೀರ್ ಅಝ್ಹರಿ ಬೊಳ್ಮಿನಾರ್ ನೇತೃತ್ವದಲ್ಲಿ ಮಜ್ಲಿಸುನ್ನೂರ್ ಜರಗಲಿದೆ. ಸದರ್ ಮುಅಲ್ಲಿಂ ರಫೀಕ್ ಮುಸ್ಲಿಯಾರ್ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story