ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕಾರಣಿ ಸಭೆ

ಉಡುಪಿ, ಡಿ.10: ಬಿಜೆಪಿ ಉಡುಪಿ ನಗರ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕಾರಣಿ ಸಭೆಯು ನಗರ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ದಾವೂದ್ ಅಬೂಬಕ್ಕರ್ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಕಛೇರಿ ಯಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯನ್ನು ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ್ ಪೂಜಾರಿ ಉದ್ಘಾಟಿಸಿದರು. ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಸೋಜನ್ ಪಿ.ಜೇಮ್ಸ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ, ರಾಜ್ಯ ಅಲ್ಪ ಸಂಖ್ಯಾತ ಮೋರ್ಚಾ ಕಾರ್ಯಕಾರಣಿ ಸದಸ್ಯೆ ಗ್ಲಾಡೀಸ್ ಅಲ್ಮೇಡಾ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹಾಗೂ ಮೋರ್ಚಾದ ಜಿಲ್ಲಾ ಪ್ರಭಾರಿ ಎಂ. ಸಲೀಂ ಅಂಬಾಗಿಲು ಮಾತನಾಡಿದರು.
ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆರಿಫ್ ಅಹಮ್ಮದ್, ವೆನಿಲ್ಲಾ ಅಬೂಬಕ್ಕರ್, ಮೋರ್ಚಾದ ನಗರ ಉಸ್ತುವಾರಿ ಅರ್ಶದ್ ಕುಕ್ಕಿಕಟ್ಟೆ, ಉಪಾಧ್ಯಕ್ಷ ವಾಲ್ಟರ್ ಡಿಸೋಜ, ಕಾರ್ಯದರ್ಶಿಗಳಾದ ನಾಸಿರ್, ರಫಾಯತ್ ಡಿಸೋಜ, ಹಕ್ ಅಭಿಜಿತ್, ಫಯಾಜ್, ಕೋಶಾ ಧಿಕಾರಿ ಪೀಟರ್ ಉಪಸ್ಥಿತರಿದ್ದರು.
ನಗರ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಅಲ್ವಿನ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಜುನೈದ್ ಕಾರ್ಯಕ್ರಮ ನಿರೂಪಿಸಿದರು.





