ಮುಡಿಪು: ಮಜ್ಲಿಸ್ ಎಜುಪಾರ್ಕ್ ವತಿಯಿಂದ ಹುಬ್ಬುನಬಿ ಕಾನ್ಫರೆನ್ಸ್

ಉಳ್ಳಾಲ, ಡಿ.10: ಪ್ರವಾದಿಯವರು ಕಗ್ಗತ್ತಿನಲ್ಲಿ ವಾಸವಿದ್ದವರನ್ನು ಬೋಧನೆಯ ಮೂಲಕ ಬೆಳಕಿಗೆ ತಂದವರು. ಅವರ ಉಪದೇಶದಿಂದ ಇಸ್ಲಾಮ್ ಬೆಳೆದಿದೆ. ಅವರ ಸಂದೇಶವನ್ನು ಅನುಕರಣೆ ಮಾಡಿ ಇಸ್ಲಾಮಿನ ಚೌಕಟ್ಟಿನೊಳಗೆ ಬದುಕುವ ಕೆಲಸ ಮಾಡಬೇಕು ಎಂದು ಮಂಜನಾಡಿ ಅಲ್‌ಮದೀನಾ ಅಧ್ಯಕ್ಷ ಪಿ.ಎಂ ಅಬ್ಬಾಸ್ ಮುಸ್ಲಿಯಾರ್ ಹೇಳಿದರು.
ಮುಡಿಪು ಮಜ್ಲಿಸ್ ಎಜುಪಾರ್ಕ್ ಆಶ್ರಯದಲ್ಲಿ ಶುಕ್ರವಾರ ನಡೆದ ‘ಹುಬ್ಬುನಬಿ ಕಾನ್ಫರೆನ್ಸ್’ ಮತ್ತು ಸಂಸ್ಥೆಯ ಸ್ಫಟಿಕ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಸೈಯದ್ ಅಶ್ರಫ್ ತಂಙಳ್ ಆದೂರು ಮಾತನಾಡಿ. ಪ್ರವಾದಿಯವರ ಮತ್ತು ಇಸ್ಲಾಮ್ ಧರ್ಮದ ಸಂದೇಶವನ್ನು ಜನತೆಗೆ ತಲುಪಿಸುವ ಗುರಿಯಿಟ್ಟು ಈ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಸಮಾಜ ಮತ್ತು ಶೈಕ್ಷಣಿಕ ಕೇತ್ರಗಳ ಅಭಿವೃದ್ಧಿಯ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಎಸ್‌ವೈಎಸ್ ರಾಜ್ಯಾಧ್ಯಕ್ಷ ಹುಸೈನ್ ಸಅದಿ ಕೆಸಿರೋಡ್, ಆಲಿಕುಂಞಿ ಉಸ್ತಾದ್ ಶಿರಿಯಾ, ಹಮೀದ್ ಮುಸ್ಲಿಯಾರ್ ಮಾಣಿ ಸಂದೇಶ ನೀಡಿದರು.
ಕಾರ್ಯಕ್ರಮದ ಪ್ರಯುಕ್ತ ಸಾಂಬಾರ್ ತೋಟ ಮಸೀದಿಯಿಂದ ಮಜ್ಲಿಸ್ ಎಜು ಪಾರ್ಕ್‌ವರೆಗೆ ಮಜ್‌ಲಿಸೇ ಮಅ್ಶೂಕ್ ಮೀಲಾದ್ ರ್ಯಾಲಿ ನಡೆಸಲಾಯಿತು.
ವೇದಿಕೆಯಲ್ಲಿ ಎಸ್‌ವೈಎಸ್ ಮುಡಿಪು ಸೆಂಟರ್ ಅಧ್ಯಕ್ಷ ಎಸ್.ಕೆ. ಖಾದರ್ ಹಾಜಿ, ಸಾಮಣಿಗೆ ಮದನಿ, ಪಿ.ಕೆ. ಮುಹಮ್ಮದ್ ಮದನಿ, ಹಸನ್ ಹಾಜಿ ಸಾಂಬಾರ್ ತೋಟ ಉಪಸ್ಥಿತರಿದ್ದರು. ಮುನೀರ್ ಅಹ್ಸನಿ ಸ್ವಾಗತಿಸಿದರು.







