' ತಿರ್ಬೋಕಿ ಜೀವನ ' ಇಂಟರ್ನೆಟ್ ನಲ್ಲಿ ಸೂಪರ್ ಹಿಟ್
ರಕ್ಷಿತ್ ಶೆಟ್ಟಿಯ ಕಿರಿಕ್ ಪಾರ್ಟಿಯ ಹಾಡು

ಬೆಂಗಳೂರು, ಡಿ. 10 : ರಕ್ಷಿತ್ ಶೆಟ್ಟಿಯವರ ಮುಂದಿನ ಚಿತ್ರ ಕಿರಿಕ್ ಪಾರ್ಟಿಯ ಹಾಡು ' ತಿರ್ಬೋಕಿ ಜೀವನ ' ಇಂಟರ್ನೆಟ್ ನಲ್ಲಿ ಬಿರುಗಾಳಿಯೆಬ್ಬಿಸಿದೆ. ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಹಾಡನ್ನು ಮೂರು ವಾರಗಳಲ್ಲಿ ಈಗಾಗಲೇ ಯುಟೂಬ್ ನಲ್ಲಿ 6.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಉಳಿದವರು ಕಂಡಂತೆ , ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತಹ ವಿಭಿನ್ನ ಹಾಗು ರಿಫ್ರೆಶಿಂಗ್ ವಸ್ತುಗಳ ಸಿನಿಮಾ ನೀಡಿರುವ ರಕ್ಷಿತ್ ಶೆಟ್ಟಿ ಅವರ ಕ್ಯಾಮ್ಪಸ್ ಕತೆಯಂತೆ ಕಾಣುವ ಕಿರಿಕ್ ಪಾರ್ಟಿ ತೀವ್ರ ಕುತೂಹಲ ಕೆರಳಿಸಿದೆ . ಜೊತೆಗೆ ಅದರ ಹಾಡು ' ತಿರ್ಬೋಕಿ ಜೀವನ ' ( ಸಸ್ಪೆನ್ಡ್ ಸಾಂಗ್ ಎಂದೂ ಕರೆಯಲಾಗುತ್ತಿದೆ) ಸೂಪರ್ ಹಿಟ್ ಆಗಿರುವುದು ಚಿತ್ರಕ್ಕೆ ಉತ್ತಮ ಆರಂಭವನ್ನೇ ಒದಗಿಸಿದೆ.
ಥ್ರೀ ಈಡಿಯಟ್ಸ್ ನ ಪುಸ್ತಕದ ಹುಳು ಪ್ರಾಂಶುಪಾಲನ ಕನ್ನಡ ಅವತಾರದಂತೆ ಕಾಣುವ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಆರು ವಿದ್ಯಾರ್ಥಿಗಳನ್ನು ಸಸ್ಪೆನ್ಡ್ ಮಾಡುವ ದೃಶ್ಯದಿಂದ ಈ ನಾಲ್ಕು ನಿಮಿಷಗಳ ಹಾಡು ಪ್ರಾರಂಭವಾಗುತ್ತದೆ.
ಸಸ್ಪೆನ್ಡ್ ಆದ ಆರು ಮಂದಿ ನೀವೇನಾ ಎಂಬ ಪ್ರಶ್ನೆಯನ್ನು ಹಲವು ಬಾರಿ ಎದುರಿಸುವ ರಕ್ಷಿತ್ ಶೆಟ್ಟಿ ಸಹಿತ ಆರು ಮಂದಿಯ ತಂಡ ಕಾಲೇಜಿನ ಲಾಸ್ಟ್ ಬೆಂಚರ್ಸ್ ಏನು ಮಾಡುತ್ತಾರೆ ಅದನ್ನೇ ಮಾಡುವುದು ಈ ಹಾಡು .
ರಿಷಬ್ ಶೆಟ್ಟಿ ಚಿತ್ರದ ನಿರ್ದೇಶಕ.







