ಲಾರಿ ಢಿಕ್ಕಿ: ಬೈಕ್ ಸವಾರ ಗಂಭೀರ

ಬಂಟ್ವಾಳ, ಡಿ. 10: ಅಕ್ರಮ ಗಣಿ ಉತ್ಪನ್ನ ಸಾಗಾಟದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಗಂಭೀರ ಗಾಯಗೊಂಡ ಘಟನೆ ಅಡ್ಯನಡ್ಕ ಪೇಟೆಯ ಸಮೀಪ ಶನಿವಾರ ನಡೆದಿದೆ.
ಮೂಡಂಬೈಲು ಸರವು ನಿವಾಸಿ ಅಕ್ಷಯ್ ಕುಮಾರ್ ಎಸ್.(21) ಗಾಯಗೊಂಡ ಬೈಕ್ ಸವಾರ. ಅಕ್ಷಯ್ ಸಾರಡ್ಕ ಕಡೆಯಿಂದ ಅಡ್ಯನಡ್ಕ ಪೇಟೆ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಕೇರಳ ಮೂಲದ ಜಲ್ಲಿ ಹುಡಿ ತುಂಬಿದ್ದ ಲಾರಿ ಚೌರ್ಕಾಡು ಕಡೆ ಹೋಗುವ ರಸ್ತೆಯ ಸಮೀಪದ ತಿರುವಿನಲ್ಲಿ ಬೈಕ್‌ಗೆ ಢಿಕ್ಕಿಯಾಗಿದೆ. ಅರ್ಪಆತದಿಂದ ಬೈಕ್ ಸವಾರನ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಕ್ರಮ ಗಣಿ ಉತ್ಪನ್ನ ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





