ಸುಳ್ಯದಲ್ಲಿ ರಾಜ್ಯ ಮಟ್ಟದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಮ್ಮೇಳನ : ಭಾಷಾ ಸೊಗಡು ಸಾರಿದ ಅಪೂರ್ವ ಕಾರ್ಯಕ್ರಮ
ಅರೆಭಾಷೆಯಲ್ಲಿ ಪರಿಸರದ ಪರಿಮಳ-ಸದಾನಂದ ಗೌಡ
.jpg)
ಸುಳ್ಯ,ಡಿ.10: ಕರ್ನಾಟಕ ಅರೆಬಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಗೌಡರ ಯುವ ಸೇವಾ ಸಂಘ ಸುಳ್ಯ ಇದರ ಸಹಯೋಗದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಮ್ಮೇಳನವು ಕೊಡಿಯಾಲ ಬೈಲ್‌ನ ಗೌಡ ಸಮುದಾಯ ಭವನದಲ್ಲಿ ಆರಂಭಗೊಂಡಿದೆ.
ರಾಜ್ಯ ವಸತಿ ಸಚಿವ ಎಂ.ಕೃಷ್ಣಪ್ಪರವರು ಸಮ್ಮೇಳನವನ್ನು ಉದ್ಘಾಟಿಸಿದರು. ಸಮ್ಮೇಳನದ ಶಿಸ್ತನ್ನು ವಿಶೇಷವಾಗಿ ಶ್ಲಾಘಿಸಿದ ಸಚಿವರು ಅರೆಭಾಷೆಯ ಜನರು ಮತ್ತು ಸಂಸ್ಕೃತಿಯನ್ನು ದೂರದಿಂದ ನೋಡಿ ಗೌರವದಿಂದ ಕಂಡಿದ್ದೆ, ಆದರೆ ಇಂದು ಪ್ರಯಕ್ತವಾಗಿ ನೋಡಿ ಸಂತೋಷವಾಗಿದೆ. ನಿಮ್ಮನ್ನು ನೋಡಿ ನಮಗೆ ಕಲಿಯಲು ಬಹಳವಿದೆ ಎಂದರು. ಎಲ್ಲಾ ಭಾಷೆ ಮತ್ತು ಸಂಸ್ಕೃತಿಯ ಜನರು ಪರಸ್ಪರ ಅರಿತುಕೊಂಡು ಜೀವನ ನಡೆಸಿದರೆ ಬದುಕು ಸುಂದರವಾಗುತ್ತದೆ. ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ರಾಜ್ಯ ಸರಕಾರದ ಜವಬ್ದಾರಿಯಾಗಿದ್ದು, ಸರಕಾರದಿಂದ ಹಾಗೂ ವೈಯಕ್ತಿಕವಾಗಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಎಂ.ಜಿ ಕಾವೇರಮ್ಮ, ಜಯಮ್ಮ ಚೆಟ್ಟಿಮಾಡ ಹಾಗೂ ಉದಯಕುಮಾರಿ ಚೆಂಬು ಅವರ ನೂತನ ಕೃತಿಗಳನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನೆರವೇರಿಸಿದರು. ಉಳಿದ ಎಲ್ಲಾ ಭಾಷೆಗಳಿಗಿಂತಲೂ ಹೆಚ್ಚು ಅರೆಭಾಷೆಗೆ ಹೆಚ್ಚುಗಾರಿಕೆ ಇದೆ. ಅರೆಭಾಷೆಯಲ್ಲಿ ಪರಿಸರದ ಪರಿಮಳವಿದೆ. ಸ್ವಾತಂತ್ರ್ಯ ಸಂಗ್ರಮದ ಕಹಳೆಯಿದೆ. ಮನುಷ್ಯ ಸಹಜ ಪ್ರೀತಿಯಿದೆ, ಸಾಮಾಜಿಕ ಬದುಕಿನ ಚೌಕಟ್ಟಿದೆ. ಆದರ್ಶ ಚಿತಂನೆಗಳಿದೆ, ಸಂಸ್ಕೃತಿಯ ಬೇರುಗಳಿದೆ, ವಿಪುಲಃವಾದ ಸಾಹಿತ್ಯ ಬಂಡಾರವಿದೆ ಎಂದು ಕೊಂಡಾಡಿದ ಕೇಂದ್ರ ಸಚಿವರು ಪಶ್ಚಿಮ ಘಟ್ಟದ ತಪ್ಪಲಿನ ಈ ಭಾಷೆ ಜಾತಿಗೆ ಸೀಮಿತವಾಗಿಲ್ಲದೆ ಬೆಳೆದಿದೆ. ಇದು ಕೇವಲ ಅಕಾಡೆಮಿಯ ಸ್ಥಾಪನೆಗಷ್ಟೇ ಸೀಮಿತಗೊಳ್ಳದೆ, ಜಗತ್ತಿನಾಚೆಗೂ ಬೆಳೆಯಬೇಕು ಹಾಗಾಗಬೇಕಿದ್ದರೆ, ಅರೆಭಾಷೆ ಮನೆಮಾತಾಗಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಮಾಜಿ ಸ್ಪೀಕರ್, ಶಾಸಕ ಕೆ.ಜಿ ಬೋಪಯ್ಯ, ಮಾತನಾಡಿ ಸಮುದಾಯ ಭವನವು ನಿರಂತರ ಸಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಬೇಕು ಎಂದರು.
ಸುಳ್ಯದ ಸಂಘಟನಾ ಸಾಮರ್ಥ್ಯ ಮತ್ತು ಭಾಷೆಯ ಮೆಲಿನ ಪ್ರೀತಿಯಿಂದ ಇಲ್ಲಿ ಸಮುದಾಯ ಶಕ್ತವಾಗಿದೆ ಎಂದು ಶಾಸಕ ಎಸ್ ಅಂಗಾರ ಹೇಳಿದರು.
ಸಾಂಸ್ಕೃತಿಕ ಜಗತ್ತು ರೂಪಿಸಿಕೊಳ್ಳುವುದು ಇವತ್ತಿನ ಸವಾಲು. ಅರೆಭಾಷೆ ಇಂತಹ ಸವಾಲನ್ನು ಗೆದ್ದು ಜಗತ್ತಿಗೆ ವ್ಯಾಪಿಸಬೇಕು ಎಂದು ಸ್ಥಿತ್ಯಂತರ ಕಾಲದಲ್ಲಿ ಪ್ರತೀ ಸಮುದಾಯವು ವಹಿಸಬೇಕಾದ ಎಚ್ಚರ ಬಹಳಷ್ಟಿದೆ ಎಂದು ಹಾವೇರಿ ಜನಪದ ವಿ.ವಿ. ಉಪಕುಲಪತಿ ಡಾ.ಚಿನ್ನಪ್ಪ ಗೌಡ ಹೇಳಿದರು. ಸಮ್ಮೇಳನದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಅಂತಃ ಪ್ರಜ್ಞೆ ಚಿದ್ರವಾದರೆ ಯಾವುದೇ ಸಮುದಾಯವು ಅರ್ಧ ಪತನಗೊಳ್ಳುತ್ತದೆ. ಬದುಕುವ ಹಂಬಲ ಮತ್ತು ಮನುಷ್ಯ ಪ್ರೀತಿ ಸಮುದಾಯವನ್ನು ಉಳಿಸುತ್ತದೆ ಎಂದು ಹೇಳಿದರು. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಚಾಮರಾಜನಗರ ಶಾಸಕ ವಾಸು, ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಡಾ. ಕೆ.ವಿ ರೇಣುಕಾ ಪ್ರಸಾದ್, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಉಬರಡ್ಕ ಗ್ರಾ.ಪಂ ಅಧ್ಯಕ್ಷ ಹರೀಶ್ ರೈ ಉಬರಡ್ಕ, ನ.ಪಂ. ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ, ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್, ವಿಶ್ವ ಕನ್ನಡ ಸಮ್ಮೇಳನದ ಸಮನ್ವಯಾಧಿಕಾರಿ ಎಸ್.ಐ ಭಾವಿಕಟ್ಟೆ ಅತಿಥಿಗಳಾಗಿ ಉಪಸ್ಥಿತರಿದ್ದರು.
ಅರೆಭಾಷೆ ಅಕಾಡೆಮಿಯ ಸದಸ್ಯರುಗಳಾದ ಡಾ.ಪೂವಪ್ಪ ಕಣಿಯೂರು, ಸದಾನಂದ ಮಾವಾಜಿ, ಬಿ.ಸಿ. ವಸಂತ, ಡಾ.ಕೋರನ ಸರಸ್ವತಿ ಪ್ರಕಾಶ್, ಮದುವೆಗದ್ದೆ ಬೋಜಪ್ಪ ಗೌಡ, ಮಂದ್ರಿರಾ ಜಿ ಮೋಹನ್‌ದಾಸ್, ಯಶವಂತರ ಕುಡೆಕಲ್ಲು, ಸಂತೋಷ್ ಕುಡೆಕಲ್ಲು, ಪಿ.ಎಸ್.ಕಾರ್ಯಪ್ಪ, ಅಣ್ಣಾಜಿ ಗೌಡ ಪೈಲೂರು, ಗೌಡ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್‌ರಾಮ್ ಸುಳ್ಳಿ, ಕೋಶಾಧಿಕಾರಿ ಪಿ.ಸಿ. ಜಯರಾಮ್ ಕಾರ್ಯಕ್ರಮದ ನಿರ್ದೇಶಕರಾದ ಡಾ.ಎನ್.ಎಜ್ಞಾನೇಶ್, ಚಂದ್ರಶೇಖರ ಪೇರಾಲು, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ, ತರುಣ ಘಟಕದ ಅಧ್ಯಕ್ಷ ಶ್ರೆಕಾಂತ್ ಮಾವಿನಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಪ್ರಾಸ್ತಾವಿಕ ಭಾಷಣಗೈದರು. ಅಕಾಡೆಮಿ ರಿಜಿಸ್ಟಾರ್ ಉಮರಬ್ಬ ಸ್ವಾಗತಿಸಿ, ಎ.ವಿ.ತೀರ್ಥರಾಮ ವಂದಿಸಿದರು. ಕೆ.ಟಿ.ವಿಶ್ವನಾಥ, ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು.
ಮೆರವಣಿಗೆ:
ರಾಜ್ಯಮಟ್ಟದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ವೈಭವ ಪೂರ್ಣವಾದ ಮೆರವಣಿಗೆ ನಡೆಯಿತು. ಅಮರಶ್ರೆ ಭಾಗ್‌ನಿಂದ ಆರಂಭಗೊಂಡ ಮೆರವಣಿಗೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿರುವ ಡಾ ಕೆ.ವಿ.ರೇಣುಕಾಪ್ರಸಾದ್ ತೆಂಗಿನಕಾಯಿ ಒಡೆಯುವುದರ ಮೂಲಕ ನೆರವೇರಿಸಿದರು.ಮೆರವಣಿಗೆಯು ನಗರದ ಮುಖ್ಯ ರಸ್ತೆಯ ಮೂಲಕ ಶಾಸ್ತ್ರಿ ವೃತ್ತದವರೆಗೆ ತೆರಳಿತು. ಅಲ್ಲಿಂದ ವಾಹನದ ಮೂಲಕ ಜನರು ಕೊಡಿಯಾಲಬೈಲು ಗೌಡ ಸಮುದಾಯ ಭವನ ತಲುಪಿದರು. ಬಣ್ಣ ಬಣ್ಣದ ಕೊಡೆಗಳು, ಕುದುರೆ, ಕೀಲು ಕುದುರೆ, ಕಲ್ಲಡ್ಕ ಗೊಂಬೆಗಳ ನೃತ್ಯ, ಎರಡು ತಂಡಗಳ ಕೇರಳ ಚೆಂಡೆ ವಾದನ, ಐನ್‌ಮನೆ, ದೈವಸ್ಥಾನಗಳ ಸ್ತಬ್ಧ ಚಿತ್ರ, ಕೊಡಗು ಧಿರಿಸು ಧರಿಸಿದ ಯುವಕರ ತಂಡ, ವಾಲಗ ಮತ್ತಿತರ ಆಕರ್ಷಣೆಗಳು ಮೆರವಣಿಗೆಯಲ್ಲಿತ್ತು.
ವಸ್ತು ಪ್ರದರ್ಶನ:
ರಾಜ್ಯಮಟ್ಟದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಕರ್ಷಕ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ವಸ್ತುಪ್ರದರ್ಶನವನ್ನು ಕುಕ್ಕೆ ಶ್ರೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಉದ್ಘಾಟಿಸಿದರು. ಹಳ್ಳಿಮನೆ ಹೈದರ್ ಅವರ ಪ್ರಾಚ್ಯ ವಸ್ತು ಸಂಗ್ರಹಣೆ, ನಾಣ್ಯಗಳ ಸಂಗ್ರಹ, ವಿವಿಧ ಪ್ರದರ್ಶನ ಹಾಗೂ ವಾಣಿಜ್ಯ ಮಳಿಗೆಗಳನ್ನು ತೆರೆಯಲಾಯಿತು.







