Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ನೋಟು ನಿಷೇಧ: ಸಂಕಷ್ಟದಲ್ಲಿ ಜನತೆ:...

ನೋಟು ನಿಷೇಧ: ಸಂಕಷ್ಟದಲ್ಲಿ ಜನತೆ: ಪ್ರೊ.ರವಿವರ್ಮ ಕುಮಾರ್

ನಿರ್ಧಾರವಾದದ್ದು ಆರ್‌ಬಿಐನಲ್ಲಿ ಅಲ್ಲ, ಆರೆಸ್ಸೆಸ್ ಕಚೇರಿಯಲ್ಲಿ

ವಾರ್ತಾಭಾರತಿವಾರ್ತಾಭಾರತಿ10 Dec 2016 7:52 PM IST
share
ನೋಟು ನಿಷೇಧ: ಸಂಕಷ್ಟದಲ್ಲಿ ಜನತೆ: ಪ್ರೊ.ರವಿವರ್ಮ ಕುಮಾರ್

ಬೆಂಗಳೂರು, ಡಿ. 10: ಐದು ನೂರು ರೂ. ಮತ್ತು ಸಾವಿರ ರೂ.ನೋಟು ಚಲಾವಣೆ ರದ್ದು ನಿರ್ಧಾರವನ್ನು ವೃತ್ತಿಪರ ‘ಆರ್‌ಬಿಐ’ ಕೈಗೊಳ್ಳುವ ಬದಲಿಗೆ ಆರೆಸೆಸ್ಸ್‌ನ ಕೇಂದ್ರ ಕಚೇರಿ ‘ನಾಗ್ಪುರ’ದಲ್ಲಿ ಕೈಗೊಂಡಿದ್ದರಿಂದ ದೇಶದ ಜನತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ನಿವೃತ್ತ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ವಿಶ್ಲೇಷಿಸಿದ್ದಾರೆ.

ಶನಿವಾರ ಇಲ್ಲಿನ ಗಾಂಧಿ ಭವನದಲ್ಲಿ ‘ಲಾಯರ್ಸ್‌ ಫೋರಂ ಫಾರ್ ಸೋಷಿಯಲ್ ಜಸ್ಟಿಸ್’ವತಿಯಿಂದ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ‘ನೋಟು ರದ್ದು ಮತ್ತು ಅದರ ಪರಿಣಾಮ’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಗರಿಷ್ಟ ಪ್ರಮಾಣದ ನೋಟು ಚಲಾವಣೆ ಅಮಾನ್ಯಗೊಳಿಸಿರುವುದು ವೃತ್ತಿಪರ ಆರ್ಥಿಕ ನಿರ್ಧಾರ ಖಂಡಿತ ಅಲ್ಲ. ಯಾವುದೇ ಅಗತ್ಯ ಪೂರ್ವ ಸಿದ್ದತೆ ಇಲ್ಲದೆ, ನೋಟು ಚಲಾವಣೆ ದಿಢೀರ್ ರದ್ದುಗೊಳಿಸಿದ್ದರಿಂದ ನಮ್ಮ ದೇಶದ ಗ್ರಾಮೀಣ ಜನರ ಆರ್ಥಿಕ ಚಟುವಟಿಕೆಗೆ ದೊಡ್ಡಪೆಟ್ಟು ಬಿದ್ದಿದೆ ಎಂದು ಅವರು ಹೇಳಿದರು.

ನೋಟುಗಳನ್ನು ಮುದ್ರಿಸುವ ಮತ್ತು ಅಮಾನ್ಯಗೊಳಿಸುವ ಅಧಿಕಾರ ಆರ್‌ಬಿಐಗೆ ಮಾತ್ರವಿದ್ದು, ಆರ್‌ಬಿಐ ಕೈಗೊಳ್ಳುವ ನಿರ್ಧಾರಕ್ಕೆ ಕೇಂದ್ರ ಮುದ್ರೆ ಒತ್ತಬೇಕು. ಆದರೆ, ಇದೀಗ ಕೇಂದ್ರ ಸರಕಾರ ನೋಟು ಚಲಾವಣೆ ರದ್ದುಪಡಿಸಿ ಆ ನಿರ್ಧಾರಕ್ಕೆ ಆರ್‌ಬಿಐನ ಮುದ್ರೆ ಒತ್ತಿಸಿಕೊಂಡಿರುವುದು ಸಂವಿಧಾನಬಾಹಿರ ಎಂದು ರವಿವರ್ಮ ಕುಮಾರ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಆರ್‌ಬಿಐ ನೋಟು ರದ್ದು ನಿರ್ಧಾರ ಕೈಗೊಂಡಿದ್ದರೆ ಅಗತ್ಯ ಮುನ್ನಚ್ಚರಿಕೆ ಕೈಗೊಳ್ಳುತ್ತಿತ್ತು. ಶೇ.86ರಷ್ಟು ಹಣವನ್ನು ಹಿಂಪಡೆದರೆ ಹೇಗೆ ಬ್ಯಾಂಕುಗಳಿಗೆ ಮರು ಭರ್ತಿ ಮಾಡುವ ಬಗ್ಗೆ ಆಲೋಚಿಸುತ್ತಿತ್ತು. ಕೇಂದ್ರ ಸರಕಾರ ನೋಟು ರದ್ದು ತೀರ್ಮಾನ ಮೂಲಕ ಆರ್‌ಬಿಐನ ಸ್ವಾಯತತ್ತೆಯನ್ನು ನಾಶ ಮಾಡಲಾಗಿದೆ ಎಂದು ಆರೋಪಿಸಿದರು.

ಆರೋಗ್ಯವಂತ ಮನುಷ್ಯನ ದೇಹದಿಂದ ಶೇ.86ರಷ್ಟು ರಕ್ತವನ್ನು ಹೊರತೆಗೆದು ಶೇ.16ರಷ್ಟರಲ್ಲಿ ಬದುಕಬೇಕೆಂದರೆ ಅದು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಮೊದಲೆ ಆರ್ಥಿಕ ಸಂಕಷ್ಟದಲ್ಲಿರುವ ಭಾರತದಂತಹ ದೇಶದಲ್ಲಿ ಶೇ.86ರಷ್ಟು ಗರಿಷ್ಠ ಮೊತ್ತದ ನೋಟು ರದ್ದತಿಯಿಂದ ರೂಪಾಯಿ ವೌಲ್ಯವೇ ಮತ್ತಷ್ಟು ಕುಸಿಯಲಿದೆ ಎಂದು ಎಚ್ಚರಿಸಿದರು.

ಗ್ರಾಮೀಣ ಆರ್ಥಿಕತೆ ನಾಶ: ದೇಶದಲ್ಲಿ 95 ಸಾವಿರ ಸಹಕಾರ ಸಂಘಗಳಿದ್ದು, ನೋಟು ಅಮಾನ್ಯಗೊಳಿಸಿದ್ದರಿಂದ 32 ದಿನಗಳಿಂದ ಸಹಕಾರ ಸಂಘಗಳ ಹಣಕಾಸು ವ್ಯವಹಾರ ಸಂಪೂರ್ಣ ಸ್ತಬ್ಧಗೊಂಡಿದೆ. ಗ್ರಾಮೀಣ ಆರ್ಥಿಕತೆಗೆ ಪುನಶ್ಚೇತನ ನೀಡಿದ್ದ ಸಹಕಾರ ಚಳವಳಿ ಜನತೆ ವಿಶ್ವಾಸ ಕಳೆದುಕೊಳ್ಳುತ್ತಿದೆ. ಗ್ರಾಮೀಣ ಆರ್ಥಿಕತೆಯೂ ನಾಶದಂಚಿಗೆ ಬಂದುನಿಂತಿದೆ ಎಂದು ಅವರು ವಿಶ್ಲೇಷಿಸಿದರು.

ರಾಜ್ಯದಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಭವಿಷ್ಯದಲ್ಲಿ ಹೈನುಗಾರಿಕೆ ನೆಲಕಚ್ಚುವ ಆತಂಕವಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ರೈತರ ಆತ್ಮಹತ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ರವಿವರ್ಮ ಕುಮಾರ್ ಹೇಳಿದರು.

ಶೇ.70ರಷ್ಟು ಜನತೆ ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಸಂಘಗಳ ಮೂಲಕವೆ ಹಳ್ಳಿಗಾಡಿನ ಜನತೆ ತಮ್ಮ ಆರ್ಥಿಕ ವ್ಯವಹಾರ ನಡೆಸುತ್ತಿದ್ದಾರೆ. 68.78ಲಕ್ಷ ಕೋಟಿ ರೂ. ಹಣ ಸಹಕಾರ ಸಂಘಗಳ ಮೂಲಕ ಸಂಗ್ರಹವಾಗುತ್ತದೆ ಎಂದ ಅವರು, ನೋಟು ರದ್ದತಿಯಿಂದ ಸಹಕಾರ ಸಂಘಗಳು ರೈತರಿಗೆ ಕೃಷಿ ಸಾಲ ನೀಡಲು ಆಗದೆ ಬಾಗಿಲು ಮುಚ್ಚುವ ಸ್ಥಿತಿ ತಂದು ನಿಲ್ಲಿಸಲಾಗಿದೆ. ಸಹಕಾರ ಬ್ಯಾಂಕುಗಳ ಆರ್ಥಿಕ ಚಟುವಟಿಕೆ ನಿರ್ಬಂಧ ಸಂವಿಧಾನಬಾಹಿರ ಎಂದು ಟೀಕಿಸಿದರು.

ರಂಗೋಲಿ ಇಡುವವರನ್ನೆಲ್ಲ ಅಕ್ಷರಸ್ಥರೆಂದು ಪರಿಗಣಿಸಿ ನಗದು ರಹಿತ ಆಡಳಿತ ವ್ಯವಸ್ಥೆ ಜಾರಿಗೆ ತರುತ್ತೇವೆಂದು ಹೊರಟಿರುವ ಪ್ರಧಾನಿ ನರೇಂದ್ರ ಮೋದಿಯವರು, ಮೊದಲು ದೇಶದಲ್ಲಿ ಚಿನ್ಹೆ ರಹಿತ ಚುನಾವಣಾ ವ್ಯವಸ್ಥೆ ಜಾರಿಗೆ ತರಲಿ ಎಂದು ರವಿವರ್ಮ ಕುಮಾರ್ ಇದೇ ವೇಳೆ ಸವಾಲು ಹಾಕಿದರು.

ಎನ್‌ಟಿಎಂ: ದಿನದ ಇಪ್ಪತ್ತ್ನಾಲ್ಕು ಗಂಟೆಯೂ ಹಣ ದೊರೆಯುತ್ತಿದ್ದ ‘ಎಟಿಎಂ’ ಕೇಂದ್ರಗಳು ಇದೀಗ ‘ನೋ ಟೈಂ ಮನಿ’(ಎನ್‌ಟಿಎಂ) ಕೇಂದ್ರಗಳಾಗಿವೆ. ಪ್ರಧಾನಿ ಮೋದಿಯವರ ಒಂದು ತಪ್ಪ ನಿರ್ಧಾರದಿಂದ ಎಟಿಎಂ ಪರಿಕಲ್ಪನೆಯೇ ಬದಲಾಗಿದೆ ಎಂದು ಹೇಳಿದರು.

ನಮ್ಮ ಎಲ್ಲ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣು-ಹಂಪಲು, ಮೀನು-ಮೊಟ್ಟೆ, ಮಾಂಸ ಸೇರಿದಂತೆ ಅಗತ್ಯ ವಸ್ತುಗಳೇ ಇಲ್ಲವಾಗಿದ್ದು, ಆರ್ಥಿಕತೆಯ ಮೂಲ ತಾಣಗಳೇ ‘ಇಲ್ಲ’ಗಳ ತಾಣಗಳಾಗುತ್ತಿವೆ. ನಗದು ರಹಿತ ಆಡಳಿತ ವ್ಯವಸ್ಥೆ ಜಾರಿಗೆ ಮೊದಲು ಈ ಬಗ್ಗೆ ಪ್ರಧಾನಿ ಗಂಭೀರವಾಗಿ ಆಲೋಚಿಸಬೇಕೆಂದು ಕೋರಿದರು.

ದೇಶದಲ್ಲಿನ ಶೇ.70ರಷ್ಟು ಗ್ರಾಮೀಣ ಜನತೆ ಇಂದಿಗೂ ನಗದು ರೂಪದಲ್ಲಿ ತನ್ನ ಆರ್ಥಿಕ ವ್ಯವಹಾರ ನಡೆಸುತ್ತಿದ್ದು, ನಗದು ರಹಿತ ಆಡಳಿತ ನಮ್ಮ ದೇಶದಲ್ಲಿ ಅಸಾಧ್ಯ. ಕಪ್ಪುಹಣ, ಭ್ರಷ್ಟಾಚಾರ ತಡೆಗಟ್ಟುವ ಮೊದಲು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಜನ ಸಾಮಾನ್ಯರ ಸಹಜ ವ್ಯವಹಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಆರ್ಥಿಕ ತಜ್ಞ ಪ್ರೊ.ಕೇಶವ್, ಹೆಚ್ಚುವರಿ ಅಡ್ವೋಕೇಟ್ ಜನರಲ್ ಶಿವಣ್ಣ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಹೋ.ಶ್ರೀನಿವಾಸಯ್ಯ, ನ್ಯಾಯವಾದಿಗಳಾದ ಮಂಜುನಾಥ್, ಕಾಶಿನಾಥ್ ಸೇರಿದಂತೆ ಇನ್ನಿತರ ಗಣ್ಯರು ಸಂಕಿರಣದಲ್ಲಿ ಹಾಜರಿದ್ದರು.

‘ನೋಟು ಅಮಾನ್ಯಗೊಳಿಸಿದ ಬಳಿಕ ದೇಶದ ಸಾಮಾನ್ಯ ಜನಜೀವನದ ಮೇಲಿನ ದುಷ್ಪರಿಣಾಮಗಳ ಬಗ್ಗೆ ನ್ಯಾಯಾಂಗ ವ್ಯವಸ್ಥೆ ಗಂಭೀರವಾಗಿ ಪರಿಗಣಿಸದಿರುವುದು ನಿಜಕ್ಕೂ ಆಘಾತಕಾರಿ. ಜನರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಆದೇಶವನ್ನು ನ್ಯಾಯಾಂಗ ನೀಡಬೇಕಿತ್ತು’

-ಪ್ರೊ.ರವಿವರ್ಮ ಕುಮಾರ್ ನಿವೃತ್ತ ಅಡ್ವೋಕೆಟ್ ಜನರಲ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X