Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ರಾಜಕಾರಣದಲ್ಲಿ ಕಪ್ಪುಹಣದ ಝಣ..ಝಣ...

ರಾಜಕಾರಣದಲ್ಲಿ ಕಪ್ಪುಹಣದ ಝಣ..ಝಣ...

ಆಶಿಶ್ ಖೇತನ್ಆಶಿಶ್ ಖೇತನ್10 Dec 2016 8:06 PM IST
share
ರಾಜಕಾರಣದಲ್ಲಿ ಕಪ್ಪುಹಣದ ಝಣ..ಝಣ...

ರಾಜಕೀಯವು ಶ್ರೀಮಂತರ ಆಟವಾಗಿದೆ ಎಂಬುದು ಸಾಮಾನ್ಯ ನಂಬಿಕೆಯ. ರಾಜಕಾರಣಿಗಳು ಹಾಗೂ ಕಪ್ಪು ಹಣ ಇವೆರಡೂ ಜೊತೆಜೊತೆಯಾಗಿ ಸಾಗುತ್ತವೆ. ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಬಿಹಾರದಂತಹ ಉತ್ತರ ಭಾರತದ ರಾಜ್ಯಗಳಲ್ಲಿ ಶಾಸಕರು ತಮ್ಮ ಭಟ್ಟಂಗಿಗಳೊಂದಿಗೆ ಎಸ್‌ಯುವಿ ಕಾರುಗಳ ಸಾರೋಟಿನಲ್ಲಿ ಸಂಚರಿಸುತ್ತಿರುತ್ತಾರೆ. ಪ್ರತಿಯೊಬ್ಬ ಸಚಿವನೂ ಸ್ವತಃ ಪರ್ಯಾಯ ಆರ್ಥಿಕತೆಯಾಗಿದ್ದಾನೆ. ಆತನ ಚೇಲಾಗಳು ತಮ್ಮ ಅಸ್ತಿತ್ವಕ್ಕಾಗಿ ಆತನನ್ನೇ ಸಂಪೂರ್ಣವಾಗಿ ಅವಲಂಬಿಸಿರುತ್ತಾರೆ.

ಕೇಂದ್ರೀಯ ಚುನಾವಣಾ ಆಯೋಗದ ಆದೇಶವು ಕಾಂಗ್ರೆಸ್, ಬಿಜೆಪಿ, ಸಿಪಿಎಂ, ಸಿಪಿಐ, ಎನ್‌ಸಿಪಿ ಹಾಗೂ ಬಿಎಸ್ಪಿಯನ್ನು ಸಾರ್ವಜನಿಕ ಸಂಸ್ಥೆಗಳೆಂದು ಘೋಷಿಸಿರುವುದರಿಂದ ಅವುಗಳನ್ನು ಆರ್‌ಟಿಐ ಕಾಯ್ದೆ ಸೆಕ್ಷನ್ 2(ಎಚ್)ರ ವ್ಯಾಪ್ತಿಗೆ ತರಬೇಕು. ಎಲ್ಲಾ ರಾಜಕೀಯ ಪಕ್ಷಗಳು ಈ ಆದೇಶವನ್ನು ವಿರೋಧಿಸುತ್ತಿವೆ. ಈತನಕವೂ ಅದನ್ನು ಉಲ್ಲಂಘಿಸುತ್ತಿವೆ. ಈ ಹಿಂದೆ ಲೋಕಸಭೆಯು ಸಾರ್ವಜನಿಕ ಸಂಸ್ಥೆಗಳ ವ್ಯಾಪ್ತಿಯಿಂದ ರಾಜಕೀಯ ಪಕ್ಷಗಳನ್ನು ಹೊರತುಪಡಿಸುವುದಕ್ಕಾಗಿ ಆರ್‌ಟಿಐ ಕಾಯ್ದೆಗೆ ತಿದ್ದುಪಡಿ ತರಲು ಯತ್ನಿಸಿತ್ತು. ಆದರೆ ಈ ವಿಧೇಯಕವು ಕಾಲಾವಧಿ ಮೀರಿದ್ದರಿಂದ ಅಂಗೀಕಾರಗೊಳ್ಳಲಿಲ್ಲ

‘‘ಜಾಡು ಊಪರ್ ಸೆ ಲಗಾಯಿ ಜಾತಿ ಹೈ’’ ಎಂಬ ಜನಪ್ರಿಯ ಹಿಂದಿ ನಾಣ್ಣುಡಿಯಂತೆ, ನೀವು ನಿಮ್ಮ ಮನೆಯನ್ನು ನಿಜಕ್ಕೂ ಸ್ವಚ್ಛಗೊಳಿಸಲು ಬಯಸುವಿರಾದರೆ, ಮೇಲ್ಛಾವಣಿಯಿಂದಲೇ ಸ್ವಚ್ಛಗೊಳಿಸುವುದನ್ನು ಆರಂಭಿಸಬೇ ಕಾಗುತ್ತದೆ.

ಪ್ರಧಾನಿಯವರು ಭ್ರಷ್ಟಾಚಾರ ಹಾಗೂ ಕಪ್ಪುಹಣವನ್ನು ದೇಶ ದಿಂದಲೇ ಉಚ್ಛಾಟಿಸಲು ಬಯಸಿದ್ದಾರೆ. ಆದಾಗ್ಯೂ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಹಲವಾರು ಚುನಾವಣಾ ಪ್ರಚಾರಗಳನ್ನು ನಡೆಸಿದ ಹಿರಿಯ ರಾಜಕಾರಣಿಯೂ ಆದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜಕೀಯ ಪಕ್ಷಗಳು ಕಪ್ಪುಹಣದ ಏಣಿಯ ತುದಿಯಲ್ಲಿ ಕುಳಿತಿವೆಯೆಂಬ ಸತ್ಯದ ಅರಿವಿದೆ.

‘ಪಾಲಿಟಿಕ್ಸ್ ಪೈಸಾ ವಾಲೋಂ ಕಿ ಖೇಲ್ ಹೈ’(ರಾಜಕೀಯವು ಶ್ರೀಮಂತರ ಆಟವಾಗಿದೆ) ಎಂಬುದು ಸಾಮಾನ್ಯ ನಂಬಿಕೆೆ. ರಾಜಕಾರ ಣಿಗಳು ಹಾಗೂ ಕಪ್ಪು ಹಣ ಇವೆರಡೂ ಜೊತೆಜೊತೆಯಾಗಿ ಸಾಗುತ್ತವೆ. ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಬಿಹಾರದಂತಹ ಉತ್ತರ ಭಾರತದ ರಾಜ್ಯಗಳಲ್ಲಿ ಶಾಸಕರು ತಮ್ಮ ಭಟ್ಟಂಗಿಗಳೊಂದಿಗೆ ಎಸ್‌ಯುವಿ ಕಾರುಗಳ ಸಾರೋಟಿನಲ್ಲಿ ಸಂಚರಿಸುತ್ತಿರುತ್ತಾರೆ. ಪ್ರತಿಯೊಬ್ಬ ಸಚಿವನೂ ಸ್ವತಃ ಪರ್ಯಾಯ ಆರ್ಥಿಕತೆಯಾಗಿದ್ದಾನೆ. ಆತನ ಚೇಲಾಗಳು ತಮ್ಮ ಅಸ್ತಿತ್ವಕ್ಕಾಗಿ ಆತನನ್ನೇ ಸಂಪೂರ್ಣವಾಗಿ ಅವಲಂಬಿಸಿರುತ್ತಾರೆ.

ಆದಾಗ್ಯೂ ಇವರು ನಡೆಸುವ ರಾಜಕಾರಣಕ್ಕೆ ಹಣಕಾಸಿನ ನೆರವು ನೀಡುವವರಾದರೂ ಯಾರು?. ರಸ್ತೆಗಳು, ಸೇತುವೆಗಳು, ಮದ್ಯ ಹೀಗೆ ಹೆಚ್ಚಿನ ಸರಕಾರಿ ಗುತ್ತಿಗೆಗಳನ್ನು ಶಾಸಕರು ತಾವಾಗಿಯೇ ನಿಯಂತ್ರಿಸುತ್ತಿರುವ ಕೂಟಗಳು ಬಾಚಿಕೊಳ್ಳುತ್ತವೆ. ಸಾಧಾರಣ ಶಾಸಕನೊಬ್ಬನ ರಾಜಕೀಯ ಚಕ್ರವು ಸುಗಮವಾಗಿ ಸಾಗುವಂತೆ ಮಾಡುವುದಕ್ಕಾಗಿ ಈ ಗುತ್ತಿಗೆಗಳು ಹೇರಳವಾದ ಹಣವನ್ನು ಸಂಗ್ರಹಿಸಿ ಕೊಡುತ್ತವೆ. ಅನೇಕ ಸಚಿವರು ಹಾಗೂ ಶಾಸಕರು ಗಟ್ಟಿಕುಳ ಗಳಾಗಿದ್ದು, ಹಫ್ತಾ, ಸುಲಿಗೆ, ಸುಪಾರಿ ಮತ್ತಿತರ ಕ್ರಿಮಿನಲ್ ಆದಾಯ ಗಳು ಅವರ ಕಪ್ಪುಹಣದ ಥೈಲಿಯನ್ನು ತುಂಬಿಸುತ್ತವೆ.

 ಹೀಗೆ ಸಂಗ್ರಹಿಸಲಾದ ಕಪ್ಪುಹಣದ ಬಹುದೊಡ್ಡ ಭಾಗವು ಪಕ್ಷದ ನಿಧಿಗೆ ಹೋಗುತ್ತದೆ. ಪಕ್ಷದ ಚುನಾವಣಾ ನಿಧಿ ದೊಡ್ಡದಿದ್ದಷ್ಟೂ ಅದು ಹೆಚ್ಚು ಶಕ್ತಿಶಾಲಿ ಹಾಗೂ ಪ್ರಭಾವಿಯಾಗಿರುತ್ತದೆ. ಅಲ್ಲದೆ ಚುನಾವಣೆಯಲ್ಲಿ ಗೆಲ್ಲುವ ಅವಕಾಶಗಳೂ ಹೆಚ್ಚಾಗಿರುತ್ತದೆ.

ಇದರ ಜೊತೆಗೆ ಗುತ್ತಿಗೆದಾರರು ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಂದಲೂ ಪಕ್ಷಗಳಿಗೆ ಹಣ ಹರಿದುಬರುತ್ತದೆ. ಲೋಕೋ ಪಯೋಗಿ, ನಗರಾಭಿವೃದ್ಧಿ ಹಾಗೂ ನೀರಾವರಿಯಂತಹ ಇಲಾಖೆ ಗಳು ಪಕ್ಷದ ನಿಧಿಗಳಿಗೆ ದೇಣಿಗೆ ನೀಡುತ್ತವೆ. ಗುತ್ತಿಗೆಗಳನ್ನು ನೀಡು ವುದು ಸರಕಾರದ ಇಲಾಖೆಗಳಾದರೂ, ಅದನ್ನು ಪಕ್ಷದ ಮುಖ್ಯ ಕಾರ್ಯಾಲಯಗಳು ನಿರ್ಧರಿಸುತ್ತವೆ.

ನಗದು ಲೆಕ್ಕಪರಿಶೋಧಕ

ಹಾಗಾದರೆ, ರಾಜಕೀಯ ಪಕ್ಷಗಳು ತಾವು ಪಡೆಯುವ ನಗದಿನ ಲೆಕ್ಕಪತ್ರಗಳ ವಿವರಗಳನ್ನು ಸಲ್ಲಿಸುತ್ತವೆಯೇ?

1951ರ ಪ್ರಜಾಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 29ಸಿ ಪ್ರಕಾರ ರಾಜಕೀಯ ಪಕ್ಷಗಳು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳಿಂದ 20 ಸಾವಿರ ರೂ.ಗಳಿಗಿಂತ ಅಧಿಕ ಮೊತ್ತದ ದೇಣಿಗೆಯ ವಿವರಗಳನ್ನು ಸಲ್ಲಿಸಬೇಕಾದ ಅಗತ್ಯವಿದೆ. ಈ ಕಾನೂನಿನ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವ ಕಾಂಗ್ರೆಸ್, ಬಿಜೆಪಿ, ಎನ್‌ಸಿಪಿಯಂತಹ ರಾಜಕೀಯ ಪಕ್ಷಗಳು 2004 ಹಾಗೂ 2015ರ ಮಧ್ಯೆ ತಮ್ಮ ಚುನಾವಣಾ ನಿಧಿಯ ಮೂರನೆ ಎರಡು ಭಾಗದಷ್ಟು ಹಣವನ್ನು ಹೆಸರುಬಹಿರಂಗಪಡಿಸದ ಮೂಲಗಳಿಂದ ಪ್ರತಿಯೊಂದು ವ್ಯವಹಾರಗಳು 20 ಸಾವಿರ ರೂ.ಗಿಂತ ಕಡಿಮೆ ಇರುವಂತೆ ಪ್ರತ್ಯೇಕವಾಗಿ ಸ್ವೀಕರಿಸುತ್ತವೆ.

ಆದರೆ ಆಮ್ ಆದ್ಮಿ ಪಕ್ಷವು ಈ ಪ್ರವೃತ್ತಿಯಿಂದ ಹೊರತಾಗಿದೆ. ಪ್ರಜಾತಾಂತ್ರಿಕ ಸುಧಾರಣೆಗಳು ಹಾಗೂ ರಾಷ್ಟ್ರೀಯ ಚುನಾವಣಾ ಕಣ್ಗಾವಲಿ ಸಮಿತಿಯು ಬಿಡುಗಡೆಗೊಳಿಸಿದ ವರದಿಯ ಪ್ರಕಾರ ಎಎಪಿಯು 2014-15ರ ಸಾಲಿನಲ್ಲಿ 20 ಸಾವಿರ ರೂ.ಗಿಂತ ಕಡಿಮೆ ದೇಣಿಗೆಯ ವಿವರಗಳನ್ನು ಘೋಷಿಸಿದ ಏಕೈಕ ರಾಜಕೀಯ ಪಕ್ಷವಾಗಿದೆ. ಇನ್ನೊಂದೆಡೆ ಬಿಎಸ್ಪಿ ಪಕ್ಷವು ತಾನು ಸ್ವೀಕರಿಸಿದ ಎಲ್ಲಾ ದೇಣಿಗೆಗಳು 20 ಸಾವಿರ ರೂ.ಗಿಂತ ಕಡಿಮೆಯಿರುವಂತೆ ತೋರಿಸಿದೆ.

 ಹೀಗೆ ಅಕ್ರಮ ಸಂಪಾದನೆಯ ಹಣವು ದೇಣಿಗೆಯ ಸೋಗಿನಲ್ಲಿ ನಗದು ರೂಪದಲ್ಲಿ ಒಮ್ಮೆ ಹರಿದುಬಂದ ಆನಂತರ ಚುನಾವಣೆಯಲ್ಲಿ ಗೆಲ್ಲಲು ಅದನ್ನು ಹೇಗೆ ಬಳಸಿಕೊಳ್ಳಬೇಕೆಂಬ ಪ್ರಶ್ನೆ ಉದ್ಭವಿಸುತ್ತದೆ.

ಚುನಾವಣಾ ನೀತಿ ಸಂಹಿತೆ ನಿಯಮಗಳ ನಿಯಮ 90ರಡಿ, ಚುನಾವಣಾ ಆಯೋಗವು ಓರ್ವ ಅಭ್ಯರ್ಥಿಯು ಮಾಡಬಹುದಾದ ಒಟ್ಟು ಚುನಾವಣಾ ವೆಚ್ಚದ ಗರಿಷ್ಠ ಮಿತಿಯನ್ನು ನಿಗದಿಪಡಿಸಿದೆ. ಒಂದು ವೇಳೆ ಈ ಮಿತಿಯನ್ನು ಉಲ್ಲಂಘಿಸಿದಲ್ಲಿ ಅದು 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ 123(6) ಸೆಕ್ಷನ್‌ನಡಿ ಭ್ರಷ್ಟಾಚಾರವೆನಿಸಿಕೊಳ್ಳುತ್ತದೆ ಹಾಗೂ ಇದಕ್ಕಾಗಿ ಅಭ್ಯರ್ಥಿಯನ್ನು ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸುವುದರಿಂದ ಅನರ್ಹಗೊಳಿಸಬಹುದಾಗಿದೆ. ಪ್ರಸ್ತುತ ಬೃಹತ್ ರಾಜ್ಯಗಳಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಮಾಡಬಹುದಾದ ಚುನಾವಣಾ ವೆಚ್ಚದ ಗರಿಷ್ಠ ಮಿತಿ 16 ಲಕ್ಷ ರೂ. ಹಾಗೂ ಲೋಕಸಭಾ ಕ್ಷೇತ್ರದಲ್ಲಿ 40 ಲಕ್ಷ ರೂ.ಗಳಾಗಿವೆ.

 ಆದರೆ ಪಕ್ಷದ ಮಾಡಬಹುದಾದ ವೆಚ್ಚಕ್ಕೆ ಯಾವುದೇ ಮಿತಿಯನ್ನು ವಿಧಿಸಲಾಗಿಲ್ಲ. ಒಂದು ಪಕ್ಷವು ತಾನು ಬಯಸಿದಷ್ಟು ಹಣವನ್ನು ವ್ಯಯಿಸಬಹುದಾದ್ದರಿಂದ, ಓರ್ವ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಮಿತಿಯನ್ನು ವಿಧಿಸುವ ಹಿಂದಿರುವ ಉದ್ದೇಶವು ಪರಾಭವಗೊಳ್ಳುತ್ತದೆ. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ವಿಕೃತಿಯು ಧಾರಾಳವಾಗಿ ಪ್ರದರ್ಶಿಸಲ್ಪಟ್ಟಿತ್ತು. ಈ ಚುನಾವಣೆಯಲ್ಲಿ ಪ್ರಧಾನಿಯವರು ನಿಸ್ಸಂದೇಹವಾಗಿ ಭಾರತದ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ದುಬಾರಿಯಾದ ಚುನಾವಣಾ ಪ್ರಚಾರವನ್ನು ಮುನ್ನಡೆಸಿದರು.

ಆದರೆ ಇದೀಗ ಅಧಿಕಾರದ ಗದ್ದುಗೆಯಲ್ಲಿರುವ ಅವರು ಕಪ್ಪುಹಣದ ವಿರುದ್ಧ ದಾಳಿಯನ್ನು ಆರಂಭಿಸಿದ್ದಾರೆ.

‘‘ಧ್ವಜಗಳು ಹಾರುತ್ತವೆ, ಗೋಡೆಗಳಲ್ಲಿ ಭಿತ್ತಿಬರಹಗಳು ಮೂಡುತ್ತವೆ, ಸಾವಿರಾರು ಧ್ವನಿವರ್ಧಕಗಳು ಜನರಿಗೆ ಅತಿಯಾದ ಭರವಸೆಗಳನ್ನು ನೀಡಿ, ಹುರಿದುಂಬಿಸುತ್ತವೆ. ಗಣ್ಯರು, ಅತೀಗಣ್ಯರು ಬಂದುಹೋಗುತ್ತಾರೆ, ಅವರಲ್ಲಿ ಕೆಲವರು ಹೆಲಿಕಾಪ್ಟರ್‌ಗಳಲ್ಲಿ ಇನ್ನೂ ಕೆಲವರು ವಿಮಾನಗಳಲ್ಲಿ ಧಾವಿಸಿಬರುತ್ತಾರೆ. ಅಧಿಕಾರದಾಹದಿಂದಾಗಿ ರಾಜಕೀಯ ಪಕ್ಷಗಳು ಸಾರ್ವತ್ರಿಕ ಚುನಾವಣೆ ಲೋಕಸಭಾ ಚುನಾವಣೆಯೊಂದರಲ್ಲೇ)ಗೆ ಒಂದು ಸಾವಿರ ಕೋಟಿ ರೂ.ಗೂ ಅಧಿಕ ವ್ಯಯಿಸುತ್ತವೆ. ಆದಾಗ್ಯೂ ಇಷ್ಟೊಂದು ದೊಡ್ಡ ಮೊತ್ತದ ಹಣದ ಲೆಕ್ಕವನ್ನು ಯಾರೂ ಇಟ್ಟುಕೊಳ್ಳುವುದಿಲ್ಲ ಹಾಗೂ ಯಾವುದೇ ಉತ್ತರದಾಯಿತ್ವ ಕೂಡಾ ಇರುವುದಿಲ್ಲ. ಈ ಹಣದ ಮೂಲವನ್ನು ಯಾರು ಕೂಡಾ ಬಹಿರಂಗಪಡಿಸುವುದಿಲ್ಲ. ಅಲ್ಲಿ ಯಾವುದೇ ಲೆಕ್ಕಪತ್ರಗಳು ಹಾಗೂ ಲೆಕ್ಕಪರಿಶೋಧನೆ (ಆಡಿಟ್) ಕೂಡಾ ಇರುವುದಿಲ್ಲ. ಇಷ್ಟೊಂದು ಹಣ ಎಲ್ಲಿಂದ ಹರಿದುಬರುತ್ತದೆಯೆಂದು ಯಾರಿಗೂ ಗೊತ್ತಿರುವುದಿಲ್ಲ. ಈ ರೀತಿ ಕಪ್ಪುಹಣದ ನಗ್ನ ಪ್ರದರ್ಶನದಿಂದ ಕಾನೂನು ಪ್ರಭುತ್ವವು ಹೇಗೆ ನೆಲೆಸಲು ಸಾಧ್ಯ?. ಕಾನೂನಿನ ಕಡ್ಡಾಯ ನಿಯಮಗಳನ್ನು ಉಲ್ಲಂಘಿಸುವುದಕ್ಕೆ ಅವಕಾಶ ನೀಡಲೇಬಾರದು’’ ಎಂದು ಸುಪ್ರೀಂಕೋರ್ಟ್, 1996ರಲ್ಲಿ ನೀಡಿದ ತೀರ್ಪೊಂದರಲ್ಲಿ ಅಭಿಪ್ರಾಯಿಸಿತ್ತು.

ಒಂದು ವೇಳೆ ನ್ಯಾಯಾಲಯವು ಇಂದು ಈ ಅಭಿಪ್ರಾಯವನ್ನು ನೀಡುತ್ತಿದ್ದಲ್ಲಿ, ಅದು ಕಪ್ಪುಹಣದ ನಗ್ನ ಪ್ರದರ್ಶನದ ಪಟ್ಟಿಯಲ್ಲಿ ‘3ಡಿ’ ಹೊಲೊಗ್ರಾಫಿಕ್ ಪ್ರೋಜೆಕ್ಷನ್ ತಂತ್ರಜ್ಞಾನ, ಪ್ರಮುಖ ದಿನಪತ್ರಿಕೆಗಳಲ್ಲಿ ಪೂರ್ಣ ಪುಟದ ಚುನಾವಣಾ ಜಾಹೀರಾತುಗಳು, ಎಲ್‌ಇಡಿ ಸಜ್ಜಿತ ಸಂಚಾರಿ ಪ್ರಚಾರ ವ್ಯಾನ್‌ಗಳು, ಸಾಮಾಜಿಕ ಜಾಲತಾಣಗಳಲ್ಲಿ ಯೋಜಿತವಾಗಿ ಪ್ರಚಾರ ಅಭಿಯಾನ ಇತ್ಯಾದಿಗಳನ್ನು ಕೂಡಾ ಸೇರಿಸುತ್ತಿತ್ತು.

ಬದಲಾವಣೆಗೆ ಸಕಾಲ

ಪ್ರಧಾನಿಗೆ ಈಗ ಐತಿಹಾಸಿಕ ಅವಕಾಶವೊಂದು ಒದಗಿ ಬಂದಿದೆ. ಅಕ ವೌಲ್ಯದ ನೋಟುಗಳ ರದ್ದತಿಯು ದೇಶಾದ್ಯಂತ ಕೋಟ್ಯಂತರ ಮಂದಿ ಜನಸಾಮಾನ್ಯರಿಗೆ ಅನನುಕೂಲವಾಗಿದೆ. ಆದರೆ ದೇಶವನ್ನು ಕಪ್ಪುಹಣದಿಂದ ಮುಕ್ತಗೊಳಿಸಲು ಇದು ಸಕಾಲವಾಗಿದೆ. ಪ್ರಧಾನಿಯವರು ಜನತಾ ಪ್ರಾತಿನಿಧ್ಯ ಕಾಯ್ದೆಯ 29ಸಿ ಸೆಕ್ಷನ್‌ಗೆ ತಿದ್ದುಪಡಿತರಬೇಕಾಗಿದೆ.

ಇದಕ್ಕಿಂತಲೂ ಹೆಚ್ಚಾಗಿ, ವಾರ್ಷಿಕ ವಹಿವಾಟು ರೂ.50 ಕೋಟಿಗೂ ಅಕವಿರುವ ಕಾರ್ಪೊರೇಟ್ ಸಂಸ್ಥೆಗಳಿಂದ ರಾಜಕೀಯ ಪಕ್ಷಗಳು ದೇಣಿಗೆ ಸ್ವೀಕರಿಸುವುದನ್ನು ಅವರು ನಿಷೇಸಬೇಕಾಗಿದೆ. ಇದರಿಂದಾಗಿ ಪಕ್ಷಗಳು ಹಾಗೂ ಸರಕಾರಗಳನ್ನು ‘ಕುಬೇರರು’ ನಿಯಂತ್ರಿಸುವುದನ್ನು ತಪ್ಪಿಸಬಹುದಾಗಿದೆ. ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚಕ್ಕೂ ಅವರು ಮಿತಿ ಹೇರಬೇಕಾಗಿದೆ. ಅಭ್ಯರ್ಥಿಯ ವೈಯಕ್ತಿಕ ಚುನಾವಣಾ ವೆಚ್ಚಕ್ಕೆ ಹೇರಲಾಗುವ ಮಿತಿಗೆ ಅದು ಸರಿಸಮಾನವಾಗಬೇಕಾಗಿದೆ.

 ಚುನಾವಣಾ ಆಯೋಗಕ್ಕೆ ಇನ್ನೂ ಹೆಚ್ಚಿನ ಸ್ವಾಯತ್ತೆ ಹಾಗೂ ಅಕಾರಗಳನ್ನು ಕೂಡಾ ಮೋದಿ ನೀಡಬೇಕು. ಇದರ ಆರಂಭವಾಗಿ ಅವರು ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ಸರಕಾರದ ಹಿಡಿತದಿಂದ ಬಿಡಿಸಬೇಕಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ ಅವರು ಆಯ್ಕೆ ಮಾಡಿದ ಇಬ್ಬರು ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯು ಇನ್ನು ಮುಂದೆ ಚುನಾವಣಾ ಆಯುಕ್ತರನ್ನು ನೇಮಿಸಬೇಕು. ಈ ವರ್ಷದ ಜನವರಿಯಲ್ಲಿ ಚುನಾವಣಾ ಆಯೋಗವು ಸರಕಾರದ ನಿಯಂತ್ರಣದಿಂದ ತನಗೆ ಸಂಪೂರ್ಣ ಸ್ವಾತಂತ್ರ ನೀಡಬೇಕೆಂದು ಕೋರುವ ಪ್ರಸ್ತಾಪವೊಂದನ್ನು ಸಲ್ಲಿಸಿತ್ತು.

ಪ್ರಸ್ತುತ ಆಯೋಗದ ಒಬ್ಬ ಸದಸ್ಯರಿಗಷ್ಟೇ ಸಾಂವಿಧಾನಿಕ ರಕ್ಷಣೆಯಿದ್ದು, ಅದನ್ನು ಎಲ್ಲಾ ಮೂವರು ಸದಸ್ಯರಿಗೆ ವಿಸ್ತರಿಸಬೇಕೆಂದು ಕೂಡಾ ಅದು ಆಗ್ರಹಿಸಿತ್ತು. ಆಯೋಗದ ಈ ಪ್ರಸ್ತಾಪವನ್ನು ಪ್ರಧಾನಿಯವರು ಕೂಡಲೇ ಸ್ವೀಕರಿಸಬೇಕು.

 ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳನ್ನು ಸಾರ್ವಜನಿಕ ಸಂಸ್ಥೆಗಳೆಂದು ಪರಿಗಣಿಸಿ, ಅವನ್ನು 2005ರ ಮಾಹಿತಿ ಹಕ್ಕು ಕಾಯ್ದೆಯಡಿ ತರಬೇಕೆಂಬ ಕೇಂದ್ರೀಯ ಚುನಾವಣಾ ಆಯೋಗದ ಜೂನ್, 2013ರ ಆದೇಶವನ್ನು ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಪಾಲಿಸಬೇಕು.

ಕೇಂದ್ರೀಯ ಚುನಾವಣಾ ಆಯೋಗದ ಆದೇಶವು ಕಾಂಗ್ರೆಸ್, ಬಿಜೆಪಿ, ಸಿಪಿಎಂ, ಸಿಪಿಐ, ಎನ್‌ಸಿಪಿ ಹಾಗೂ ಬಿಎಸ್ಪಿಯನ್ನು ಸಾರ್ವಜನಿಕ ಸಂಸ್ಥೆಗಳೆಂದು ಘೋಷಿಸಿರುವುದರಿಂದ ಅವುಗಳನ್ನು ಆರ್‌ಟಿಐ ಕಾಯ್ದೆ ಸೆಕ್ಷನ್ 2(ಎಚ್)ರ ವ್ಯಾಪ್ತಿಗೆ ತರಬೇಕು. ಎಲ್ಲಾ ರಾಜಕೀಯ ಪಕ್ಷಗಳು ಈ ಆದೇಶವನ್ನು ವಿರೋಸುತ್ತಿವೆ. ಈತನಕವೂ ಅದನ್ನು ಉಲ್ಲಂಸುತ್ತಿವೆ. ಈ ಹಿಂದೆ ಲೋಕಸಭೆಯು ಸಾರ್ವಜನಿಕ ಸಂಸ್ಥೆಗಳ ವ್ಯಾಪ್ತಿಯಿಂದ ರಾಜಕೀಯ ಪಕ್ಷಗಳನ್ನು ಹೊರತುಪಡಿಸುವುದಕ್ಕಾಗಿ ಆರ್‌ಟಿಐ ಕಾಯ್ದೆಗೆ ತಿದ್ದುಪಡಿ ತರಲು ಯತ್ನಿಸಿತ್ತು. ಆದರೆ ಈ ವಿಧೇಯಕವು ಕಾಲಾವ ಮೀರಿದ್ದರಿಂದ ಅಂಗೀಕಾರಗೊಳ್ಳಲಿಲ್ಲ.

ಪ್ರಧಾನಿಯವರು ರಾಜಕೀಯ ಪಕ್ಷಗಳನ್ನು ಸಾರ್ವಜನಿಕ ಸಂಸ್ಥೆಗಳ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಬೇಕು. ರಾಜಕೀಯ ಪಕ್ಷಗಳು ತಮ್ಮ ಆದಾಯ, ವೆಚ್ಚ, ದೇಣಿಗೆ ಹಾಗೂ ನಿ ಸೇರಿದಂತೆ ದಾನಿಗಳ ಸಂಪೂರ್ಣ ವಿವರಗಳನ್ನು ಸಲ್ಲಿಸಬೇಕು.

ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಚುನಾವಣೆಗೆ ನಿಲ್ಲಬಯಸುವವರು ಮಾತ್ರವೇ ತಮ್ಮ ಅಸ್ತಿಗಳು, ಬಾಧ್ಯತೆಗಳು ಹಾಗೂ ಕ್ರಿಮಿನಲ್ ಚರಿತ್ರೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. ಪಕ್ಷದ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹುದ್ದೆಗಳನ್ನು ಹೊಂದಿರುವವರಿಗೂ ಈ ನಿಯಮವು ಅನ್ವಯವಾಗುವಂತೆ ಕಾಯ್ದೆಗೆ ಉಪವಾಕ್ಯಗಳನ್ನು ಸೇರಿಸಬೇಕಾಗಿದೆ.

 ಇವು ರಾಜಕೀಯ ರಂಗವನ್ನು ಕಪ್ಪುಹಣದಿಂದ ಮುಕ್ತಗೊಳಿಸಲು ಕೈಗೊಳ್ಳಬೇಕಾದ ಮೊದಲ ಹೆಜ್ಜೆಗಳಾಗಿವೆ. 2014ರಲ್ಲಿ ದಿಲ್ಲಿ ಹೈಕೋರ್ಟ್ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ವಿದೇಶಿ ನಿಯನ್ನು ಸ್ವೀಕರಿಸಿದ ಹಾಗೂ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಉಲ್ಲಂಸಿದ ಪ್ರಕರಣಗಳಲ್ಲಿ ದೋಷಿಗಳೆಂದು ಪರಿಗಣಿಸಿತ್ತು.

ಆರು ತಿಂಗಳುಗಳೊಳಗೆ ಈ ಎರಡೂ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅದು ಕೇಂದ್ರ ಗೃಹ ಸಚಿವಾಲಯ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡೂ ವಿದೇಶಿ ಗಣಿ ಉದ್ಯಮ ಕಂಪೆನಿ ವೇದಾಂತದಿಂದ ದೇಣಿಗೆಗಳನ್ನು ಸ್ವೀಕರಿಸಿದ್ದವು. ಆದರೆ ಕೇಂದ್ರವು ಎ್ಸಿಆರ್‌ಎಗೆ ತಿದ್ದುಪಡಿ ಮಾಡಿ, ಭಾರತೀಯ ಅಂಗಸಂಸ್ಥೆಯನ್ನು ಹೊಂದಿರುವ ವಿದೇಶಿ ಕಂಪೆನಿಗಳಿಂದ ದೇಣಿಗೆಯನ್ನು ಸ್ವೀಕರಿಸಬಹುದೆಂದು ಹೇಳುವ ಮೂಲಕ ಎರಡೂ ಪಕ್ಷಗಳನ್ನು ಕಾನೂನಿನ ಕುಣಿಕೆಯಿಂದ ಪಾರು ಮಾಡಿತ್ತು.

ಪ್ರಧಾನಿಯವರು ಕೂಡಲೇ ಈ ತಿದ್ದುಪಡಿಯನ್ನು ರದ್ದುಗೊಳಿಸಿ, ತಕ್ಷಣವೇ ಕಾನೂನುಕ್ರಮ ಕೈಗೊಳ್ಳುವಂತೆ ಗೃಹಸಚಿವರಿಗೆ ಸೂಚನೆ ನೀಡಬೇಕ ಕಪ್ಪುಹಣ ಸೃಷ್ಟಿಯಾಗುತ್ತಿರುವುದು ಅದನ್ನು ಉತ್ಪಾದಿಸುವವರಿಗೆ ದೊರೆಯುವ ರಾಜಕೀಯ ಕೃಪಾಶ್ರ ಯದಿಂದಾಗಿದೆ. ಇದೊಂದು ವಿಷ ವರ್ತುಲವಾಗಿದೆ. ಕಪ್ಪುಹಣವು ರಾಜಕೀಯಕ್ಕೆ ಆರ್ಥಿಕ ನೆರವನ್ನು ನೀಡುತ್ತಿದೆ.

ಇದಕ್ಕೆ ಪ್ರತಿಯಾಗಿ ಖದೀಮರಿಗೆ ರಾಜಕೀಯವು ಆಶ್ರಯ ನೀಡುತ್ತದೆ. ಈ ವರ್ತುಲವನ್ನು ಮುರಿಯುವುದರಿಂದ ಮಾತ್ರವೇ ಭ್ರಷ್ಟಾಚಾರ ಹಾಗೂ ಕಪ್ಪುಹಣದ ಪೆಡಂಭೂತದಿಂದ ಭಾರತವನ್ನು ಮುಕ್ತಗೊಳಿಸ ಬಹುದಾಗಿದೆ.

share
ಆಶಿಶ್ ಖೇತನ್
ಆಶಿಶ್ ಖೇತನ್
Next Story
X