ನ.8ರ ನಂತರದ ಡಿಜಿಟಲ್ ವಹಿವಾಟುಗಳಿಗೆ ಅದೃಷ್ಟ ಬಹುಮಾನಗಳನ್ನು ಗೆಲ್ಲುವ ಅವಕಾಶ

ಹೊಸದಿಲ್ಲಿ,ಡಿ.10: ವಿದ್ಯುನ್ಮಾನ ವಹಿವಾಟುಗಳನ್ನು ಉತ್ತೇಜಿಸುವ ಪ್ರಯತ್ನವಾಗಿ ನೀತಿ ಆಯೋಗವು ಡಿಜಿಟಲ್ ವಿಧಾನದ ಮೂಲಕ ಹಣ ಪಾವತಿಯನ್ನು ಮಾಡುತ್ತಿರುವ ಜನರಿಗಾಗಿ ಸಾಪ್ತಾಹಿಕ ಮತ್ತು ತ್ರೈಮಾಸಿಕ ‘ಲಕ್ಕಿ ಡ್ರಾ’ಗಳನ್ನು ನಡೆಸುವಂತೆ ರಾಷ್ಟ್ರೀಯ ಪಾವತಿ ಆಯೋಗ(ಎನ್‌ಪಿಸಿಐ)ವನ್ನು ಕೋರಿಕೊಂಡಿದೆ.
ಎಲ್ಲ ವಿಧಾನಗಳಲ್ಲಿ ಡಿಜಿಟಲ್ ಹಣಪಾವತಿಗಳಿಗೆ ಬಹುಮಾನಗಳನ್ನು ನೀಡಲು ವಾರ್ಷಿಕ 125 ಕೋ.ರೂ.ಗಳನ್ನು ವ್ಯಯಿಸಲಾಗುವುದು. ಯೋಜನೆಯ ವಿವರಗಳನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿದವು.
ನೋಟು ನಿಷೇಧವನ್ನು ಪ್ರಕಟಿಸಿದ ನ.8ರ ಬಳಿಕ ಡಿಜಿಟಲ್ ಪಾವತಿಗಳನ್ನು ಬಳಸು ತ್ತಿರುವ ಎಲ್ಲ ಗ್ರಾಹಕರು ಮತ್ತು ವ್ಯಾಪಾರಿಗಳು ಈ ಅದೃಷ್ಟ ಚೀಟಿ ಯೋಜನೆಗ ಅರ್ಹರಾಗಿರುತ್ತಾರೆ.
ವಾರದಲ್ಲಿ ಸೃಷ್ಟಿಯಾದ ವಹಿವಾಟು ಐಡಿಗಳಿಗಾಗಿ ಸಾಪ್ತಾಹಿಕ ಲಕ್ಕಿ ಡ್ರಾ ನಡೆಸಲಾಗುತ್ತದೆ. ತ್ರೈಮಾಸಿಕ ಡ್ರಾದಲ್ಲಿ ಬಹುಮಾನದ ಮೊತ್ತ ದೊಡ್ಡದಾಗಿರುತ್ತದೆ ಎಂದು ಹೇಳಿಕೆಯು ತಿಳಿಸಿದೆ.
ಡ್ರಾಗಳನ್ನು ಎನ್‌ಪಿಸಿಐ ನಡೆಸಲಿದೆ.ಬಹುಮಾನಗಳನ್ನು ನೀಡಲು ಕೇಂದ್ರ, ಆರ್‌ಬಿಐ ಮತ್ತು ನಬಾರ್ಡ್‌ಗಳಿಂದ 500 ಕೋ.ರೂ.ಗಳ ನಿಧಿಯಿಂದ ಆರ್ಥಿಕ ಸೇರ್ಪಡೆ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ಹೇಳಿಕೆಯು ತಿಳಿಸಿದೆ.







