ಎಟಿಎಂ ಹಣ ಕದ್ದು ವಂಚನೆ: ದೂರು
ಬ್ರಹ್ಮಾವರ, ಡಿ.10: ಹಾವಂಜೆ ಗ್ರಾಮದ ಕಿಳಿಂಜೆ ಎಂಬಲ್ಲಿ ಮಹಿಳೆ ಯೊಬ್ಬರ ಎಟಿಎಂ ಕಾರ್ಡ್ ಕದ್ದು ಖಾತೆಯ ಹಣ ತೆಗೆದು ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಳಿಂಜೆಯ ಸಿರಿಲ್ ಡಿಸೋಜ ಎಂಬವರ ಪತ್ನಿ ಹಿಲ್ದಾ ಡಿಸೋಜ(53) ಎಂಬವರು 2016ರ ಆ.19ರಿಂದ ಅ.20ರ ಮಧ್ಯಾವಧಿಯಲ್ಲಿ ದುಬೈಗೆ ಹೋಗಿದ್ದು, ಅವರು ಮನೆಯನ್ನು ನೋಡಿಕೊಳ್ಳಲು ಹಾವಂಜೆ ಗ್ರಾಮದ ಮುಗ್ಗೇರಿಯ ಸಂತೋಷ ಪೂಜಾರಿ(40) ಎಂಬಾತನಿಗೆ ತಿಳಿಸಿದ್ದರು.
ಹಿಲ್ದಾ ಡಿಸೋಜ ದುಬೈಯಿಂದ ವಾಪಾಸ್ಸು ಬಂದಾಗ ಸಂತೋಷ್ ಪೂಜಾರಿ ಸೆ.26ರಿಂದ 30ರ ಮಧ್ಯೆ ಅವಧಿಯಲ್ಲಿ ಹಿಲ್ದಾ ಡಿಸೋಜರಿಗೆ ನಂಬಿಕೆ ದ್ರೋಹ ಬಗೆದು ಮನೆಯ ಹೆಂಚು ತೆಗೆದು ಒಳಗೆ ನುಗ್ಗಿ ಕಬ್ಬಿಣದ ಕಪಾಟಿನ ಬೀಗ ಮುರಿದು ಕಪಾಟಿನಲ್ಲಿದ್ದ ಕೆನರಾ ಬ್ಯಾಂಕ್‌ನ ಎಟಿಎಮ್ ಕಾರ್ಡ್‌ನ್ನು ಕಳವು ಮಾಡಿ, ಕಪಾಟಿನಲ್ಲಿ ಬರೆದಿಟ್ಟಿದ್ದ ಎಟಿಎಮ್ ಪಿನ್ ಸಂಖ್ಯೆ ತಿಳಿದುಕೊಂಡಿದ್ದನು.
ನಂತರ ಕಳವು ಮಾಡಿದ ಎಟಿಎಮ್ ಕಾರ್ಡ್ ಬಳಸಿ ಬೇರೆ ಬೇರೆ ರಾಷ್ಟ್ರೀಕೃತ ಎಟಿಎಮ್‌ಗಳ ಮೂಲಕ 61,000ರೂ. ತೆಗೆದು ನಷ್ಟವುಂಟು ಮಾಡಿರುವುದಾಗಿ ಹಿಲ್ದಾ ಡಿಸೋಜ ದೂರಿನಲ್ಲಿ ತಿಳಿಸಿದ್ದಾರೆ.





