ಕೃಷಿಯಲ್ಲಿ ವೈಜ್ಞಾನಿಕ ವಿಧಾನ ಬಳಸಿ: ಸಚಿವ ಕಾಗೋಡು

ಶಿವಮೊಗ್ಗ, ಡಿ. 10: ಕೃಷಿ ಮತ್ತು ತೋಟಗಾರಿಕೆ ರೈತರು ತಮ್ಮ ಕಾರ್ಯಕ್ಷೇತ್ರದಲ್ಲಿ ಅತ್ಯಾಧುನಿಕ ಹಾಗೂ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಬೆಳೆ ಬೆಳೆಯಲು ಮುಂದಾಗಬೇಕು ಎಂದು ರಾಜ್ಯ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಸಲಹೆ ನೀಡಿದ್ದಾರೆ.
ೋಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾಸಂಘ ಮತ್ತು ಕೃಷಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ತೋಟಗಾರಿಕೆ ಇಲಾಖೆ ಹಾಗೂ ಅಂಬೇಡ್ಕರ್ ಭವನದ ಆವರಣದಲ್ಲಿ ಏರ್ಪಡಿಸಲಾಗಿದ್ದ ಫಲ-ಪುಷ್ಪಪ್ರದರ್ಶನ ಮತ್ತು ಜೇನುಮೇಳ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಆಯೋಜಿಸಿರುವ ಫಲ-ಪುಷ್ಪಪ್ರದರ್ಶನ ಆಕರ್ಷಕವೂ, ಅದ್ಭುತವೂ ಆಗಿದೆ. ಈ ಕಾರ್ಯಕ್ರಮದಿಂದ ಕೃಷಿಕರು ತಮಗಿರುವ ಸೀಮಿತ ಪ್ರದೇಶಗಳಲ್ಲಿ ಕಡಿಮೆ ನೀರು ಬಳಸಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ಅರ್ಥಪೂರ್ಣ ಹಾಗೂ ಸಕಾಲಿಕ ಮಾಹಿತಿ ಲಭ್ಯವಾಗಲಿದೆ ಎಂದರು.
ಜಿಪಂ ಸಿಇಒ ಕೆ. ರಾಕೇಶ್‌ಕುಮಾರ್, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕು ಮಾರ್, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಆರ್. ವಿಜಯ ಕುಮಾರ್, ಎಂ.ಎಸ್. ವುಹೇಂದ್ರನಾಥ್, ಸಿದ್ದಪ್ಪ ಹರಳೆಣ್ಣೆಯವರ್ ಉಪಸ್ಥಿತರಿದ್ದರು.





