ನಾಳೆ ನಗರಕ್ಕೆ ಬಿ.ಎಸ್. ಯಡಿಯೂರಪ್ಪ
ಚಿಕ್ಕಮಗಳೂರು, ಡಿ.10: ಡಿ.13ರಂದು ಚಿಕ್ಕಮಗಳೂರಿನ ಐಡಿ ಪೀಠದಲ್ಲಿರುವ ಇನಾಮ್ ದತ್ತಾತ್ರೇಯ ಬಾಬಾಬುಡಾನ್ ಗಿರಿಯಲ್ಲಿ ವಿಎಚ್‌ಪಿ ನೇತೃತ್ವದಲ್ಲಿ ನಡೆಯುವ ದತ್ತ ಜಯಂತಿ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಬಿ.ಎಸ್ ಯಡಿಯೂರಪ್ಪ ಆಗಮಿಸಲಿದ್ದು, ಡಿ.12ರ ಸಂಜೆ ಚಿಕ್ಕಮಗಳೂರು ನಗರಕ್ಕೆ ಆಗಮಿಸಿ ನಗರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಡಿ.13ರ ಬೆಳಗ್ಗೆ 8:30ಕ್ಕೆ ನಗರದ ಕಾಮಧೇನು ದೇವಾಲಯದಲ್ಲಿ ದತ್ತ ಮಾಲೆ ಧರಿಸಿ, ದತ್ತ ಪೀಠಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಡಿ.11ರಂದು ಗಿರಿಯಲ್ಲಿ ನಡೆಯುವ ಅನು ಸೂಯ ಪೂಜೆ ಮತ್ತು ಡಿ.13 ರಂದು ನಡೆಯುವ ದತ್ತ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಎಚ್.ಡಿ. ತಮ್ಮಯ್ಯ ತಿಳಿಸಿದ್ದಾರೆ.
Next Story





