ಹೊಟೇಲ್ ಕಿದಿಯೂರಿನಲ್ಲಿ ಕೇಕ್ ಮಿಕ್ಸಿಂಗ್

ಉಡುಪಿ, ಡಿ.10: ಮುಂಬರುವ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಸಂದರ್ಭಕ್ಕಾಗಿ ಸಾಂಪ್ರದಾಯಿಕ ಕೇಕ್ ಮಿಕ್ಸ್ ಸಮಾರಂಭ ಶುಕ್ರವಾರ ಸಂಜೆ ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ನಡೆಯಿತು.
ಕ್ರಿಸ್ಮಸ್ ಹಬ್ಬಕ್ಕೆಂದೇ ವಿಶೇಷವಾಗಿ ತಯಾರಿಸಲಾಗುವ ಪ್ಲಮ್ ಕೇಕ್‌ಗಾಗಿ ಡ್ರೈಪ್ರೂಟ್ಸ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ರಮ್ ಹಾಗೂ ವೈನ್ ನೊಂದಿಗೆ ನೆನೆಸಿಡುವ ಕಾರ್ಯಕ್ರಮವೇ ಕೇಕ್ ಮಿಕ್ಸಿಂಗ್ ಆಗಿದೆ. ಕೇಕ್ ಮಿಕ್ಸಿಂಗ್ ಉತ್ಸವ ವಿದೇಶಗಳಲ್ಲಿ ವಿಶೇಷವಾಗಿ ಯುರೋಪ್, ಇಂಗ್ಲೆಂಡ್ ಹಾಗೂ ಅಮೆರಿಕಗಳಲ್ಲಿ ಶತಮಾನಗಳಿಂದ ಆಚರಿಸಿಕೊಂು ಬರುತ್ತಿರುವ ಸಂಪ್ರದಾಯವಾಗಿದೆ.
ಉಡುಪಿ ಜಿಲ್ಲಾ ಬಿಲ್ಡರ್ಸ್ ಸಂಸ್ಥೆಯ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್ ಅವರು ಹೊಟೇಲ್‌ನ ಮಾಲಕರಾದ ಭುವನೇಂದ್ರ ಕಿದಿಯೂರು, ಜಿತೇಶ್ ಕಿದಿಯೂರು ಅವರೊಂದಿಗೆ ಗೋಡಂಬಿ ಬೀಜ, ಒಣದ್ರಾಕ್ಷೆ, ಟೂರ್ಟಿ-ಫ್ರೂಟಿ, ಚೆರ್ರಿ, ಬಾದಾಮ್, ಅಲ್ಮೋಡ ಹಾಗೂ ಇತರ ಡ್ರೈ ಫ್ರುಟ್ಸ್ ಗಳನ್ನು ರಮ್, ವೈನ್ ಹಾಗೂ ಜೇನುತುಪ್ಪದೊಂದಿಗೆ ಬೆರೆಸಿದರು. ಈ ಸಂದರ್ಭದಲ್ಲಿ ಕೇಕ್ ತಯಾರಕ ಗ್ಲೆನ್ ಉಪಸ್ಥಿತರಿದ್ದರು.





