ಕೊರಿಯಾ ಓಪನ್: ಸೆಮಿಫೈನಲ್‌ನಲ್ಲಿ ಕಶ್ಯಪ್‌ಗೆ ಸೋಲು

ಜೇಜು(ಕೊರಿಯಾ), ಡಿ.10: ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಾರುಪಲ್ಲಿ ಕಶ್ಯಪ್ ಕೊರಿಯಾ ಓಪನ್ ಗ್ರಾನ್‌ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್‌ನಲ್ಲಿ ಸೋತಿದ್ದಾರೆ.
ಶನಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಕಶ್ಯಪ್ ಅಗ್ರ ಶ್ರೇಯಾಂಕದ ಸನ್ ವ್ಯಾನ್ ಹೋ ವಿರುದ್ಧ 21-23, 16-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಕಶ್ಯಪ್ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊರಿಯಾದ ಜೆಯೊನ್ ಹಿಯೊಕ್ ಜಿನ್‌ರನ್ನು 18-21,21-8, 21-16 ಗೇಮ್‌ಗಳ ಅಂತರದಿಂದ ಮಣಿಸಿ 120,000 ಯುಎಸ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದ್ದರು.
‘‘ಈ ವರ್ಷಾರಂಭದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಸೂಪರ್ ಸರಣಿಯ ಫೈನಲ್ಸ್‌ಗೆ ತಲುಪಿದ್ದ ಜಿಯೊನ್‌ರನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಮಣಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಜಿಯೊನ್ ಉತ್ತಮ ಆಟಗಾರ’’ ಎಂದು ಕಶ್ಯಪ್ ಪ್ರತಿಕ್ರಿಯಿಸಿದರು.
Next Story





