Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನೋಟು ನಿಷೇಧ: ಈಗ ಹಣವಂಚನೆ ಜಾಲದ ಜಮಾನ

ನೋಟು ನಿಷೇಧ: ಈಗ ಹಣವಂಚನೆ ಜಾಲದ ಜಮಾನ

ಎನ್.ಡಿ.ಎನ್.ಡಿ.10 Dec 2016 11:38 PM IST
share
ನೋಟು ನಿಷೇಧ: ಈಗ ಹಣವಂಚನೆ ಜಾಲದ ಜಮಾನ

ನೋಟು ಅಮಾನ್ಯದ ದಿಢೀರ್ ನಿರ್ಧಾರದಿಂದ ಅಲ್ಲೋಲ ಕಲ್ಲೋಲವಾಗಿರುವ ಭಾರತದ ಅರ್ಥವ್ಯವಸ್ಥೆ ಸರಿದಾರಿಗೆ ಮರಳಲು ಹೆಣಗುತ್ತಿದ್ದರೆ, ಇನ್ನೊಂದೆಡೆ ಕಾಳಧನಿಕರ ಹಣವನ್ನು ಬಿಳಿ ಮಾಡಿಕೊಡುವ ಹಣವಂಚನೆ ಜಾಲ ದೇಶದಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ.

ಜನರು ಹಳೆ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಲು ಈ ತಿಂಗಳ ಅಂತ್ಯದವರೆಗೆ ಅವಕಾಶವಿದ್ದರೂ, ದೊಡ್ಡ ಪ್ರಮಾಣದ ಠೇವಣಿಗಳ ಮೇಲೆ ನಿಗಾ ಇಡಲಾಗುವುದು ಮತ್ತು ಅಂಥ ಠೇವಣಿದಾರರಿಗೆ ತೆರಿಗೆ ಹಾಗೂ ಶಿಕ್ಷೆ ವಿಧಿಸಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿದೆ. ಇಂಥ ಎಚ್ಚರಿಕೆ ಕಾಳಧನಿಕರು ವಾಮಮಾರ್ಗಗಳ ಮೂಲಕ ತಮ್ಮ ಹಣವನ್ನು ಬಿಳಿ ಮಾಡಿಕೊಳ್ಳುವ ದಂಧೆಗೆ ಇಳಿಯಲು ಕಾರಣವಾಗಿದೆ.
ಕಪ್ಪುಹಣವನ್ನು ಪರಿವರ್ತಿಸಿಕೊಡಲು ಏಜೆಂಟರು ವಿನೂತನ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಲು ಈಶಾನ್ಯ ರಾಜ್ಯಗಳಿಗೆ ಅದನ್ನು ಸಾಗಿಸುವುದರಿಂದ ಹಿಡಿದು, ಅತ್ಯಧಿಕ ದೈನಿಕ ವಹಿವಾಟು ಇರುವ ಉದ್ಯಮಿಗಳನ್ನು ಸಂಪರ್ಕಿಸಿಕೊಡುವ ನಿದರ್ಶನಗಳೂ ಸಾಕಷ್ಟಿವೆ. ಇದನ್ನು ಹಳೆಯ ಆದಾಯವಾಗಿ ತೋರಿಸಿ, ಸ್ವಲ್ಪಪ್ರಮಾಣವನ್ನು ಇಟ್ಟುಕೊಂಡು ಉಳಿದ ಹಣವನ್ನು ಮರಳಿಸುವ ದಂಧೆಯೂ ಅವ್ಯಾಹತವಾಗಿ ನಡೆಯುತ್ತಿದೆ. ಶೇ. 10ರಿಂದ ಶೇ. 50ರವರೆಗೂ ಇದಕ್ಕಾಗಿ ಕಮಿಷನ್ ಪಡೆಯಲಾಗುತ್ತಿದೆ. ಮುಂಬೈನಲ್ಲಿ ರಿಯಲ್ ಎಸ್ಟೇಟ್ ಉದ್ಯಮವೊಂದು, ಹಳೆಯ ನೋಟುಗಳನ್ನು ಪಡೆದು ಸ್ಥಿರಾಸ್ತಿ ಮಾರಾಟ ಮಾಡುವ ದಂಧೆಗೂ ಇಳಿದಿದೆ.
ಲೋಪಗಳನ್ನು ಸರಿಪಡಿಸಲು ಸರಕಾರ ಕಾರ್ಯಪ್ರವೃತ್ತವಾ ಗಿದ್ದರೂ, ಹೊಸ ವಾಮಮಾರ್ಗಗಳು ಕ್ಷಿಪ್ರವಾಗಿ ಹುಟ್ಟಿಕೊಳ್ಳುತ್ತಿವೆ. ನೋಟು ಅಮಾನ್ಯ ಮೂಲಕ ಕಪ್ಪುಹಣವನ್ನು ಕಡಿತಗೊಳಿಸಿ, ಹೆಚ್ಚು ಮಂದಿಯನ್ನು ತೆರಿಗೆ ಜಾಲಕ್ಕೆ ಒಳಪಡಿಸುವುದು ಸರಕಾರದ ಮುಖ್ಯ ಉದ್ದೇಶ. ಆದರೆ ಅಲ್ಪಾವಧಿಯಲ್ಲಿ ಇದಕ್ಕೆ ವಿರುದ್ಧವಾಗಿ, ಹಣವಂಚನೆ, ತೆರಿಗೆ ಕಳ್ಳತನ, ಸಂಘಟಿತ ಅಪರಾಧಕ್ಕೆ ಹೊಸ ಅವಕಾಶಗಳ ಸೃಷ್ಟಿ, ದೀರ್ಘಾವಧಿಯ ಹವಾಲಾ ಹಣ ವರ್ಗಾವಣೆ ವ್ಯವಸ್ಥೆ ರೂಪುಗೊಳ್ಳುವುದು, ಅಕ್ರಮ ಜಾಲಗಳ ಸೃಷ್ಟಿಯಂಥ ಸಮಸ್ಯೆಗಳು ಎದುರಾಗಿವೆ.

ತಿಮಿಂಗಿಲಗಳು

‘‘ತಿಮಿಂಗಿಲಗಳು ಹಾಗೂ ದೊಡ್ಡಕುಳಗಳು ಬಲೆಯನ್ನು ಸುಲಭವಾಗಿ ಬೇಧಿಸಿ, ಸಂಘಟಿತ ಜಾಲದ ಮೂಲಕ ವ್ಯವಸ್ಥೆಗೆ ಹಣವನ್ನು ಹರಿಸುವ ಕೆಲಸವನ್ನು ಸುಲಭವಾಗಿ ಮಾಡುತ್ತಿದ್ದಾರೆ’’ ಎನ್ನುವುದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಅವರ ಆರೋಪ. ಇಲ್ಲಿ ದೊಡ್ಡ ಕುಳಗಳನ್ನು ತಲುಪುವುದು ಕಷ್ಟಸಾಧ್ಯವಾಗಿರುವುದರಿಂದ ದೇಶದಲ್ಲಿ ಕಪ್ಪುಹಣವನ್ನು ನಿರ್ಮೂಲನೆ ಮಾಡುವುದು ಕಷ್ಟಸಾಧ್ಯ ಎನ್ನುವುದು ಅವರ ಅನಿಸಿಕೆ.

ಮೋದಿ ಕ್ರಮಕ್ಕೆ ಸವಾಲಾಗಿ ಭೂಗತ ಜಾಲಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ ಶೇ. 98ಕ್ಕಿಂತಲೂ ಅಧಿಕ ವಹಿವಾಟು ನಗದು ರೂಪದಲ್ಲೇ ಆಗುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಆದ್ದರಿಂದ ದೇಶವನ್ನು ಅರಾಜಕತೆಗೆ ತಳ್ಳಿದ ನಿರ್ಧಾರಕ್ಕಾಗಿ ಮೋದಿ ದೊಡ್ಡ ಪ್ರಮಾಣದ ರಾಜಕೀಯ ಬೆಲೆ ತೆರುವ ಸಾಧ್ಯತೆಗಳು ಅಧಿಕ.
ಅಕ್ರಮದ ಹಣ ಜಾಲಗಳು ದೇಶದ ಒಳನಾಡಿನ ಮೂಲಕ ಸ್ವಚ್ಛ ಕರೆನ್ಸಿ ಒದಗಿಸುವ ಭರವಸೆ ನೀಡುತ್ತಿವೆ. ಇವರು ಅವಲಂಬಿಸಿರುವ ಒಂದು ವಿಧಾನವೆಂದರೆ, ಅಧಿಕ ವಹಿವಾಟು ಇರುವ ವ್ಯಾಪಾರಗಳು ಅಂದರೆ ವ್ಯಾಪಾರಗೃಹಗಳು, ಉತ್ಪಾದನಾ ಘಟಕಗಳು. ಇವು ಸಾಮಾನ್ಯವಾಗಿ ನಗದು ಆದಾಯವನ್ನು ಸರಕಾರಕ್ಕೆ ವರದಿ ಮಾಡುತ್ತದೆ. ತಕ್ಷಣಕ್ಕೆ ನಗದು ಲಭ್ಯತೆ ಕುಂಠಿತಗೊಂಡಿರುವುದರಿಂದ ವ್ಯಾಪಾರ ವಹಿವಾಟು ದಿಢೀರನೆ ಕುಸಿದಿದೆ. ಇದರಿಂದಾಗಿ ಇಂಥ ಮಳಿಗೆಗಳು ಅಕ್ರಮ ಜಾಲದಿಂದ ಹಳೆ ನೋಟುಗಳನ್ನು ಪಡೆದು, ಇದನ್ನು ಆದಾಯ ರೂಪದಲ್ಲಿ ತೋರಿಸುತ್ತಾರೆ. ಈ ಪೈಕಿ ಒಂದು ಪಾಲನ್ನು ತಮ್ಮಲ್ಲೇ ಇಟ್ಟುಕೊಂಡು ಉಳಿದ ಒಂದು ಭಾಗವನ್ನು ಹೊಸ ನೋಟಿನ ರೂಪದಲ್ಲಿ ಮರುಪಾವತಿ ಮಾಡುತ್ತಾರೆ.
‘‘ನವೆಂಬರ್ 8ರಂದು ನಗದು ನಿಷೇಧ ನಿರ್ಧಾರ ಪ್ರಕಟವಾದ ಬಳಿಕ ಒಬ್ಬರು ವಕೀಲರ ಮೂಲಕ ರಾಜಸ್ಥಾನದ ಸಿದ್ಧ ಉಡುಪು ಹಾಗೂ ಆಭರಣ ವ್ಯಾಪಾರಿಯೊಬ್ಬರ ಸಂಪರ್ಕವಾಯಿತು. ಅವರು 200 ದಶಲಕ್ಷ ರೂಪಾಯಿಗಳನ್ನು ಕಪ್ಪುಹಣದ ರೂಪದಲ್ಲಿ ನೀಡಿ, 100 ದಶಲಕ್ಷ ರೂಪಾಯಿಗಳನ್ನು ಹೊಸ ನೋಟಿನ ರೂಪದಲ್ಲಿ ನೀಡುವಂತೆ ಮನವಿ ಮಾಡಿದರು. ಅಂದರೆ ಅವರ ಕಪ್ಪುಹಣವನ್ನು ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರಮಟ್ಟಿಗೆ ಪರಿವರ್ತಿಸಿಕೊಡಬೇಕು. ಅವರು ತೆರಿಗೆ ಪಾವತಿಸಲು ಸಿದ್ಧರಿಲ್ಲ. ಹೊಸ ಹಣವನ್ನು ಕೂಡಾ ಘೋಷಿಸಲು ಮುಂದಾಗದ ಅವರು, ಈ ಹಣವನ್ನು ತಮ್ಮ ಬಳಿ, ಭವಿಷ್ಯದ ಹೂಡಿಕೆಗಾಗಿ ಇಟ್ಟುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು’’ ಎನ್ನುವುದು ಅಶೋಕ್ ಅವರ ವಿವರಣೆ.
ಇನ್ನು ಮುಂಬೈನ ವಕೀಲರೂ ಖಚಿತಪಡಿಸಿದರು. ತಮ್ಮ ಹಣವನ್ನು ಬಿಳಿ ಮಾಡಿಕೊಳ್ಳುವ ಸಲುವಾಗಿ ಬಹುತೇಕ ಮಂದಿ ಶೇ. 50ರಷ್ಟು ಕಮಿಷನ್ ನೀಡಲು ಕೂಡಾ ಸಿದ್ಧರಿದ್ದಾರೆ. ನವೆಂಬರ್ 29ರಂದು ಸಂಸತ್ತು ಆಂಗೀಕರಿಸಿದ ಮಸೂದೆಯ ಪ್ರಕಾರ, ಹಣದ ಮೂಲ ಬಹಿರಂಗಗೊಳಿಸದ ಠೇವಣಿಗಳ ಮೇಲೆ ಶೇ. 50ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಬುಡಕಟ್ಟು ವಿನಾಯಿತಿ

ಇತರ ಇಂಥ ಅಕ್ರಮ ಜಾಲಗಳು, ತೆರಿಗೆ ವಿನಾಯಿತಿ ಇರುವ ಜನರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ, ಬಿಳಿ ಮಾಡುವ ಮಾರ್ಗ ಅನುಸರಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ಕೃಷಿಕರಿಗೆ, ಕೃಷಿಯಿಂದ ಬರುವ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. ಅಂತೆಯೇ ಈಶಾನ್ಯ ರಾಜ್ಯಗಳ ಕೆಲ ಬುಡಕಟ್ಟು ಜನಾಂಗದವರಿಗೆ ಯಾವುದೇ ಮೂಲದಿಂದ ಬಂದ ಆದಾಯದ ಮೇಲೆ ತೆರಿಗೆ ವಿನಾಯಿತಿ ಇದೆ ಎಂದು ವಕೀಲರು ಹೇಳುತ್ತಾರೆ.

ಇಂತಹ ಕೆಲ ಕಾರ್ಯಾಚರಣೆ ಹವಾಲಾ ವ್ಯವಸ್ಥೆಯಾಗಿ ಪರಿವರ್ತನೆಯಾಗುತ್ತಿದೆ. ನಂಬಿಕೆ ಅಥವಾ ಕುಟುಂಬ ಸಂಪರ್ಕದ ಆಧಾರದಲ್ಲಿ ಇಂಥ ಜಾಲಗಳು ಕಾರ್ಯನಿರ್ವಹಿಸುತ್ತಿವೆ. ಸರಕುಗಳ ವಾಸ್ತವ ಬೆಲೆ ನಮೂದಿಸದಿರುವುದು, ಹಣಕಾಸು ಲೋಪದೋಷಗಳು, ರಹಸ್ಯ ಲೆಕ್ಕ ಇಡುವುದು ಮತ್ತಿತರ ಮಾರ್ಗಗಳು ದಶಕಗಳಿಂದ ಭಾರತದಲ್ಲಿ ಚಾಲ್ತಿಯಲ್ಲಿವೆ. ಹವಾಲಾ ಜಾಲವನ್ನು ಬಳಸಿಕೊಂಡು ಏಜೆಂಟರು ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಡುವ ಭರವಸೆ ನೀಡುತ್ತಿದ್ದಾರೆ.
ಜನ ಕೋಟಿಗಟ್ಟಲೆ ರೂಪಾಯಿಗಳನ್ನು ರೈಲು ಹಾಗೂ ಇತರ ವಾಹನಗಳಲ್ಲಿ ಸಾಗಾಟ ಮಾಡುತ್ತಿದ್ದಾರೆ. ದೊಡ್ಡ ಅಕ್ರಮ ಜಾಲಗಳು ವಿಮಾನವನ್ನು ಬಾಡಿಗೆಗೆ ಪಡೆದು ಈಶಾನ್ಯ ರಾಜ್ಯಗಳಿಗೆ ಹಳೆ ನೋಟುಗಳನ್ನು ರವಾನಿಸುವ ದಂಧೆಯೂ ಅವ್ಯಾಹತವಾಗಿ ಮುಂದುವರಿದಿದೆ.

ವಿಮಾನ ನಿರ್ಬಂಧ

ಇಂತಹ ಕಾರ್ಯಾಚರಣೆ ತಡೆಯುವ ಸಲುವಾಗಿ ನಾಗರಿಕ ವಿಮಾನಯಾನ ಸಚಿವಾಲಯವು ನವೆಂಬರ್ 29ರಂದು ಹೇಳಿಕೆ ನೀಡಿ, ಸರಕಾರದ ನಿಯಂತ್ರಣದಲ್ಲಿಲ್ಲದ ವಿಮಾನ ನೆಲೆಗಳಿಂದ ವಿಮಾನಗಳು ಹಾರಾಡಲು ಜಿಲ್ಲೆಯ ಪೊಲೀಸ್ ಮುಖ್ಯಸ್ಥರ ಅನುಮತಿ ಕಡ್ಡಾಯ, ಹೀಗೆ ಹೊರಡುವ ಮುನ್ನ ಪ್ರಯಾಣಿಕರು ಹಾಗೂ ಗ್ರಾಹಕರನ್ನು ಪೈಲಟ್ ತಪಾಸಣೆ ಮಾಡಬೇಕು ಎಂದು ಸ್ಪಷ್ಟಪಡಿಸಿದೆ.

ಕಳ್ಳತನ, ತೆರಿಗೆ ಅಧಿಕಾರಿಗಳು ಅಥವಾ ಪೊಲೀಸರ ದಾಳಿದಂಥ ಅಪಾಯದ ನಡುವೆಯೂ ಹವಾಲಾ ವ್ಯವಸ್ಥೆ ಅವ್ಯಾಹತವಾಗಿ ಸಾಗಿದೆ. ನಂಬಿಕೆಯ ಆಧಾರದಲ್ಲೇ ಇದು ನಡೆಯುತ್ತದೆ. ಇಂಥ ಹವಾಲಾ ಜಾಲಗಳು ಮುಸ್ಲಿಂ ಜಗತ್ತಿನಲ್ಲಿ ಔಪಚಾರಿಕ ಬ್ಯಾಂಕಿಂಗ್ ವಾಹಿನಿಗಳಿಂದಾಚೆ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಕೆಲ ದಶಕಗಳಿಂದ ಭಾರತದಲ್ಲೂ ಸಕ್ರಿಯವಾಗಿದೆ.
ಜನ ತಾವೇ ಸ್ವತಃ ಕೆಲ ಪ್ರಯತ್ನಗಳನ್ನು ಮಾಡುತ್ತಿರುವುದೂ ಗಮನಕ್ಕೆ ಬಂದಿದೆ. ಸಣ್ಣ ಪ್ರಮಾಣದ ಇಂಥ ಹಣವನ್ನು ಸ್ವಚ್ಛಗೊಳಿಸಿಕೊಳ್ಳಲು ಮನೆಗೆಲಸದವರನ್ನು ಅವಲಂಬಿಸುವುದು ಇದರಲ್ಲೊಂದು. ಹಲವು ಮಂದಿ ಕೆಲಸಗಾರರ ಹೆಸರಿನಲ್ಲಿ 2.5 ಲಕ್ಷಕ್ಕಿಂತ ಕಡಿಮೆ ಮೊತ್ತವನ್ನು ಜಮೆ ಮಾಡಿ, ತೆರಿಗೆ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಜನ ಮುಂದಾಗಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಕೂಡಾ ಇಂಥ ವಂಚನೆ ತಡೆಯುವ ಸಲುವಾಗಿ ವಹಿವಾಟಿನ ಮಿತಿ ನಿಗದಿಗೊಳಿಸಿದೆ.

ದೇವಾಲಯಗಳ ಬಳಕೆ

ಕಪ್ಪುಹಣವನ್ನು ಬಿಳಿ ಮಾಡಲು ದೇವಾಲಯಗಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆಯೂ ವರದಿಯಾಗಿವೆ. ಧಾರ್ಮಿಕ ಸಂಸ್ಥೆಗಳಿಗೆ ಹಳೆಯ ನೋಟಿನಲ್ಲಿ ನೀಡುವ ದೇಣಿಗೆಯು, ನಿಷೇಧದಿಂದ ವಿನಾಯಿತಿ ಹೊಂದಿವೆ. ಆದರೆ ಉತ್ತರ ಭಾರತದ ಮಥುರಾದಲ್ಲಿರುವ ಗೋವರ್ಧನ ದೇವಾಲಯದ ಅರ್ಚಕರೊಬ್ಬರು, ಇಂಥ ನೋಟು ಬದಲಿಸಿಕೊಡುವ ದಂಧೆಯ ಆಶ್ವಾಸನೆ ನೀಡುತ್ತಿರುವುದನ್ನು ಟೆಲಿವಿಷನ್ ವಾಹಿನಿಯೊಂದು ಸೆರೆಹಿಡಿದಿದೆ. ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲು ಮದುವೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಇನ್ನೊಂದು ವಿಧಾನ. ಏಕೆಂದರೆ ಮದುವೆ ಸಂದರ್ಭದಲ್ಲಿ ಉಡುಗೊರೆಯಾಗಿ ಸ್ವೀಕರಿಸಿದ ನಗದು ಹಾಗೂ ಒಡವೆಗಳು ತೆರಿಗೆಯಿಂದ ವಿನಾಯಿತಿ ಹೊಂದಿವೆ.

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅಕ್ರಮ ವ್ಯಾಪಕವಾಗಿದ್ದು, ಕರೆನ್ಸಿ ನಿಷೇಧ ಜಾರಿಗೆ ಬರುವ ಮುನ್ನವೇ ಕಾಳಧನದ ವಹಿವಾಟಿನಲ್ಲಿ ಇವು ತೊಡಗಿಸಿಕೊಂಡಿದ್ದವು. ಇದೀಗ ನಿಷೇಧಿತ ನೋಟುಗಳ ಮೂಲಕ ಇನ್ನಷ್ಟು ಹೂಡಿಕೆಗಳನ್ನು ಆಕರ್ಷಿಸುತ್ತಿವೆ.
ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಥ ರಿಯಲ್ ಎಸ್ಟೇಟ್ ಸಂಸ್ಥೆಯೊಂದು 2 ಬೆಡ್‌ರೂಂ ಫ್ಲಾಟ್‌ಗಳನ್ನು ಹಳೆಯ ಕರೆನ್ಸಿಯಲ್ಲಿ ಮಾರಾಟ ಮಾಡುವ ಕುರಿತ ಇ-ಮೇಲ್ ಆಫರ್ ಪ್ರಕಟಿಸಿದೆ. ಇದರಲ್ಲಿ ಮಾಮೂಲಿ ಮಾರಾಟ ಬೆಲೆಗಿಂತ ಕೇವಲ ಹತ್ತು ಶೇ. ಹೆಚ್ಚುವರಿ ದರ ವಿಧಿಸಿ, ಹಳೆಯ ನೋಟುಗಳ ಮೂಲಕ ಪಾವತಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಹೆಚ್ಚಿದ ವಹಿವಾಟು

‘‘ನೋಟು ಅಮಾನ್ಯ ನಿರ್ಧಾರ ಪ್ರಕಟವಾದ ಬಳಿಕ ರಿಯಲ್ ಎಸ್ಟೇಟ್ ವಹಿವಾಟು ಕ್ಷಿಪ್ರವಾಗಿ ಹೆಚ್ಚಿವೆ. ಹಲವು ಅವಕಾಶವಾದಿ ಜನರ ನಡುವೆ ವ್ಯಾಪಾರ ಕುದುರಿದೆ’’ ಎಂದು ಮುಂಬೈ ಮೂಲದ ಪ್ರೈಸ್‌ವಾಟರ್‌ಕೂಪರ್ಸ್‌ ನ ಪಾಲುದಾರ ಶಶಾಂಕ್ ಜೈನ್ ಹೇಳುತ್ತಾರೆ. ಆದರೆ ಎಷ್ಟರ ಪ್ರಮಾಣದಲ್ಲಿ ಹಳೆ ನೋಟುಗಳ ಮೂಲಕ ಇಂಥ ವಹಿವಾಟು ನಡೆಯುತ್ತಿದೆ ಎಂದು ಅಂದಾಜಿಸುವುದು ಕಷ್ಟ ಎಂದು ಅವರು ಅಭಿಪ್ರಾಯಪಡುತ್ತಾರೆ. ಅಂತೆಯೇ ಇತರ ಅಧಿಕ ಮೌಲ್ಯದ ವಸ್ತುಗಳ ಖರೀದಿ ರೂಪದಲ್ಲೂ ಈ ದಂಧೆ ನಡೆಯುತ್ತಿದೆ. ಉದಾಹರಣೆಗೆ ಮುಂಬೈನಲ್ಲಿ ಕಳೆದ ವಾರ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಸಿದ ವ್ಯಕ್ತಿಯೊಬ್ಬರು ಶೇ. 20ರಷ್ಟು ಹೆಚ್ಚುವರಿ ಹಣ ನೀಡಿ, ಹಳೆಯ ನೋಟುಗಳಲ್ಲಿ ವ್ಯವಹಾರ ಕುದುರಿಸಿದ್ದಾರೆ. ಈ ಆಭರಣ ಅಂಗಡಿ ಮಾಲಕ, ಅಕ್ರಮ ಹಣಕಾಸು ಜಾಲದ ಮೂಲಕ ಇದನ್ನು ಅಧಿಕೃತಗೊಳಿಸಲು ಮುಂದಾಗುತ್ತಾನೆ.

ನಿರಾಕರಣೆ

ದೇಶದ ಅರ್ಥವ್ಯವಸ್ಥೆಯಲ್ಲಿ ಚಲಾವಣೆಯಲ್ಲಿರುವ ಒಟ್ಟು ಹಣದ ಪೈಕಿ ಶೇ. 86ರಷ್ಟನ್ನು ಅಮಾನ್ಯಗೊಳಿಸುವ ಮೂಲಕ ಕಪ್ಪುಹಣದ ವಿರುದ್ಧ ನಿರ್ಣಾಯಕ ಸಮರ ನಡೆಸಿದ್ದಾಗಿ ಪ್ರಧಾನಿ ಮೋದಿ ಹೇಳಿಕೊಳ್ಳುತ್ತಿದ್ದಾರೆ.

‘‘ಇಂದಿಗೂ ಕೆಲವರು, ಭ್ರಷ್ಟಾಚಾರ, ಕಪ್ಪುಹಣ, ಅಘೋಷಿತ ಸಂಪತ್ತಿನ ರೂಪದ ಈ ನೋಟುಗಳನ್ನು ಮತ್ತೆ ಚಲಾವಣೆಗೆ ಬಿಡುವುದಾಗಿ ನಂಬಿದ್ದಾರೆ’’ ಎಂದು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಅವರು ಹೇಳಿದ್ದರು. ‘‘ಅಕ್ರಮ ಸಂಪಾದನೆಯನ್ನು ರಕ್ಷಿಸಿಕೊಳ್ಳಲು ಕಾನೂನುಬಾಹಿರ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಬಡಜನರನ್ನು ದಿಕ್ಕುತಪ್ಪಿಸಿ, ಅವರಿಗೆ ಆಸೆ ತೋರಿಸಿ, ಅಕ್ರಮವಾಗಿ ಅವರ ಖಾತೆಗಳಿಗೆ ಹಣ ತುಂಬಲಾಗುತ್ತಿದೆ. ಇಲ್ಲವೇ ಕೆಲ ಕಾನೂನುಬಾಹಿರ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವಂತೆ ಮಾಡಲಾಗುತ್ತಿದೆ. ಕೆಲ ಜನ ಅವರ ಕಪ್ಪುಹಣವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಈ ಲೋಪಗಳನ್ನು ಸರಿಪಡಿಸಲು ಸರಕಾರ ಶಕ್ತಿಮೀರಿ ಪ್ರಯತ್ನಿಸುತ್ತಿದೆ’’ ಎಂದು ಮೋದಿ ಹೇಳಿದ್ದರು.
ಹಳೆ ನೋಟುಗಳ ಮೂಲಕ ರೈಲ್ವೆ ಹಾಗೂ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಲು ಮೊದಲು ಅವಕಾಶ ನೀಡಲಾಗಿತ್ತು. ಇದರ ದುರುಪಯೋಗ ಮಾಡಿಕೊಂಡು ಜನ ಟಿಕೆಟ್‌ಗಳನ್ನು ಖರೀದಿಸಿ ಬಳಿಕ ಅದನ್ನು ರದ್ದುಗೊಳಿಸಿದರು. ಆ ಮೂಲಕ ಹೊಸ ನೋಟುಗಳನ್ನು ಪಡೆದರು. ಇದರಿಂದ ಎಚ್ಚೆತ್ತುಕೊಂಡ ಸರಕಾರ ತಕ್ಷಣ, ಎಲ್ಲ ನಗದು ಮರುಪಾವತಿಗಳನ್ನು ನಿಷೇಧಿಸಿತು.
ಮುಂದಿನ ವರ್ಷ ನಾಲ್ಕು ರಾಜ್ಯಗಳಿಗೆ ನಡೆಯುವ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಗೆ ಮುನ್ನ, ನೋಟು ಅಮಾನ್ಯ ನಿರ್ಧಾರಕ್ಕೆ ಜನಬೆಂಬಲ ಪಡೆಯುವುದು ಮತ್ತು ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು ಈಗ ಮೋದಿಗೆ ಅನಿವಾರ್ಯ.
‘‘ಸರಕಾರ ತನ್ನ ಕಣ್ಣು-ಕಿವಿಗಳನ್ನು ತೆರೆದು, ಕಪ್ಪುಹಣವನ್ನು ಬಿಳಿ ಮಾಡುವ ಅಕ್ರಮ ಮಾರ್ಗಗಳನ್ನು ನಿರ್ಬಂಧಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ’’ ಎಂದು ಜಿಯೋಜಿತ್ ಬಿಎನ್‌ಪಿ ಒರಿಬಾಸ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್‌ನ ಉಪಾಧ್ಯಕ್ಷ ಗೌರಂಗ್ ಶಾ ಹೇಳುತ್ತಾರೆ. ‘‘ಅಂತಿಮ ಪರಿಣಾಮ ಏನಾಗುತ್ತದೆ ಎನ್ನುವುದಕ್ಕೆ ನಾವು ಡಿಸೆಂಬರ್ ಕೊನೆಯವರೆಗೂ ಕಾಯಬೇಕಾಗುತ್ತದೆ. ಈ ಕ್ರಮಗಳು ಎಷ್ಟು ಪರಿಣಾಮಕಾರಿ ಎನ್ನುವುದು ಆ ಬಳಿಕ ಗೊತ್ತಾಗಲಿವೆ’’ ಎಂದು ಅವರು ವಿವರಿಸುತ್ತಾರೆ.

share
ಎನ್.ಡಿ.
ಎನ್.ಡಿ.
Next Story
X