ರಶ್ಯದ ಸೈಬರ್ ದಾಳಿ: ‘ತನಿಖೆ’ಗೆ ಒಬಾಮ ಆದೇಶ
ವಾಶಿಂಗ್ಟನ್,ಡಿ.10: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೈಬರ್ ದಾಳಿಗಳು ಹಾಗೂ ವಿದೇಶಿ ಹಸ್ತಕ್ಷೇಪ ನಡೆದಿದೆಯೆಂಬ ಆರೋಪಗಳ ಬಗ್ಗೆ ಸಮಗ್ರ ಪರಾಮರ್ಶೆ ನಡೆಸುವಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಗುಪ್ತಚರ ಸಂಸ್ಥೆಗಳಿಗೆ ಆದೇಶ ನೀಡಿದ್ದಾರೆಂದು ಶ್ವೇತಭವನವು ಶುಕ್ರವಾರ ತಿಳಿಸಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮುನ್ನ ರಶ್ಯವು ಟ್ರಂಪ್ ಎದುರಾಳಿಯಾದ ಹಿಲರಿ ಕ್ಲಿಂಟನ್ ಅವರ ಡೆಮಾಕ್ರಾಟಿಕ್ ಪಕ್ಷದ ಸಂಘಟನೆಗಳ ಮೇಲೆ ಸೈಬರ್ ದಾಳಿ ನಡೆಸಿದೆಯೆಂದು ಅಮೆರಿಕ ಸರಕಾರವು ಕಳೆದ ಅಕ್ಟೋಬರ್‌ನಲ್ಲಿ ಆರೋಪಿಸಿತ್ತು.
Next Story





