ಎಟಿಎಂ ಕಾವಲುಗಾರನ ಹತ್ಯೆ
ಪಟ್ನಾ, ಡಿ.10: ಎಟಿಎಂನಿಂದ ಹಣ ದೋಚಲು ಯತ್ನಿಸಿದ ತಂಡವೊಂದು ಎಟಿಎಂ ಭದ್ರತಾ ಸಿಬ್ಬಂದಿಯನ್ನು ಹರಿತವಾದ ಆಯುಧದಿಂದ ಇರಿದು ಕೊಂದ ಘಟನೆ ಡಾಕ್ಬಂಗ್ಲಾ ಬಳಿಯ ವೌರ್ಯಲೋಕ್ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ವೌರ್ಯಲೋಕ್ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರಕ್ಕೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಎಟಿಎಂ ಯಂತ್ರವನ್ನು ಒಡೆಯಲು ಯತ್ನಿಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಕುಂದನ್ ಕುಮಾರ್ ಎಂಬವರು ಸದ್ದು ಕೇಳಿ ಎಟಿಎಂ ಒಳನುಗ್ಗಿದಾಗ ದುಷ್ಕರ್ಮಿಗಳು ಆಯುಧದಿಂದ ಅವರನ್ನು ಇರಿದು ಕೊಂದಿದ್ದಾರೆ. ಆದರೆ ಹಣ ದೋಚಲು ನಡೆಸಿದ ಯತ್ನ ವಿಫಲವಾದಾಗ ಪರಾರಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮನು ಮಹಾರಾಜ್ ತಿಳಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ದಳವನ್ನು ರಚಿಸಲಾಗಿದೆ. ಬೆರಳಚ್ಚು ತಜ್ಞರು ಸ್ಥಳದಿಂದ ಮಾಹಿತಿ ಕಲೆಹಾಕಿದ್ದಾರೆ ಎಂದವರು ತಿಳಿಸಿದ್ದಾರೆ.





