ಸಿರಿಯ ಯುದ್ಧಕ್ಕೆ ಅಮೆರಿಕದ 200 ಯೋಧರು
ಬಹರೈನ್,ಡಿ.10: ಅಂತರ್ಯುದ್ಧ ಪೀಡಿತ ಸಿರಿಯದಲ್ಲಿ ಐಸಿಸ್‌ನ ಭದ್ರಕೋಟೆಯಾದ ರಖ್ಖಾವನ್ನು ಅರಬ್ ಹಾಗೂ ಖುರ್ದಿಷ್ ಹೋರಾಟಗಾರರು ವಶಪಡಿಸಿಕೊಳ್ಳುವುದಕ್ಕೆ ನೆರವಾಗಲು ಅಮೆರಿಕವು ತನ್ನ ಸುಮಾರು 200 ಮಂದಿ ಸೈನಿಕರನ್ನು ಕಳುಹಿಸಿಕೊಟ್ಟಿದೆಯೆಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಶ್ ಕಾರ್ಟರ್ ತಿಳಿಸಿದ್ದಾರೆ.
ಹೆಚ್ಚುವರಿಯಾಗಿ ಆಗಮಿಸಿರುವ ಯೋಧರಲ್ಲಿ ವಿಶೇಷ ಕಾರ್ಯಾಚರಣೆಗಳ ಪಡೆಗಳ ಸೈನಿಕರೂ ಇದ್ದಾರೆ. ಈಗಾಗಲೇ ಅಮೆರಿಕದಲ್ಲಿ 300 ಮಂದಿ ಅಮೆರಿಕನ್ ಯೋಧರು ನಿಯೋಜಿತರಾಗಿದ್ದು, ಅವರು ಐಸಿಸ್ ವಿರುದ್ಧ ಹೋರಾಡಲು ಸಿರಿಯನ್ ಪಡೆಗಳಿಗೆ ತರಬೇತಿ ಹಾಗೂ ನೆರವನ್ನು ನೀಡುತ್ತಿದ್ದಾರೆ.
Next Story





