ಅಂಚೆ ಅಧಿಕಾರಿಯಿಂದ 65 ಲಕ್ಷ ರೂ. ವಶಕ್ಕೆ
ಹೊಸದಿಲ್ಲಿ, ಡಿ.10: ನೋಟು ಬದಲಾಯಿಸಿಕೊಡುವ ದಂಧೆಯ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಹೈದರಾಬಾದಿನ ಅಂಚೆಕಚೇರಿಯ ಸೀನಿಯರ್ ಸೂಪರಿಂಟೆಂಡೆಂಟ್ ಆಫೀಸರ್ ಬಳಿಯಿಂದ ಹೊಸ 2 ಸಾವಿರ ರೂ. ಮುಖಬೆಲೆಯ 65 ಲಕ್ಷ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದೆ. ಕಳೆದ ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದ ಕೆ.ಸುಧೀರ್ ಬಾಬು ಬಂಧಿತ ಅಧಿಕಾರಿ. ಇವರು 3.75 ಕೋಟಿ ರೂ. ಮೊತ್ತದ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿ ಕೊಟ್ಟಿದ್ದು ಇದಕ್ಕೆ 65 ಲಕ್ಷ ರೂ. ಕಮಿಷನ್ ಪಡೆದಿದ್ದರು ಎಂದು ಸಿಬಿಐ ಹೇಳಿಕೆ ತಿಳಿಸಿದೆ. ಹಣ ಬದಲಾಯಿಸಿಕೊಡುವ ದಂಧೆಗೆ ಸಂಬಂಧಿಸಿ ಇದುವರೆಗೆ ಸಿಬಿಐ ನಾಲ್ವರನ್ನು ಬಂಧಿಸಿದ್ದು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಒಟ್ಟು 92.68 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಸಿಬಿಐ ಮತ್ತು ಭ್ರಷ್ಟಾಚಾರ ನಿಗ್ರಹ ದಳ ನಾಲ್ಕು ಪ್ರತ್ಯೇಕ ದೂರು ದಾಖಲಿಸಿಕೊಂಡಿದೆ.
Next Story





