ಆಲಪ್ಪುಝ ಫೆಡರಲ್ ಬ್ಯಾಂಕ್‌ನಲ್ಲಿ ಬೆಂಕಿ
ಆಲಪ್ಪುಝ, ಡಿ.10: ಕಣ್ಣನ್‌ವರ್ಕಿ ಸೇತುವೆ ಸಮೀಪದ ಫೆಡರಲ್ ಬ್ಯಾಂಕ್‌ಗೆ ಬೆಂಕಿಬಿದ್ದ ಘಟನೆ ವರದಿಯಾಗಿದೆ. ಬೆಳಗ್ಗೆ ಎಂಟೂವರೆಗೆ ಬ್ಯಾಂಕ್ ಶಾಖೆಯಿಂದ ಹೊಗೆ ಏಳುತ್ತಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದರು. ಎಟಿಎಂ ಕಂಟ್ರೋಲ್ ರೂಮ್‌ನಲ್ಲಾದ ಅಗ್ನಿ ಆಕಸ್ಮಿಕ ಬೆಂಕಿ ಹಿಡಿಯಲು ಕಾರಣವೆಂದು ಪ್ರಾಥಮಿಕ ವರದಿ ತಿಳಿಸಿವೆ. ಹತ್ತು ಕಂಪ್ಯೂಟರ್‌ಗಳು ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳು ಮುಂತಾದವು ಸುಟ್ಟು ಹೋಗಿವೆ. ಸ್ಟ್ರಾಂಗ್ ರೂಮ್‌ಗೆ ಯಾವುದೇ ಹಾನಿಯಾಗಿಲ್ಲ. ಹಣ, ಚಿನ್ನಾಭರಣಗಳೆಲ್ಲವೂ ಸುರಕ್ಷಿತವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬೆಂಕಿ ಹಿಡಿಯಲು ಕಾರಣವೇನೆಂದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಬೆಂಕಿ ಆರಿಸುವ ಯತ್ನದಲ್ಲಿ ತೊಡಗಿದ್ದಾರೆಂದು ವರದಿ ತಿಳಿಸಿದೆ.
Next Story





