ದುಬೈಯಲ್ಲಿ ವಿಜ್ರಂಭಿಸಿದ ದಾರುನ್ನೂರ್ ಮೆಹಫಿಲೇ ರಸೂಲ್ ಕಾರ್ಯಕ್ರಮ

ದುಬೈ, ಡಿ.11: ಮೂಡಬಿದ್ರಿ ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ನ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರ್ ಕಲ್ಚರಲ್ ಸೆಂಟರ್ ಯು ಎ ಇ ಇದರ ವತಿಯಿಂದ ಮೀಲಾದ್ ದಿನಾಚರಣೆಯ ಪ್ರಯುಕ್ತ ಮೆಹಫಿಲೇ ರಸೂಲ್ ಕಾರ್ಯಕ್ರಮ ಡಿ.9 ಶುಕ್ರವಾರದಂದು ದೇರಾ ದುಬೈ ಯಲ್ಲಿರುವ ರಾಫಿ ಹೋಟೆಲ್ ಅಡಿಟೋರಿಯಮ್ ನಲ್ಲಿ ನಡೆಯಿತು.
ಉಸ್ತಾದ್ ಶರೀಫ್ ಅಶ್ರಫಿಯವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಿತು. ಉಸ್ತಾದ್ ಅಬ್ದುಲ್ ಖಾದರ್ ಅಸ್ ಅದಿಯವರ ನೇತೃತ್ವದಲ್ಲಿ ಮಜ್ಲಿಸುನ್ನೂರ್ ನಡೆಯಿತು. ಈ ಸಂದರ್ಭ ಮಜ್ಲಿಸಿನಲ್ಲಿ ನೌಫಲ್ ಉಸ್ತಾದ್ ಕಾಸರಗೋಡು, ಅಬ್ದುಲ್ ರಝಾಕ್ ಉಸ್ತಾದ್ ಪಾತೂರು ಮೊದಲಾದವರು ಉಪಸ್ಥಿತರಿದ್ದರು .
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾಬ್ ಸಲೀಂ ಅಲ್ತಾಫ್ ಫರಂಗಿಪೇಟೆ ವಹಿಸಿದ್ದರು. ಸಮಾರಂಭದಲ್ಲಿ ಉಸ್ತಾದ್ ಶೌಕತ್ ಅಲಿ ಹುದವಿಯವರು ಮುಖ್ಯ ಪ್ರಭಾಷಣಗೈದರು.
ವೇದಿಕೆಯಲ್ಲಿ ದಾರುನ್ನೂರ್ ಯುಎಇ ಗೌರವಾಧ್ಯಕ್ಷ ಜನಾಬ್ ಮುಹಮ್ಮದ್ ಮುಸ್ತಾಕ್ ಬಂದರ್, ಅಬ್ದುಲ್ಲಾ ಹಾಜಿ ಮದುಮೂಲೆ, ಬಶೀರ್ ಬಂಟ್ವಾಲ್, ಸಯ್ಯದ್ ಅಸ್ಕರ್ ಅಲಿ ತಂಙಳ್ ಉಪಸ್ಥಿತರಿದ್ದರು.
ಉಸ್ತಾದ್ ಅಬ್ದುಲ್ ಖಾದರ್ ಅಸ್ ಅದಿ, ಉಸ್ತಾದ್ ಯೂಸುಫ್ ಹುದವಿ , ಉಸ್ತಾದ್ ಹಾಶಿಂ ಹುದವಿ ,ಉಸ್ತಾದ್ ಫೈಸಲ್ ಸೀತಾಂಗೋಳಿ, ಜನಾಬ್ ಹಾಜಿ ಮುಹಿಯ್ಯಿದ್ದೀನ್ ಕುಟ್ಟಿ ಕಕ್ಕಿಂಜೆ, ಅಶ್ರಫ್ ಬಾಳೆ ಹೊನ್ನೂರ್,ಅಶ್ರಫ್ ಖಾನ್ ಮಾಂತೂರ್, ತೋಡಾರ್ ಸಂಶುಲ್ ಉಲಮಾ ಅರಬಿಕ್ ಕಾಲೇಜಿನ ಅಧ್ಯಕ್ಷ ಅಬ್ದುಲ್ ಖಾದರ್ ಬೈತಡ್ಕ, ಕಾವು ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಅಧ್ಯಕ್ಷ ಶರೀಫ್ ಕಾವು, ಸಂಶುದ್ದೀನ್ ಕಲ್ಕಾರ್, ಇಬ್ರಾಹಿಂ ಹಾಜಿ ಮಂಡೆ ಕೋಲು, ಉದ್ಯಮಿ ಮತೀನ್ ಮುಹಮ್ಮದ್ ಚಿಲ್ಮೀ, ಮಹಮ್ಮದ್ ರಫೀಕ್ ಆತೂರು ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಜನಾಬ್ ಅಮೀನ್ ವೋರಾ ಬಿಜಾಪುರ, ಗುಜರಾತ್ ರವರ ನಾತೇ ಶರೀಫ್ ಸಭಿಕರನ್ನು ಮೂಕ ವಿಸ್ಮಯಗೊಳಿಸಿತು. ನಾತ್ ಮುಂದುವರಿಯುತ್ತಿದ್ದಂತೆ ಶೈಖುನಾ ಅತ್ತಿ ಪೆಟ್ಟ ಉಸ್ತಾದ್ ರವರು ಅನಿರೀಕ್ಷಿತವಾಗಿ ಸಭೆಗೆ ಹಾಜರಾಗುವುದರೊಂದಿಗೆ ಸಭೆಯು ತಕ್ಬೀರಿನೊಂದಿಗೆ ಉಸ್ತಾದರನ್ನು ಸ್ವಾಗತಿಸಲಾಯಿತು.
ಶೈಖುನಾ ಉಸ್ತಾದ್ ರವರು ಉಪದೇಶ ನೀಡಿ, ದುಆವನ್ನು ನೆರವೇರಿಸಿದರು . ಪ್ರವಾದಿ ಗುಣಗಾನ ಮಾಡುವ ತುಂಬಿದ ಸಭೆಯನ್ನು ನೋಡಿ ಸಂತೋಷವನ್ನು ವ್ಯಕ್ತ ಪಡಿಸಿದರು. ಈ ಸಂದರ್ಭ ಶೈಖುನಾ ರವರನ್ನು ದಾರುನ್ನೂರ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು .ಬಳಿಕ ಉಸ್ತಾದ್ ಅಬ್ದುಲ್ ಖಾದರ್ ಅಸ್ ಅದಿ ಯವರು ಉಸ್ತಾದರ ಬಗ್ಗೆ ಮಾತನಾಡಿ ಉಸ್ತಾದರಿಗಾಗಿ ಎಲ್ಲರೂ ಪ್ರಾರ್ಥಿಸಬೇಕೆಂದು ವಿನಂತಿಸಿದರು.
ಮೆಹಫಿಲೇ ರಸೂಲ್ ಇದರ ಚೇರ್ಮೇನ್ ಮುಹಮ್ಮದ್ ರಫೀಕ್ ಆತೂರು ರವರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು , ಸಭಿಕರನ್ನು ಸ್ವಾಗತಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಬ್ದುಲ್ಲಾಹ್ ಹಾಜಿ ಮದುಮೂಲೆಯವರು ನೆರವೇರಿಸಿ ಮಾತನಾಡಿದ ಅವರು, ದಾರುನ್ನೂರಿನ ಹಾದಿ ನಿಖರವಾಗಿದ್ದು ಭವಿಷ್ಯದಲ್ಲಿ ಕರ್ನಾಟಕದಲ್ಲಿ ಇತಿಹಾಸ ನಿರ್ಮಿಸಬಲ್ಲ ವಿದ್ಯಾಸಂಸ್ಥೆ ಗಳಲ್ಲಿ ಮುಂಚೂಣಿಯಲ್ಲಿ ನಿಲ್ಲಬಹುದಾದ ಸಂಸ್ಥೆಯಾಗಿದೆ. .ಪ್ರವಾದಿಯವರ ಚರ್ಯೆ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಲು ಪ್ರಯತ್ನಿಸಬೇಕೆಂದು ತಿಳಿಸಿದರು.
ಬಳಿಕ ದಾರುನ್ನೂರ್ ಸಂಸ್ಥೆಯನ್ನು ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆಯವರು ಪರಿಚಯಿಸಿದರು.
ದಾರುನ್ನೂರ್ ಅಭ್ಯುದಕ್ಕಾಗಿ ಶ್ರಮಿಸುತ್ತಿರುವ ಹೆಚ್ಚು ಮುತುವರ್ಜಿ ವಹಿಸಿ ಪರಿಶ್ರಮಿಸುತ್ತಿರುವ ಸಫಾ ಇಸ್ಮಾಯೀಲ್ ಬಜ್ಪೆ, ಅಶ್ರಫ್ ಬಾಂಬಿಲ, ಶಂಸುದ್ದೀನ್, ಅಬ್ದುಲ್ ಹಮೀದ್ ಮೂಡುಬಿದಿರೆ, ಮುಹಮ್ಮದ್ ಅಬ್ದುಲ್ ನವಾಝ್ ಮಣಲ್ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಮುಖ್ಯ ಪ್ರಭಾಷಣಗೈದ ಉಸ್ತಾದ್ ಶೌಕತ್ ಅಲಿ ಹುದವಿಯವರು ಪ್ರವಾದಿ ಚರಿತ್ರೆ ಮತ್ತು ಗತಿಸಿ ಹೋದ ಇಸ್ಲಾಮಿನ ಹಲವು ಘಟನೆಗಳನ್ನು ವಿವರಿಸಿದರು.
ಬಳಿಕ ದಾರುನ್ನೂರಿನ ಕಾರ್ಯಕ್ರಮ ಮತ್ತು ಪ್ರಚಾರದಲ್ಲಿ ಹೆಚ್ಚು ಮುತುವರ್ಜಿ ವಹಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಮೀದ್ ಮನಿಲ ಅವರನ್ನು ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ ಮತ್ತು ಮುಖ್ಯ ಪ್ರಭಾಷಕ ಉಸ್ತಾದ್ ಶೌಕತ್ ಅಲಿ ಹುದವಿಯವರು ಶಾಲು ಹೊದಿಸಿ ಸನ್ಮಾನಿಸಿದರು .
ಕಾರ್ಯಕ್ರಮದ ಯಶಸ್ವಿಗಾಗಿ ಮೆಹ ಫಿಲೇ ರಸೂಲ್ ಇದರ ಸ್ವಾಗತ ಸಮಿತಿ ಸದಸ್ಯರಾದ ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್ , ಜನಾಬ್ ನವಾಝ್ ಬಿ.ಸಿ ರೋಡ್, ಜನಾಬ್ ಇಲ್ಯಾಸ್ ಕಡಬ, ಜನಾಬ್ ಸಜ್ಜಾದ್ ಮೂಡಬಿದ್ರಿ, ಜನಾಬ್ ನಾಸಿರ್ ಬಪ್ಪಳಿಗೆ, ಜನಾಬ್ ಅನ್ಸಾಫ್ ಪಾತೂರ್, ಜನಾಬ್ ಅಬ್ದುಲ್ ರಹ್ಮಾನ್ ಬಾಳಿಯೂರ್ , ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ , ಜನಾಬ್ ಶಾಕಿರ್ ಕುಪ್ಪೆ ಪದವು ಮೊದಲಾದವರು ಸಹಕರಿಸಿದರು.
ಮಹಿಳೆಯರಿಗಾಗಿ ಪ್ರತ್ಯೇಕ ಕೊಠಡಿ ಮತ್ತು ಪ್ರಾಜೆಕ್ಟ್ ಸೌಲಭ್ಯದ ವ್ಯವಸ್ಥೆ ಮಾಡಲಾಗಿತ್ತು . ಮಕ್ಕಳ ಬಗ್ಗೆ ಜಾಗರೂಕತೆ ವಹಿಸಲು ಅಲ್ಲಲ್ಲಿ ಭಿತ್ತಿ ಪತ್ರ ಅಂಟಿಸಲಾಗಿತ್ತು. ಸಮೀರ್ ಇಬ್ರಾಹಿಂ ಛಾಯಾ ಗ್ರಾಹಕರಾಗಿ ಸಹಕರಿಸಿದರು.
ಬದ್ರುದ್ದೀನ್ ಹೆಂತಾರ್, ಅಬ್ದುಲ್ ರಝಾಕ್ ಕಾರಾಯಿ, ನಾಸಿರ್ ಮಂಗಿಲ ಪದವು, ಅಶ್ರಫ್ ಪರ್ಲಡ್ಕ ಮೊದಲಾದವರು ಕಾರ್ಯಕ್ರಮವನ್ನು ಚೊಕ್ಕಟವಾಗಿ ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮೆಹಫಿಲೇ ರಸೂಲ್ ಇದರ ಕಾರ್ಯದರ್ಶಿ ನಾಸಿರ್ ಮಂಗಿಲ ಪದವುರವರು ವಂದನಾರ್ಪಣೆ ಗೈದರು. ಉಸ್ತಾದ್ ಯೂಸುಫ್ ಹುದವಿಯವರ ದುಆ ದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
http://www.varthabharati.in/admin/structure/nodequeue






