ನಿಂತಿದ್ದ ಕ್ರೂಸರ್‌ಗೆ ಲಾರಿ ಢಿಕ್ಕಿ, ಐವರು ಸ್ಥಳದಲ್ಲಿ ಸಾವು

ಬಾಗಲಕೋಟೆ, ಡಿ.11: ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ಬಳಿ ನಿಂತಿದ್ದ ಕ್ರೂಸರ್‌ಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಏಳು ಜನರಿಗೆ ಗಂಭೀರ ಗಾಯವಾಗಿದ್ದು, ಬಾದಾಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾದಿಗ ಸಮಾವೇಶದಲ್ಲಿ ಭಾಗವಹಿಸಲು ಕ್ರೂಸರ್‌ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತ ನಡೆದ ತಕ್ಷಣ ಚಾಲಕ ಲಾರಿ ಬಿಟ್ಟು ಪರಾಗಿಯಾಗಿದ್ದಾನೆ.
ಅಪಘಾತಕ್ಕೆ ತುತ್ತಾದವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ನಿವಾಸಿಗಳಾಗಿದ್ದಾರೆ.
Next Story





