ಜಯಲಲಿತಾ ಸೋದರ ಸೊಸೆ ದೀಪಾ ಜಯಕುಮಾರ್ ರಾಜಯಕೀಯಕ್ಕೆ?

ಹೊಸದಿಲ್ಲಿ, ಡಿ. 11: ಇತ್ತೀಚೆಗೆ ನಿಧನರಾದ ತಮಿಳ್ನಾಡು ಮುಖ್ಯಮಂತ್ರಿ ಜೆ.ಜಯಲಲಿತಾರ ನಿಕಟವರ್ತಿ ಶಶಿಕಲಾರಿಗೆ ಪಕ್ಷದ ಚುಕ್ಕಾಣಿ ನೀಡಲು ಐಎಡಿಎಂಕೆಯ ಸಚಿವರು ನಿರ್ಧರಿಸುವುದನ್ನು ಪ್ರಶ್ನಿಸಿ ಜಯಲಲಿತಾ ಸೋದರ ಸೊಸೆ ದೀಪಾಜಯಕುಮಾರ್ ರಾಜಕೀಯ ಪ್ರವೇಶಿಸಲು ನಿರ್ಧರಿಸಿರುವುದಾಗಿ ವರದಿಯಾಗಿದೆ. ಶಶಿಕಲಾರಿಗೆ ಪಕ್ಷದ ಚುಕ್ಕಾಣಿ ವಹಿಸಿದ್ದನ್ನು ದೀಪಾ ಜಯಕುಮಾರ್ ದೌರ್ಭಾಗ್ಯಪೂರ್ಣವೆಂದು ಬಣ್ಣಿಸಿದ್ದಾರೆ. ದೀಪಾ ಜಯಲಲಿತಾ ಸಹೋದರ ಜಯಕುಮಾರ್‌ರ ಪುತ್ರಿಯಾಗಿದ್ದಾರೆ.
ಶಶಿಕಲಾರಿಗೆ ಪಾರ್ಟಿಯ ಚುಕ್ಕಾಣಿ ನೀಡಿದ್ದು ಜನರೆಡೆಯಲ್ಲಿ ಆಕ್ರೋಶಕ್ಕೆ ಕಾರಣವಾಗಲಿದೆ. ಇದಕ್ಕೆ ಜನರು ಖಂಡಿತಾ ಪ್ರೋತ್ಸಾಹ ನೀಡಲಾರರು ಎಂದು ದೀಪಾ ಹೇಳಿದ್ದಾರೆ. ನೀವು ರಾಜಕೀಯ ಪ್ರವೇಶಿಸುವಿರಾ ಎಂಬ ಪ್ರಶ್ನೆಯನ್ನು ಕೇಳಲಾದಾಗ ರಾಜಕೀಯ ಪ್ರವೇಶಿಸುವುದು ತಪ್ಪೇನಲ್ಲ ಎಂದು ಉತ್ತರಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ನಾಯಕತ್ವದ ವಿಚಾರವನ್ನು ಜನರಿಗೆ ಬಿಟ್ಟು ಬಿಡಬೇಕು. ಪಾರ್ಟಿ ಅವರು ಹೇಳುವುದನ್ನು ಆಲಿಸಬೇಕು ಎಂದು ದೀಪಾ ಅಭಿಪ್ರಾಯ ಪಟ್ಟಿದ್ದಾರೆ. ಜಯಲಲಿತಾ ನಿಧನರಾಗುವ ಮೊದಲು ತನ್ನ ಉತ್ತರಾಧಿಕಾರಿಯಾಗಿ ಶಶಿಕಲಾರನ್ನು ಗೊತ್ತುಪಡಿಸಿರಬಹುದೇ ಎಂದು ಕೇಳಿದಾಗ ಅದನ್ನು ದೀಪಾ ನಿರಾಕರಿಸಿದ್ದಾರೆ. ತನ್ನ ಸೋದರತ್ತೆ ಅವರನ್ನೆಲ್ಲ ರಾಜಕೀಯದಿಂದ ಹೊರಗಿಡಲು ಬಯಸಿದ್ದರು. ನಾನು ಇನ್‌ಸೈಡರ್ ಆಗಿದ್ದೆ. ಜಯಲಲಿತಾರಿಗೆ ಶಶಿಕಲಾರಲ್ಲಿ ಬಹಳ ಸಂದೇಹವಿತ್ತು. ತನ್ನ ಸೋದರತ್ತೆ ಹಿಂದಿನಿಂದ ಮಾಡಿದ ಯಾವ ಕೆಲಸವು ಶಶಿಕಲಾರಿಗೆ ಹೇಳಿಲ್ಲ ಎಂದು ದೀಪಾ ಹೇಳಿದ್ದಾರೆ. ಶಶಿಕಲಾ ಜಯಲಲಿತಾರ ನಿಕಟವರ್ತಿಯಾಗಿದ್ದು ಅವರ ನಿಧನಾನಂತರ ಶಶಿಕಲಾರಿಗೆ ಪಾರ್ಟಿಯ ಚುಕ್ಕಾಣಿ ವಹಿಸಿಕೊಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ ಎಂದು ವರದಿ ತಿಳಿಸಿದೆ.







